ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಬ್ಬು ಬೆಳೆಗಾರರಿಂದ ಮತದಾನ ಬಹಿಷ್ಕಾರ | ಇನ್ನೂ ಮತದಾನಕ್ಕೆ ಬಾರದ ರೈತರು
ಮಂಡ್ಯ (ನ. 03): ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಬ್ಬು ಬೆಳೆಗಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ.
’ಕೈ’ ಗೆ ಗುಡ್‌ಬೈ ಹೇಳಿ ತೆನೆ ಹೊರುತ್ತಾರಾ ಅಂಬರೀಶ್?ಎನ್ಎಸ್ಎಲ್ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಕಬ್ಬು ಕಟಾವು ಕೂಲಿ ಏರಿಕೆ ಹಾಗೂ ಒಂದೇ ಕಂತಿನಲ್ಲಿ ಕಬ್ಬಿನ ಹಣ ನೀಡದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ರೈತರ ನೆರವಿಗೆ ಬಾರದಿರುವುದರಿಂದ ಅವರ ಧೋರಣೆ ಖಂಡಿಸಿ ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಮಂಡ್ಯ ಬಿಜೆಪಿ ಅಭ್ಯರ್ಥಿಗೆ ಶಾಕ್ : ದೂರಿಗೆ ನಿರ್ಧಾರ450 ರೂ. ಇದ್ದ ಕಬ್ಬು ಕಟಾವು ದರವನ್ನ ಏಕಾಏಕಿ 650 ರೂ. ಗೆ ಏರಿಕೆ ಮಾಡಿರೋದನ್ನು ವಿರೋಧಿಸಿದ್ದಾರೆ. ಕೇಂದ್ರ ಸರ್ಕಾರ ಪ್ರತೀ ಟನ್ ಕಬ್ಬಿಗೆ 2612.50 ರೂ. ನಿಗದಿ ಮಾಡಿದ್ರೂ ಮೊದಲ ಕಂತಿನಲ್ಲಿ 1,500 ರೂ. ನೀಡಲಾಗುತ್ತಿದೆ. ಕಬ್ಬು ಪೂರೈಕೆಯಾಗಿ ಎರಡು ತಿಂಗಳ ಬಳಿಕ ಕಾರ್ಖಾನೆ ಆಡಳಿತ ಮಂಡಳಿ ಮೊದಲ ಕಂತಿನ ಹಣ ನೀಡಿದೆ. ಉಳಿಕೆ ಹಣ ನೀಡುವ ಕುರಿತು ರೈತರಿಗೆ ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಕಾರ್ಖಾನೆಯ ರೈತ ವಿರೋಧಿ ನೀತಿ ಖಂಡಿಸಿ ಕಳೆದ 4 ದಿನಗಳಿಂದ ರೈತರು ಪ್ರತಿಭಟಿಸುತ್ತಿದ್ದಾರೆ.