DKS ಬೆನ್ನಲ್ಲೇ HDKಗೆ ಸಮನ್ಸ್; ರಣಬೀರ್, ಆಲಿಯಾ ಸರ್ಪ್ರೈಸ್; ಇಲ್ಲಿವೆ ಸೆ.05ರ ಟಾಪ್ 10 ಸುದ್ದಿ!

By Web Desk  |  First Published Sep 5, 2019, 4:52 PM IST

ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಬಂಧನ ಹಾಗೂ ಇಡಿ ವಿಚಾರಣೆ ಕಾವು ತಣ್ಣಗಾಗುತ್ತಿದ್ದಂತೆ, ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ನೀಡಿದೆ. ರಾಜ್ಯ ರಾಜಕೀಯ ಹೊರತುಪಡಿಸಿದರೆ, ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಸದ್ದಿಲ್ಲದೆ ಸರ್ಪ್ರೈಸ್ ನೀಡಿದ್ರಾ ಅನ್ನೋ ಮಾತು ಬಾಲಿವುಡ್ ವಲಯದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾದ ಅತ್ಯುತ್ತಮ ನಾಯಕನ ಹೆಸರು ಕೂಡ ಬಹಿರಂಗಗೊಂಡಿದೆ. ಸೆ.05ರ ಶಿಕ್ಷಕರ ದಿನಾಚರಣೆಯಂದು ಹಲವು ಸುದ್ದಿಗಳು ಸಂಚಲನ ಸೃಷ್ಟಿಸಿತು. ಇದರಲ್ಲಿ ಟಾಪ್ 10 ಸುದ್ದಿಗಳು ಇಲ್ಲಿವೆ. 


1 ಕುಮಾರಸ್ವಾಮಿಗೆ ಭೂಕಂಟಕ: ವಿಚಾರಣೆಗೆ ಬರುವಂತೆ ಕೋರ್ಟ್ ಸಮನ್ಸ್

Tap to resize

Latest Videos

undefined

ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಭೂಕಂಟಕ ಎದುರಾಗಿದ್ದು, ಬೆಂಗಳೂರು ಹೊರಲಯದ ವಡೇರಹಳ್ಳಿಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಗುರುವಾರ) ಸಮನ್ಸ್​ ನೀಡಿದೆ.


2 ಡಿಕೆಶಿ ಬಂಧನದ ಬೆನ್ನಲ್ಲೇ ED ಬಲೆಗೆ ಆಪ್ತ!

ಡಿ.ಕೆ.ಶಿವಕುಮಾರ್‌ರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬುಧವಾರ ತಡರಾತ್ರಿವರೆಗೆ ವಿಚಾರಣೆ ಮುಂದುವರೆದಿತ್ತು. ಗುರುವಾರವೂ ವಿಚಾರಣೆ ಶುರುವಾಗಿದ್ದು, ಪ್ರಕರಣದ ಮತ್ತೊಬ್ಬ ಆರೋಪಿಯನ್ನು ED ವಶಕ್ಕೆ ಪಡೆದಿದ್ದಾರೆ. 

3 ಮನೆ ಬಾಗಿಲಿಗೆ ಎಣ್ಣೆ: ಕಿಕ್ ಏರುವಾಗಲೇ ಔಟ್..!


ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಯೋಜನೆ ಇದೆ ಎಂದು ಬುಧವಾರ ಹೇಳಿಕೆ ನೀಡುವ ಮೂಲಕ ಕುಡುಕರಿಗೆ ಖುಷಿ ನೀಡಿದ್ದ ಅಬಕಾರಿ ಸಚಿವ ಎಚ್ ನಾಗೇಶ್ ಇದೀಗ ಯೂಟರ್ನ್ ಹೊಡೆದಿದ್ದು, ಕುಡುಕರಿಗೆ ಆಸೆ ಹುಟ್ಟಿಸಿ ಕೈಕೊಟ್ಟಿದ್ದಾರೆ. ನಾಗೇಶ್ ಇದೀಗ ವರಸೆ ಬದಲಿಸಿದ್ದು, ಕುಡುಕರ ಕನಸಿನ ಗೋಪುರ ಕುಸಿದು ಬಿದ್ದಿದೆ.


