POK ಮೇಲೆ ಪಾಕ್‌ಗಿಲ್ಲ ಹಕ್ಕು; ಕೇಂದ್ರದ ನಿಲುವಿಗೆ ತರೂರ್ ಸಪೋರ್ಟು!

By Web DeskFirst Published Sep 21, 2019, 7:53 PM IST
Highlights

ಬಾಲಾಕೋಟ್ ದಾಳಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತು ಕೇಂದ್ರ ನಿರ್ಧಾರ ಹಾಗೂ ನಿಲುವಿಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ವಿಚಾರಗಳಲ್ಲಿ ಕೇಂದ್ರ ಅತೀ ದೊಡ್ಡ ತಪ್ಪು ಮಾಡಿದೆ ಎಂದು ಟೀಕಿಸಿದ್ದಾರೆ.

ನವದೆಹಲಿ(ಸೆ.21): ಪಾಕಿಸ್ತಾನ ಆಕ್ರಮಿತ ಕಾಶ್ಮೀರ(POK) ಭಾರತದ ಅವಿಭಾಜ್ಯ ಅಂಗ. ಈ ಪ್ರದೇಶದ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಆದರೆ ಪಾಕ್ ಚೀನಾಗೆ POK ಮೇಲಿನ ಹಕ್ಕು ನೀಡಿದೆ. POK ಕುರಿತ ಮೋದಿ ಸರ್ಕಾರದ ನಿಲುವುಗೆ ಬಾಹ್ಯ ಬೆಂಬಲ ನೀಡುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಇದನ್ನೂ ಓದಿ: ಹೌಡಿ ಮೋದಿ ವ್ಯಂಗ್ಯವಾಡಿದ ರಾಹುಲ್: ಗೌರವ ಇರಲಿ ಎಂದ ತರೂರ್

ಆಲ್ ಇಂಡಿಯಾ ಪ್ರೋಫೆಶನಲ್ ಕಾಂಗ್ರೆಸ್ ಆಯೋಜಿಸಿದ್ದ ಇಂಡಿಯಾ ಇನ್ ಕ್ರೈಸಿಸ್ ಕುರಿತು ಸಮಾರಂಭಲ್ಲಿ ಶಶಿ ತರೂರ್ ಜಮ್ಮ ಮತ್ತು ಕಾಶ್ಮೀರ ಹಾಗೂ ಕೇಂದ್ರ ಸರ್ಕಾರದ ನಿಲುವಿನ ಕುರಿತು ಮಾತನಾಡಿದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಆದರೆ ಪಾಕ್ ಚೀನಾಗೆ ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ನಾಯಕನಾಗಿ ಕೇಂದ್ರದ ಕೆಲ ನಿರ್ಧಾಗಳನ್ನು ವಿರೋಧಿಸುತ್ತೇನೆ. ಆದರೆ POK ಕುರಿತು ಮೋದಿ ಸರ್ಕಾರದ ನಿಲುವನ್ನು ಬೆಂಬಲಿಸುತ್ತೇನೆ ಎಂದು ತರೂರ್ ಹೇಳಿದ್ದಾರೆ.

ಇದನ್ನೂ ಓದಿ: '370ನೇ ವಿಧಿ ಶಾಶ್ವತವಾಗಿಡಲು ನೆಹರೂ ಕೂಡಾ ಬಯಸಿರಲಿಲ್ಲ!'

ಜಮ್ಮು ಮತ್ತು  ಕಾಶ್ಮೀರ ಮೇಲಿನ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಕುರಿತು ಯಾವುದೇ ತಕರಾರಿಲ್ಲ. ಆದರೆ ರದ್ದು ಮಾಡಿದ ರೀತಿ ಸರಿಯಾಗಿಲ್ಲ ಎಂದು ತರೂರ್ ಹೇಳಿದ್ದಾರೆ. ಆರ್ಟಿಕಲ್ 370 ರದ್ದು ಮಾಡುವಾಗ ಸಂವಿಧಾನ ಉಲ್ಲಂಘಿಸಿದ್ದಾರೆ. ಕಾಶ್ಮೀರ ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ನಾಯಕರನ್ನು ಗೃಹಬಂಧನಲ್ಲಿ ಇರಿಸಲಾಗಿದೆ. ಫೋನ್ ಕಟ್ ಮಾಡಲಾಗಿತ್ತು. ಈ ಮೂಲಕ ಕಾಶ್ಮೀರಿಗರ ಹಕ್ಕನ್ನೇ ಕಸಿದುಕೊಳ್ಳಲಾಗಿತ್ತು ಎಂದು ತರೂರ್ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಹೊಗಳಿದ ತರೂರ್‌ಗೆ ಕಾಂಗ್ರೆಸ್‌ ನೋಟಿಸ್‌!

ಬಾಲಾಕೋಟ್ ದಾಳಿ ಕುರಿತು ಮಾತನಾಡಿದ ತರೂರ್, ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಾಲಾಕೋಟ್ ಏರ್ ಸ್ಟ್ರೈಕ್‌ನಲ್ಲಿ ಯಾವುದೇ ಭಯೋತ್ಪಾದಕರು ಹತರಾಗಿಲ್ಲ ಅನ್ನೋ ವರದಿಗಳಿವೆ. ವರದಿ ಏನೇ ಇರಲಿ. ಆದರೆ ಭಾರತ ಅಂತರಾಷ್ಟ್ರೀಯ ಗಡಿ ದಾಟಿ  ಪಾಕಿಸ್ತಾನ ಪ್ರದೇಶದ ಮೇಲೆ ದಾಳಿ ಮಾಡುತ್ತೆ ಅನ್ನೋ ಸ್ಪಷ್ಟ ಸಂದೇಶ ರವಾನೆಯಾಗಿದೆ. ನಮ್ಮ ತಂಟೆಗೆ ಬಂದರೆ ಎಲ್ಲೆ ಆದರೂ ತಿರುಗೇಟು ನೀಡುತ್ತೇವೆ ಅನ್ನೋದು ಅರಿವಾಗಿದೆ. ಈ ದಾಳಿಯಲ್ಲಿ ಸತ್ತ ಭಯೋತ್ಪಾದಕರಿಗಿಂತ ಸಂದೇಶ ಮುಖ್ಯ ಎಂದು ತರೂರ್ ಹೇಳಿದ್ದಾರೆ. 

click me!