
ಚಿತ್ರದುರ್ಗ(ಮೇ.19): ಬರ ಪ್ರವಾಸದ ಎರಡನೇ ದಿನ ಚಿತ್ರದುರ್ಗ ಜಿಲ್ಲೆ ಯ ಹಲವೆಡೆ ನಡೆಯಿತು. ಮೊದಲ ದಿನವಿದ್ದ ಆರ್ಭಟ ಎರಡನೇ ದಿನ ಇರ್ಲಿಲ್ಲ. ಆದ್ರೆ, ನಿನ್ನೆ ತುಮಕೂರಿನ ದಲಿತರ ಮನೆಯ ಭೋಜನ ಸಖತ್ ಸದ್ದು ಮಾಡಿದೆ. ಹೋಟೆಲ್ನಿಂದ ತಂದಿದ್ದ ಇಡ್ಲಿಯನ್ನ ದಲಿತರ ಮನೆಯಲ್ಲಿ ಸೇವಿಸಿ ಕಮಲಪಡೆ ಮೋಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ.
ತುಮಕೂರಿಲ್ಲಿ ನಿನ್ನೆ 30ಕ್ಕೂ ಹೆಚ್ಚು ಬಿಜೆಪಿ ನಾಯಕರ ದಂಡು ಇವತ್ತು ಚಿತ್ರದುರ್ಗದಲ್ಲಿ ಕೇವಲ ಮೂರ್ನಾಲ್ಕಕ್ಕೆ ಇಳಿದಿತ್ತು. ನಿನ್ನೆ ದಲಿತರ ಮನೆಯಲ್ಲಿ ಹೊಟೇಲ್ನಿಂದ ತರಿಸಿ ಯಡಿಯೂರಪ್ಪ ಟಿಫಿನ್ ಸೇವನೆ ಆರೋಪ ಗಂಭೀರ ಸ್ವರೂಪಕ್ಕೆ ತಿರುಗಿದೆ. ಆದರೆ, ಬಿಜೆಪಿ ಮುಖಂಡರು ಮಾತ್ರ ದಲಿತರ ಮನೆಯಲ್ಲೇ ಉಪಹಾರ ಮಾಡಲಾಗಿದೆ ಅಂತ ಹೇಳಿಕೊಂಡ್ರು.
ಮಾಗಡಿಯಲ್ಲಿ ಮಾತಾಡಿದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರು ಇಂತಹ ಕೀಳು ಅಭಿರುಚಿ ಕೈಬಿಡಬೇಕು ಅಂತ ಮನವಿ ಮಾಡಿದರು. ಇತ್ತ ಕಾಂಗ್ರೆಸ್ ಪಕ್ಷದ SC-ST ಸೆಲ್ ಅಧ್ಯಕ್ಷ ಎಚ್ ಅಂಜಿನಪ್ಪ ಕೂಡಾ ದಲಿತರ ಮನೆಯಲ್ಲಿ ಹೋಟೆಲ್ ತಿಂಡಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಕಸರತ್ತು ಮಾಡಿದೆ. ಆದರೆ, ಬರ ಅಧ್ಯಯನ ಜನಸಂಪರ್ಕ ಹೆಸರಲ್ಲಿ ದಲಿತರ ಓಲೈಕೆಗೆ ಮುಂದಾಗಿ ಎಡವಟ್ಟು ಮಾಡಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.