
ಬೀರುಟ್(ಅ.29): ಐಸಿಸ್ ಮುಖ್ಯಸ್ಥ ಅಬುಲ್ ಅಲ್ ಬಾಗ್ದಾದಿಯನ್ನು ಅಮೆರಿಕ-ಖುರ್ದಿಷ್ ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದೆ. ಈ ಮೂಲಕ ಜಗತ್ತಿನ ಅತ್ಯಂತ ಕ್ರೂರ ಉಗ್ರ ಸಂಘಟನೆಯ ಮುಖ್ಯಸ್ಥ ನರಕಕ್ಕೆ ಪ್ರಯಾಣ ಬೆಳೆಸಿದ್ದಾನೆ.
ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ
ಅಮೆರಿಕ-ಖುರ್ದಿಷ್ ಸೇನೆಯ ಸತತ ಪ್ರಯತ್ನದ ಬಳಿಕ ಬಾಗ್ದಾದಿಯನ್ನು ಕೊಲ್ಲಲಾಗಿದೆ. ಉತ್ತರ ಸಿರಿಯಾದ ಅಡಗುತಾಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಬಾಗ್ದಾದಿಯನ್ನು ಪತ್ತೆ ಹಚ್ಚಿ ಆತನನ್ನು ಇನ್ನಿಲ್ಲವಾಗಿಸಲಾಗಿದೆ. ಅಮೆರಿಕ ಸೇನೆ ಈಗಾಗಲೇ ಬಾಗ್ದಾದಿ ಶವದ ಅಂತ್ಯಸಂಸ್ಕಾರವನ್ನು ಸಮುದ್ರದಲ್ಲಿ ಮಾಡಿದೆ.
ಈ ಮಧ್ಯೆ ಬಾಗ್ದಾದಿ ಹತನಾದ ಬಳಿಕ ಸಿರಿಯಾದ ಗುಪ್ತಚರ ಏಜೆಂಟ್‌ವೋರ್ವ ಆತನ ಒಳ ಉಡುಪನ್ನು ಡಿಎನ್‌ಎ ಪರೀಕ್ಷೆಗಾಗಿ ಕೊಂಡೊಯ್ದಿದ್ದಾನೆ ಎನ್ನಲಾಗಿದೆ. ಬಾಗ್ದಾದಿ ಪತ್ತೆಗೆ ನೆರವಾಗಿದ್ದ ಈ ಗುಪ್ತಚರ ಅಧಿಕಾರಿ, ಬಾಗ್ದಾದಿ ಹತನಾದ ಮನೆಯಿಂದ ಆತನ ಒಂದು ಜೋಡಿ ಅಂಡರ್‌ವೇರ್ ಕೊಂಡೊಯ್ದಿದ್ದಾನೆ.
ಈ ಕುರಿತು ಖುದ್ದು ಮಾಹಿತಿ ನೀಡಿರುವ ಖುರ್ದಿಷ್ ಸೇನೆಯ ಹಿರಿಯ ಸಲಹೆಗಾರ ಪೊಲಾಟ್ ಕ್ಯಾನ್, ಸತ್ತಿರುವ ವ್ಯಕ್ತಿ ಬಾಗ್ದಾದಿಯೇ ಎಂದು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ಅವಶ್ಯಕ ಎಂದು ಹೇಳಿದ್ದಾರೆ.
ಕಳೆದ ಮೇ.ದಿಂದಲೇ ಬಾಗ್ದಾದಿ ಅಡಗುತಾಣಗಳ ಮೇಲೆ ನಿಗಾ ಇರಿಸಿದ್ದ ಸಿರಿಯನ್ ಖುರ್ದಿಷ್ ಏಜೆಂಟರು, ಪ್ರತಿ ಕ್ಷಣದ ಮಾಹಿತಿಯನ್ನು ಅಮೆರಿಕದ ಸಿಐಎದೊಂದಿಗೆ ಹಂಚಿಕೊಂಡಿತ್ತು ಎಂದು ಹೇಳಲಾಗಿದೆ.
ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!
ಖುರ್ದಿಷ್ ನೆಲೆಗಳ ಮೇಲೆ ಟರ್ಕಿ ದಾಳಿ ಬಳಿಕವೂ ಬಗ್ಗದ ಖುರ್ದಿಷ್ ಹೋರಾಟಗಾರರು, ಬಾಗ್ದಾದಿ ಪತ್ತೆಗೆ ಶ್ರಮಿಸಿರುವ ಪರಿಣಾಮವಾಗಿಯೇ ಜಗತ್ತಿನ ಮೋಸ್ಟ್ ವಾಂಟೇಡ್ ಉಗ್ರನನ್ನು ಪತ್ತೆ ಹಚ್ಚಿ ಕೊಲ್ಲಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.