ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ

By Web DeskFirst Published Mar 5, 2019, 10:09 AM IST
Highlights

ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ | ದಾಖಲೆ ಹಸ್ತಾಂತರಿಸಿದ ಅಂಬರೀಷ್‌ ಪತ್ನಿ | ಶೀಘ್ರದಲ್ಲೇ ನೋಂದಣಿ ಮಾಡಿಕೊಡುವೆ ಎಂದ ಸುಮಲತಾ 

ಮಂಡ್ಯ (ಮಾ. 05):  ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆ ಮದ್ದೂರಿನ ಸಿಆರ್‌ಪಿಎಫ್‌ ಯೋಧ ಎಚ್‌. ಗುರು ಕುಟುಂಬಕ್ಕೆ ಮಾಜಿ ಸಚಿವ ದಿ. ಅಂಬರೀಷ್‌ ಪತ್ನಿ ಸುಮಲತಾ ಅವರು ಈ ಹಿಂದೆ ಕೊಟ್ಟಮಾತಿನಂತೆ 20 ಗುಂಟೆ ಜಮೀನು ದೇಣಿಗೆ ಕೊಟ್ಟಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದರು.

ಸರ್ಜಿಕಲ್ ಸ್ಟ್ರೈಕ್‌ಗೆ ಸಂಭ್ರಮಿಸೋದು ಬಿಟ್ಟು ಸಿಎಂ ಪುತ್ರನ ಸಿನಿಮಾ ನೋಡ್ಬೇಕಾ?

ಸುಮಲತಾ ಅವರು ಹುತಾತ್ಮ ಯೋಧನ ಕುಟುಂಬಕ್ಕೆ ಭೂಮಿಯ ದಾಖಲೆ ಪತ್ರವನ್ನು ನೀಡಿದರು. ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನು ಅಂಬರೀಷ್‌ ಅವರಿಗೆ ಪಿತ್ರಾರ್ಜಿತವಾಗಿ ಬಂದಿತ್ತು. ಈ ಜಮೀನನ್ನು ಅಂಬರೀಷ್‌ ತಮ್ಮ ಪುತ್ರ ಅಭಿಷೇಕ್‌ಗೆ ಪಾಲು ಮಾಡಿ ಖಾತೆ ಮಾಡಿಕೊಟ್ಟಿದ್ದರು. ಈಗ ಅದರಲ್ಲಿ 20 ಗುಂಟೆಯಷ್ಟುಜಾಗವನ್ನು ಹುತಾತ್ಮ ಯೋಧನ ಪತ್ನಿ ಹೆಸರಿಗೆ ಸುಮಲತಾ ಅವರು ದಾನಪತ್ರ ಮಾಡಿಸಿದ್ದಾರೆ.

ಯಾವ ಷರತ್ತೂ ಹಾಕಿಲ್ಲ:

ನಂತರ ಮಾತನಾಡಿದ ಸುಮಲತಾ, ನಾನು ಈ ಹಿಂದೆ ಹೇಳಿದಂತೆ ಜಮೀನು ದಾನ ಮಾಡಿದ್ದೇನೆ. ಮುಂದಿನ ದಿನ​ಗ​ಳಲ್ಲಿ ಕುಟುಂಬ​ದ​ವರ ನಿರ್ಧಾ​ರ​ದಂತೆ ನೋಂದಣಿ ಮಾಡಿ​ಕೊ​ಡು​ತ್ತೇವೆ. ಅದ​ರಲ್ಲಿ ಸ್ಮಾರಕ ಮಾಡ್ತಾರೋ, ವ್ಯವ​ಸಾಯ ಮಾಡ್ತಾರೋ ಎನ್ನುವುದು ಅವರಿಗೆ ಬಿಟ್ಟವಿಚಾರ ಎಂದರು.

ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲಿಗೆ ಬೆಂಕಿ

ಜಮೀ​ನಿಗೆ ಸಂಬಂಧಿ​ಸಿ ಯಾವುದೇ ಷರ​ತ್ತನ್ನೂ ಹಾಕಿಲ್ಲ. ಜಮೀ​ನ​ನ್ನು ಅವ​ರಿಗೆ ನೀಡಿದ ಬಳಿಕ ಅದರ ಮೇಲೆ ನನಗೆ ಯಾವುದೇ ಅಧಿ​ಕಾ​ರ​ವಿ​ಲ್ಲ. ಅವ​ರಿಗೆ ಯಾವ ರೀತಿ ಅನು​ಕೂ​ಲ​ವಾ​ಗುತ್ತದೋ ಅದ​ರಂತೆ ಬಳ​ಸಿ​ಕೊ​ಳ್ಳಲಿ. ನೋವಿ​ನ​ಲ್ಲಿ​ರುವ ಕುಟುಂಬ​ದ​ವ​ರಿಗೆ ಈ ಜಮೀ​ನನ್ನು ಇದೇ ಉದ್ದೇ​ಶಕ್ಕೆ ಬಳ​ಸಿ​ಕೊ​ಳ್ಳು​ವಂತೆ ಒತ್ತಡ ಹೇರು​ವು​ದಿಲ್ಲ ಎಂದು ನುಡಿ​ದರು.
 

click me!