ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸುರೇಶ್ ರೈನಾ ಅವರ ಐಪಿಎಲ್ ಪ್ರದರ್ಶನ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ರೈನಾ ಐಪಿಎಲ್ ಟೂರ್ನಿಯಿಂದ ಔಟ್ ಆಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಭಾರಿ ಸದ್ದು ಮಾಡುತ್ತಿದ್ದು, ಇದೀಗ ರಾಜಕಾರಣಿಯ ಪುತ್ರನಿಗೂ ಲಿಂಕ್ ಇರುವ ಮಾಹಿತಿ ಬಯಲಾಗಿದೆ. ಉದ್ಯಮಿ ಅನಿಲ್ ಅಂಬಾನಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಶಾಲಾ ಶುಲ್ಕದ ಕುರಿತ ಹೈಕೋರ್ಟ್ ಆದೇಶ, ಜಪಾನ್ ಪ್ರಧಾನಿ ರಾಜೀನಾಮೆ ಸೇರಿದಂತೆ ಆಗಸ್ಟ್ 29 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮಾದಕ ಲೋಕದ ಸೀಕ್ರೆಟ್ ರಿವೀಲ್, ರಾಜಕಾರಣಿ ಮಗನಿಗೂ ಡ್ರಗ್ಸ್ ಲಿಂಕ್?...
undefined
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಂಧಿಸಿದಂತೆ ದೊಡ್ಡ ದೊಡ್ಡ ರಹಸ್ಯಗಳು ಬಹಿರಂಗವಾಗತೊಡಗಿವೆ. ಸದ್ಯ ರಾಜಕಾರಣಿ ಮಗನಿಗೂ ಡ್ರಗ್ಸ್ ಲಿಂಕ್ ಇರುವ ಅನುಮಾನ ವ್ಯಕ್ತವಾಗಿದೆ.
ಭಾರತದ ‘ಮಿತ್ರ’ ಜಪಾನ್ ಪ್ರಧಾನಿ ಅಬೆ ರಾಜೀನಾಮೆ!...
ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿರುವ, ಅತ್ಯಂತ ಸುದೀರ್ಘ ಅವಧಿಗೆ ಜಪಾನ್ ಪ್ರಧಾನಿಯಾಗಿರುವ ಶಿಂಜೋ ಅಬೆ ಅವರು ಹಠಾತ್ ಬೆಳವಣಿಗೆಯೊಂದರಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜೀರ್ಣಾಂಗ ವ್ಯವಸ್ಥೆಯ ಅಲ್ಸರ್ ಸಮಸ್ಯೆಯನ್ನು ಬಾಲ್ಯದಿಂದಲೂ ಅವರು ಎದುರಿಸುತ್ತಿದ್ದಾರೆ. ಸದ್ಯ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆಯಾದರೂ, ಸಂಪೂರ್ಣ ಗುಣಮುಖವಾಗುವ ಖಾತ್ರಿ ಇಲ್ಲ.
ಝೂಮ್ ಮೀಟಿಂಗ್ ವೇಳೆ ಕಾರ್ಯದರ್ಶಿಯೊಂದಿಗೆ ಸರ್ಕಾರಿ ಅಧಿಕಾರಿ ರಾಸಲೀಲೆ!...
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಝೂಮ್ ಆ್ಯಪ್ ಹೆಚ್ಚಾಗಿ ಬಳಕೆ ಆಗುತ್ತಿದೆ. ಆದರೆ, ಕೆಲವರು ಸಭೆಯ ಬಳಿಕ ಕ್ಯಾಮೆರಾ ಆಫ್ ಮಾಡಲು ಮರೆತು ಎಡವಟ್ಟು ಮಾಡಿಕೊಳ್ಳುತ್ತಾರೆ.
CSK ಗೆ ಬಿಗ್ ಶಾಕ್: IPL 2020 ಸಂಪೂರ್ಣ ಟೂರ್ನಿಯಿಂದ ಸುರೇಶ್ ರೈನಾ ಔಟ್..!
ದುಬೈ: ನಿನ್ನೆಯಷ್ಟೇ ಕೊರೋನಾ ಸೋಂಕಿನಿಂದ ಬೆಚ್ಚಿ ಬಿದ್ದಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
ರಚಿತಾ ರಾಮ್ ಡ್ರಗ್ಸ್ ಸೇವಿಸ್ತಾರಾ? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್...
ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ನಟಿ ರಚಿತಾ ರಾಮ್ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಫೋನು ಹೀಗಿರಬೇಕು ಅಂತನ್ನಿಸಿದರೆ ತಪ್ಪೇನಿಲ್ಲ ಬಿಡಿ; ಸ್ಯಾಮ್ಸಂಗ್ ಗೆಲಾಕ್ಸಿ ಎಂ31 ಎಸ್!...
ಸ್ಯಾಮ್ಸಂಗ್ ಸದ್ಯಕ್ಕೆ ಅನ್‌ಸಂಗ್ ಹೀರೋ! ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮಾಡೆಲುಗಳ ಭರಾಟೆಯಲ್ಲಿ ಸ್ಯಾಮ್ಸಂಗು ಕೂಡ ನೋಕಿಯಾದಷ್ಟೇ ಅಪರೂಪ ಆದಂತಿದೆ. ವನ್‌ಪ್ಲಸ್, ವಿವೋ, ಶಿಯೋಮಿ- ಮುಂತಾದ ಬ್ರಾಂಡುಗಳು ಮಾಡುತ್ತಿರುವ ಸದ್ದಿನ ಮುಂದೆ ಸ್ಯಾಮ್ಸಂಗು ಕೊಂಚ ಮಂಕಾಗಿದ್ದೂ ನಿಜವೇ.