4 ಶಿವಮೊಗ್ಗ: ಗಾಂಧಿ ಪಾರ್ಕ್‌ನಲ್ಲಿ ಹೆಣ್ಮಕ್ಳ 'ಎಣ್ಣೆ ಪಾರ್ಟಿ'

ಹೆಣ್ಮಕ್ಳು ಡ್ರಿಂಕ್ಸ್ ಮಾಡ್ತಾರೆ ಅಂದ್ರೆ ಇಟ್ಸ್ ಕಾಮನ್ ಅಂತಾರೆ. ಆದರೆ ಶಿವಮೊಗ್ಗದಲ್ಲಿ ಪಬ್ಲಿಕ್ ಪಾರ್ಕ್‌ನಲ್ಲಿಯೇ ಹೆಣ್ಮಕ್ಳು ಡ್ರಿಂಕ್ಸ್ ಮಾಡಿರೋ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ. ಹುಡುಗಿಯರು ಎಣ್ಣೆ ಪಾರ್ಟಿ ಮಾಡಿರೋ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಲ್ಲಿ ಹರಿದಾಡ್ತಿದೆ.

5 ಟ್ರೋಲಿಗರಿಗೆ ತಿರುಗೇಟು ನೀಡಲು ಹೋದ ಶಾಸ್ತ್ರಿಗೆ ಮತ್ತೆ ಕ್ಲಾಸ್!

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮತ್ತೆ ಟ್ರೋಲಿಗರ ಆಹಾರವಾಗಿದ್ದಾರೆ. ಶಾಸ್ತ್ರಿ ಏನೇ ಫೋಟೋ ಹಾಕಿದರೂ ಅದನ್ನು ಎಡಿಟ್ ಮಾಡಿ, ಕೈಯಲ್ಲಿ ಮದ್ಯ ಹಿಡಿದಿರುವ ಅಥವಾ ಕುಡಿಯುತ್ತಿರುವ ಫೋಟೋ ಹಾಕಿ ಟೋಲ್ ಮಾಡಲಾಗುತ್ತೆ. ಇದೀಗ ರವಿ ಶಾಸ್ತ್ರಿ ಕೊಂಚ ಭಿನ್ನವಾಗಿ ಪೋಟೋ ಅಪ್‌ಲೋಡ್ ಮಾಡಿದ್ದು, ಮತ್ತೆ ಟ್ರೋಲ್ ಮಾಡಲಾಗಿದೆ.


6 ಅತ್ಯುತ್ತಮ ನಾಯಕ; ಸಯ್ಯದ್ ಕಿರ್ಮಾನಿ ಆಯ್ಕೆಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಯಾರು? ಈ ಪ್ರಶ್ನೆ ಹಾಗೂ ಚರ್ಚೆ ಭಾರತದ ಕ್ರಿಕೆಟ್ ಹುಟ್ಟಿನಿಂದಲೂ ಇದೆ. ಕೆಲ ನಾಯಕರ ಹೆಸರುಗಳು ಮುಂಚೂಣಿಯಲ್ಲಿದೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ  ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಎಂ.ಎಸ್.ಧೋನಿ  ಎಂದಿರುವ ಕಿರ್ಮಾನಿ, ವಿರಾಟ್ ಕೊಹ್ಲಿಗೆ ಇನ್ನೂ ಸಮಯ ಬೇಕಿದೆ ಎಂದಿದ್ದಾರೆ.

7 ಸದ್ದಿಲ್ಲದೇ ಮದುವೆಯಾದ್ರಾ ಅಲಿಯಾ- ರಣಬೀರ್ ಕಪೂರ್?

