ಕೊರೋನಾ ಆತಂಕದಲ್ಲಿ ಸಚಿವೆ ಶಶಿಕಲಾ ಜೊಲ್ಲೆ

By Suvarna NewsFirst Published Aug 29, 2020, 4:53 PM IST
Highlights

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೋನಾ ಭೀತಿ ಶುರುವಾಗಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಬೆಳಗಾವಿ, (ಆ.29): ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಇದ್ದ ಕಾರಣಕ್ಕೆ ಮುಂಜಾಗ್ರತಾವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ. 

ಈ ಬಗ್ಗೆ ಸ್ವತಃ ಅವರೇ ಸಾಮಾಜಿ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ನಾನು ಕೂಡಾ ಕೊವಿಡ್ ಟೆಸ್ಟ್‌ಗೆ ಒಳಪಟ್ಟಿದ್ದು, ಮುಂದಿನ ವರದಿಯ ವರೆಗೂ ಕ್ವಾರಂಟೈನ್ ಆಗಲಿದ್ದೇನೆ ಎಂದು ತಿಳಿಸಿದ್ದಾರೆ.

ವಿಜಯಪುರ: ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಲೋಪವಾಗದಿರಲಿ, ಸಚಿವೆ ಜೊಲ್ಲೆ

ನನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೋನಾ ಪಾಸಿಟಿವ್ ಆಗಿರುವುದರಿಂದ ನಾನು ಕೂಡಾ ಕೊವಿಡ್ ಟೆಸ್ಟ್ ಗೆ ಒಳಪಟ್ಟಿದ್ದು, ಮುಂದಿನ ವರದಿಯ ವರೆಗೂ ಕ್ವಾರೆಂಟೇನ್ ಆಗಲಿದ್ದೇನೆ.

Posted by Shashikala Jolle on Saturday, August 29, 2020

 ಆದ್ರೆ, ಕೊರೋನಾ ಪಾಸಿಟಿವ್ ಬಂದ ವ್ಯಕ್ತ ಯಾರು, ಏನು ಎನ್ನುವುದನ್ನು ಮಾತ್ರ ಹೇಳಿಕೊಂಡಿಲ್ಲ. ಆದ್ರೆ, ಅವರಿಗೆ ಕೊರೋನಾ ಭೀತಿ ಶುರುವಾಗಿದ್ದು, ವರದಿಗಾಗಿ ಕಾಯುತ್ತಿದ್ದಾರೆ. 

ಇನ್ನು ಗಡಿ ಜಿಲ್ಲೆಯ ಬೆಳಗಾವಿಯ ನಿಪ್ಪಾಣಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ  ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ ಅವರ ಪರಿಶ್ರಮ ನೂತನ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಯುಷ್ಮಾನ್ ಭಾರತ್, ಸುವರ್ಣ ಕರ್ನಾಟಕ, ಜೊಲ್ಲೆ ಉದ್ಯೋಹ ಸಮೂಹ ಸಹಯೋಗದಲ್ಲಿ ನೂತನ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.
click me!