
ಮುಂಬೈ: ಪದ್ಮಾವತ್ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗಲೇ, ಚಿತ್ರದ ಬಗ್ಗೆ ನಟಿ ಸ್ವರಾ ಭಾಸ್ಕರ್ ಖಾರವಾದ ಬಹಿರಂಗ ಪತ್ರ ಬರೆದಿದ್ದಾರೆ.
ಚಿತ್ರವನ್ನು ನೋಡಿದಾಗ ಅನ್ನಿಸಿದ್ದು, ಅಂತಿಮವಾಗಿ ಹೆಣ್ಣನ್ನು ಕೇವಲ ಯೋನಿಗೆ ಸೀಮಿತ ಗೊಳಿಸಲಾಗಿದೆ ಎಂಬುದಷ್ಟೇ. ಪದ್ಮಾವತ್ ಚಿತ್ರವು, ವಿಧವೆ, ಅತ್ಯಾಚಾರಕ್ಕೊಳಗಾದ ಮಹಿಳೆ, ಯುವ ಮಹಿಳೆ, ವೃದ್ಧ ಮಹಿಳೆ ಬದುಕುವ ಹಕ್ಕು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಪ್ರಶ್ನಿಸುವಂತಿದೆ.
ನಿತ್ಯ ನಾವು ಮಹಿಳಾ ಸಬಲೀಕರಣದ ಹಲವು ಉದಾಹರಣೆ ನೋಡುತ್ತೇವೆ. ಆದರೆ ಪದ್ಮಾವತ್ ನಲ್ಲಿ ನಾಯಕಿ ದೀಪಿಕಾ ಸೇರಿ ಸೇರಿ ಹಲವು ಮಹಿಳೆ ಯರು, ಶತ್ರು ಗಳು ದೇಶದ ಮೇಲೆ ದಾಳಿ ನಡೆಸಿ, ರಾಜವಂಶದ ಪುರುಷರನ್ನು ಹತ್ಯೆ ಮಾಡಲು ಮುಂದಾದಾಗ, ತಾವು ಪರ ಪುರುಷರ ತೆಕ್ಕೆಗೆ ಸೇರುವುದನ್ನು ತಪ್ಪಿಸಿಕೊಳ್ಳಲು ಬೆಂಕಿಗೆ ಹಾರುತ್ತಾರೆ. ಹೀಗೆ ಸತಿ ಪದ್ಧತಿ ಪೊತ್ಸಾಹಿಸುವುದು ಆಘಾತಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Chat conversation end Type a message...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.