ಬಾಲಿವುಡ್ ಮೋಸ್ಟ್ ಕ್ಯೂಟ್ ಕಪಲ್ ಅಲಿಯಾ ಭಟ್- ರಣಬೀರ್ ಕಪೂರ್ ಕಡೆಗೂ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ! ಬಾಲಿವುಡ್ ಬಿಗ್ ಸ್ಟಾರ್ ಗಳಾದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ- ನಿಕ್ ಮದುವೆ ನಂತರ ಮುಂದಿನ ಸರದಿ ಅಲಿಯಾ- ರಣವೀರ್ ದು ಎಂದು ಹೇಳಲಾಗುತ್ತಿತ್ತು. ಇದೀಗ ದಿಢೀರನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೋಟೋ ಅಸಲಿಯತ್ತು ಬೇರೇನೆ ಇದೆ.

8 ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಮೈಸೂರಿನ ಸಿಂಹ, ಯುವಜನತೆಯ ಸೂರ್ಯ!

ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜನಪರ ಕೆಲಸಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ. ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲಲು ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿಗಳ ಸಂತ್ರಸ್ತರ ನಿಧಿಗೆ ಕೊಡಲು ನಿರ್ಧರಿಸಿದ್ದಾರೆ. 

9 ಜಿಯೋ ಗಿಗಾ ಫೈಬರ್‌ ಮೆಗಾ ಆಫರ್‌ ಪ್ರಕಟ!

ಅಗ್ಗದ ದರದ 4ಜಿ ಸೇವೆಯ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಜಿಯೋ, ತನ್ನ ಬಹು ನಿರೀಕ್ಷಿತ ಜಿಯೋ ಗಿಗಾ ಫೈಬರ್‌ ಯೋಜನೆಯನ್ನು ಸೆ.5ರ ಗುರುವಾರದಿಂದ ಜಾರಿಗೊಳಿಸುತ್ತಿದೆ. ಕೇಬಲ್‌ ಟೀವಿ, ಟೆಲಿಫೋನ್‌, ಬ್ರಾಡ್‌ಬ್ಯಾಂಡ್‌, ಇ ಕಾಮರ್ಸ್‌ ವೆಬ್‌ ವೇದಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಸೆಟ್‌ಟಾಪ್‌ ಬಾಕ್ಸ್‌ ಮೂಲಕವೇ ಒದಗಿಸುವ ಈ ಯೋಜನೆ, ಮುಂದಿನ ದಿನಗಳಲ್ಲಿ ದೇಶದ ಕೇಬಲ್‌ ಟೀವಿ, ಬ್ರ್ಯಾಡ್‌ಬ್ಯಾಂಡ್‌ ವಲಯದಲ್ಲಿ ಭಾರೀ ಕ್ರಾಂತಿಗೆ ಕಾರಣವಾಗಲಿದೆ ಎನ್ನಲಾಗಿದೆ.

10 ಭಾರೀ ಟ್ರಾಫಿಕ್ ದಂಡ ರಾಜ್ಯದಲ್ಲಿ ಜಾರಿ : ಬೈಕ್ ಸವಾರನೊಬ್ಬನಿಗೆ 17 ಸಾವಿರ ಫೈನ್


ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜ್ಯಾದ್ಯಂತ ವಾಹನ ಸವಾರರಿಗೆ ಬಿಸಿ ತಟ್ಟತೊಡಗಿದೆ. ಬುಧವಾರವೇ ದಂಡ ಪ್ರಯೋಗಕ್ಕಿಳಿದಿರುವ ಪೊಲೀಸರು, ಕುಡಿದು ವಾಹನ ಚಾಲನೆ ಮಾಡಿದ ಸವಾರರಿಗೆ ಮೂರು ಪ್ರಕರಣಗಳಲ್ಲಿ ಕನಿಷ್ಠ 10,000 ರು. ದಂಡ ವಿಧಿಸಿದ್ದಾರೆ. ಬೆಂಗಳೂರಿನಲ್ಲಿ ಬೈಕ್‌ ಸವಾರನೊಬ್ಬನಿಗೆ 17,000 ರು. ದಂಡ ವಿಧಿಸಲಾಗಿದೆ. 
 

click me!