ಶ್ರೀಮಂತ ಸಂಸದರಿಗೇಕೆ ವೇತನ..?

By Suvarna Web DeskFirst Published Jan 29, 2018, 9:12 AM IST
Highlights

ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದರಿಂದ ಶ್ರೀಮಂತ ಸಂಸದರು ತಮ್ಮ ವೇತನ ತ್ಯಜಿಸಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಪ್ರತಿಪಾದಿಸಿದ್ದಾರೆ.

ನವದೆಹಲಿ: ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದರಿಂದ ಶ್ರೀಮಂತ ಸಂಸದರು ತಮ್ಮ ವೇತನ ತ್ಯಜಿಸಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಪ್ರತಿಪಾದಿಸಿದ್ದಾರೆ.

ಸಂಸದರು ಶೇ.100ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ 16ನೇ ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ತಮ್ಮ ವೇತನವನ್ನು ಬಿಟ್ಟುಕೊಡುವ ಅಭಿಯಾನವನ್ನು ಆರಂಭಿಸಬೇಕು ಎಂದು ಸ್ಪೀಕರ್ ಅವರಲ್ಲಿ ನಾನು ಮನವಿ ಮಾಡುತ್ತೇನೆ’ ಎಂದು ವರುಣ್‌ಗಾಂಧಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದಿದ್ದಾರೆ.

ಭಾರತದಲ್ಲಿ ಆರ್ಥಿಕ ಅಸಮಾನತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶೇ.1ರಷ್ಟು ಮಂದಿ ಶೇ.70ರಷ್ಟು ಸಂಪತ್ತನ್ನು ಹೊಂದಿದ್ದಾರೆ.

ಆದರೆ, 1930ರಲ್ಲಿ ಶೇ.21ರಷ್ಟು ಶ್ರೀಮಂತರು ಇಷ್ಟು ಸಂಪತ್ತನ್ನು ಹೊಂದಿದ್ದರು ಎಂದು ವರುಣ್ ಗಾಂಧಿಹೇಳಿದ್ದಾರೆ.

click me!