ಚುನಾವಣಾ ಹೊಸ್ತಿಲಲ್ಲೇ ಕೈ ನಾಯಕರ ಫೈಟ್

By Web DeskFirst Published Nov 2, 2018, 1:45 PM IST
Highlights

ಚುನಾವಣಾ ಹೊಸ್ತಿಲಲ್ಲೇ ಕಾಂಗ್ರೆಸಿಗೇ ಶಾಕ್ ಎದುರಾಗಿದೆ. ಇಬ್ಬರು ನಾಯಕರ ನಡುವಿನ ಫೈಟ್ ತಲೆ ನೋವು ತಂದಿಟ್ಟಿದೆ. ಚುನಾವಣಾ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಆರಂಭವಾದ ಈ ವಾಗ್ಯುದ್ದ ಇದೀಗ ತಾರಕಕ್ಕೆ ಏರುವ ಲಕ್ಷಣ ಕಂಡು ಬಂದಿದೆ. 

ನವದೆಹಲಿ :  ಇನ್ನೇನು ಮಧ್ಯ ಪ್ರದೇಶ ಚುನಾವಣೆಗೆ ಒಂದು ತಿಂಗಳಷ್ಟೆ ಬಾಕಿ ಉಳಿದಿದ್ದು ಇದೇ ವೇಳೆ ಕಾಂಗ್ರೆಸ್ ಮುಖಂಡರ ನಡುವೆ ವಾರ್ ಆರಂಭವಾಗಿದೆ. 

ಕಾಂಗ್ರೆಸ್ ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ನಡುವೆ ವೈಮನಸ್ಸು ಶುರುವಾಗಿದೆ. 

ಈ ವೈಮನಸ್ಸು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಸಮಿತಿ ಸಭೆ ವೇಳೆ ಸ್ಥಾನಗಳ ಹಂಚಿಕೆ ವೇಳೆ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಇತರೆ ಹಿರಿಯ ನಾಯಕರು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನಿಡಿದ್ದಾರೆ. 

ಈ ಸಮಸ್ಯೆ ಬಗೆಹರಿಸಲು ಅಶೋಕ್ ಗೆಹ್ಲೋಟ್, ಅಹಮದ್ ಪಟೇಲ್, ಎಂ ವೀರಪ್ಪ ಮೋಯ್ಲಿ ಅವರಿಗೆ ರಾಹುಲ್ ಗಾಂಧಿ ಜವಾಬ್ದಾರಿ ನೀಡಿದ್ದಾರೆ. 

ಈ ನಿಟ್ಟಿನಲ್ಲಿ ಇನ್ನೂ ಕೂಡ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಯಾವುದೇ ಅಭ್ಯರ್ಥಿಯನ್ನೂ ಕೂಡ ಘೋಷಣೆ ಮಾಡಿಲ್ಲ.

ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಎಂದು ಆರಂಭವಾದ ಈ ವೈಮನಸ್ಸು ಇದೀಗ ತಾರಕಕ್ಕೆ ಏರಿದ್ದು ಚುನಾವಣೆ ಹೊಸ್ತಿಲಿನಲ್ಲೇ ಕಾಂಗ್ರೆಸ್ ಗೆ ತಲೆ ನೋವಾಗಿದೆ.

click me!