
ಷಿಕಾಗೊ : ಕುಡುಕರು ಸೃಷ್ಟಿಸುವ ಅವಾಂತರ ಒಂದೆರಡಲ್ಲ. ಸರಕುಸಾಗಣೆ ವಿಮಾನದಲ್ಲಿ ಲಗೇಜುಗಳನ್ನು ತೆರವುಗೊಳಿಸುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ನಿದ್ದೆಗೆ ಜಾರಿದ್ದರಿಂದ ಷಿಕಾಗೊಗೆ ಪ್ರಯಾಣಿಸಿದ್ದಾನೆ.
ರಾರಯಂಪ್‌ನಲ್ಲಿ ಇಟ್ಟಸರಕುಗಳನ್ನು ತೆರವುಗೊಳಿಸಿದ ಬಳಿಕ ವಿಮಾನ ಖಾಲಿ ಇದ್ದಿದ್ದರಿಂದ ಸಣ್ಣದೊಂದು ನಿದ್ದೆಹೊಡೆಯಲು ನಿರ್ಧರಿಸಿದ.
ಆದರೆ, ಆತ ಹೊರಗೆ ಬಾರದೇ ಇದ್ದಿದ್ದನ್ನು ಯಾರೂ ಗಮನಿಸಿರಲಲ್ಲ. ಹೀಗಾಗಿ ವಿಮಾನ ಟೇಕಾಪ್ ಆಗಿ ಷಿಕಾಗೊದ ಓಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಪೊಲೀಸರು ಬಂದು ತಪಾಸಣೆ ನಡೆಸಿದಾಗ ಆತ ತಾನು ಕುಡಿದು ಕುಡಿದು ನಿದ್ದೆ ಹೋಗಿದ್ದಾಗಿ ಹೇಳಿದ್ದಾನೆ. ಈ ಅಪರಾಧಕ್ಕಾಗಿ ಆತನಿಗೆ ವಿಮಾನಯಾನ ಸಂಸ್ಥೆ ದಂಡ ವಿಧಿಸಿಲ್ಲ. ಆದರೆ, ಪ್ರಕರಣ ವಿಚಾರಣೆ ನಡೆದು ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.