ಸಾಲದಲ್ಲಿ ಮುಳುಗಿದ ಅನಿಲ್ ಅಂಬಾನಿ ಬಂಗಲೆ ಇದು, ಮಾರಿದ್ರೆ ಸಿಗುತ್ತೆ 5 ಸಾವಿರ ಕೋಟಿ!
ದೀರ್ಘ ಕಾಲದಿಂದ ಸಾಲದಲ್ಲಿ ಮುಳುಗಿರುವ ಅನಿಲ್ ಅಂಬಾನಿ ತನ್ನ ಕಂಪನಿಗಳನ್ನು ಮಾರಿದ್ದಾರೆ. Yes Bank ಸಾಲ ಪವತಿಸದ ಕಾರಣ ರಿಲಯನ್ಸ್ ಗ್ರೂಪ್‌ನ ಸಾಂತಾಕ್ರೂಜ್‌ನಲ್ಲಿರುವ ಮುಖ್ಯ ಕಚೇರಿಯನ್ನು ವಶಪಡಿಸಿಕೊಂಡಿದೆ. ಇನ್ನು ಅವರು ಬ್ಯಾಂಕ್ ಸಾಲ ತೀರಿಸದಿದ್ದಲ್ಲಿ, ಅವರ ಉಳಿದ ಆಸ್ತಿಯೂ ಸೀಜ್ ಆಗುವ ಸಾಧ್ಯತೆಗಳಿವೆ. ಇವರ ವಿರುದ್ಧ ಒಟ್ಟು 3.2 ಮಿಲಿಯನ್ ಡಾಲರ್ ಅಂದರೆ 22000 ಕೋಟಿ ರೂ. ಸಾಲವಿದೆ. ಇದರಲ್ಲಿ ಕೊಂಚ ಮೊತ್ತ ಅವರು ಈಗಾಗಲೇ ಪಾವತಿಸಿದ್ದಾರೆ. ಇನ್ನು ಸಾಲದಿಂದ ಮುಕ್ತರಾಗಲು ಅವರು ತಮ್ಮ ಮನೆಯನ್ನು ಮಾರಿದರೂ ಐದು ಸಾವಿರ ಕೋಟಿ ಸಿಗಲಿದೆ.
ದಶಕಗಳ ಕನಸು ನನಸು, ಯಶಸ್ವಿಯಾಗಿ ಹಾರಾಟ ನಡೆಸಿದ ಹಾರುವ ಕಾರು!...
ತಂತ್ರಜ್ಞಾನ, ಆಧುನಿಕತೆ ಬದುಕಿನಲ್ಲಿ ಕಳೆದೊಂದು ದಶಕಗಳಿಂದ ಸಾರಿಗೆ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಹಾರುವ ಕಾರು ಕುರಿತು ಸಂಶೋಧನೆಗಳಾಗುತ್ತಿದೆ. ಕಳೆದೊಂದು ದಶಕದಿಂದ ನಡೆಯುತ್ತಿದ್ದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಹಾರುವ ಕಾರು ಪ್ರಾಯೋಗಿಕ ಹಂತದ ಹಾರಾಟ ಯಸಸ್ವಿಯಾಗಿದೆ.
ಡ್ರಗ್ಸ್ ಮಾಫಿಯಾ: ಇಂದ್ರಜಿತ್ ಆರೋಪಕ್ಕೆ ಕಾರುಣ್ಯಾ ರಾಮ್ ಪ್ರತಿಕ್ರಿಯೆಯಿದು..!...
ಕಳೆದ ಎರಡು ದಿನಗಳಿಂದ ಡ್ರಗ್ ಮಾಫಿಯಾ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಜಾಲದ ಹಿಂದೆ ಸ್ಯಾಂಡಲ್‌ವುಡ್ ನಟ-ನಟಿಯರಿದ್ದಾರೆ, ಸಂಗೀತ ನಿರ್ದೇಶಕರಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದು ಕಡೆ ಇಂದ್ರಜಿತ್ ಲಂಕೇಶ್ ಹೇಳಿಕೆ ಸಂಚಲನ ಮೂಡಿಸಿದೆ. ದೊಡ್ಡ ಸ್ಟಾರ್ ನಟನ ಪುತ್ರ ಡ್ರಗ್ ವ್ಯಸನಿ. ನಟಿಯರು ಡ್ರಗ್ಸ್ ಸೇವಿಸಿ ಕ್ಯಾರವಾನ್‌ಗೆ ಬರುತ್ತಾರೆ ಎಂಬ ಆರೋಪ ಮಾಡಿದ್ದು, ಈ ಆರೋಪಕ್ಕೆ ನಟಿ ಕಾರುಣ್ಯ ರಾಮ್ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಶಾಲೆಗಳು ವಿಧಿಸುವ ಶುಲ್ಕದ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಕೋರ್ಟ್...!...
ಕೊರೋನಾ ವೈರಸ್‌ನಿಂದಾಗಿ ಮಾರುಕಟ್ಟೆಯ ಕುಸಿತದಿಂದಾಗಿ ಅನೇಕ ದೊಡ್ಡ ಮತ್ತು ಸಣ್ಣ ಉದ್ಯಮಗಳು ಮುಚ್ಚುವ ಅಂಚಿಗೆ ಬಂದಿವೆ. ಈ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಿಕ್ಷಣ ದುಬಾರಿಯಾಗಿದ್ದು, ಇಲ್ಲಿನ ಅನೇಕ ಖಾಸಗಿ ಶಾಲೆಗಳು ಶುಲ್ಕದಲ್ಲಿ ಶೇ. 50 ರಷ್ಟು ಹೆಚ್ಚಳಕ್ಕೆ ಘೋಷಿಸಿವೆ. ಇದರಿಂದ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.