
ಮಂಡ್ಯ (ನ. 02): ನಾಳೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾಗೆ ಮತದಾರರ ಪಟ್ಟಿಯಲ್ಲಿ ನಂ 420 ಸಿಕ್ಕಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ರಮ್ಯಾ ಮತದಾರರ ಪಟ್ಟಿಯಲ್ಲಿ 420 ಸಂಖ್ಯೆ ಹೊಂದಿದ್ದರು. ನಗರಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ರಮ್ಯಾ ಸಂಖ್ಯೆ 671ಕ್ಕೆ ಬದಲಾಗಿತ್ತು. ಇದೀಗ ಮತ್ತೆ ಮತದಾರರ ಪಟ್ಟಿಯಲ್ಲಿ ರಮ್ಯಾಗೆ 420 ಸಂಖ್ಯೆ ದೊರಕಿದೆ. ಇದನ್ನೇ ಇಟ್ಟುಕೊಂಡು ಸಾರ್ವಜನಿಕರು ತಮಾಷೆ ಮಾಡುತ್ತಿದ್ದಾರೆ.
ಈ ಹಿಂದಿನ ವಿಧಾನಸಭೆ, ನಗರಸಭೆ ಚುನಾವಣೆಯಲ್ಲಿ ರಮ್ಯಾ ಮತದಾನಕ್ಕೆ ಬಂದಿರಲಿಲ್ಲ. ನಾಳೆಯಾದ್ರೂ ಮತದಾನ ಮಾಡುವುದಕ್ಕೆ ಬರುತ್ತಾರಾ ಎಂಬ ಚರ್ಚೆ ಮಂಡ್ಯ ಜನರಲ್ಲಿ ಶುರುವಾಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಮಂಡ್ಯ ಸ್ಟೈಲ್ ಅಲ್ಲಿ ರಮ್ಯಾಗೆ ಓಟ್ ಮಾಡುವಂತೆ ಮನವಿ ಮಾಡಿದ್ದಾರೆ.
ಅಕ್ಕಾ, ರಮ್ಯಕ್ಕಾ ಓಟ್ ಮಾಡಕ್ಕೆ ಬಾರಕ್ಕ, ರಮ್ಯಕ್ಕಾ ನಾಳೆ ಚುನಾವಣೆ ಅಕ್ಕಾ, ನೀವು ನಿಂತಿದ್ರಲ್ಲಕ್ಕ ಅದೇ ಚುನಾವಣೆ, ಶಿವರಾಮೇಗೌಡ ನಿಮ್ಮ ಸೋಲಿಸಿದ್ದೆ ಅಂದಿದ್ರಲ್ಲ ಅವ್ರು ನಿಂತವ್ರೆ... ನೀನು ಮಂಡ್ಯದ ಮಗಳಕ್ಕ.. ನಾಳೆ ಬಾರಕ್ಕ.. ದಯಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕೋದ ಮರೀಬೇಡಕ್ಕ. .. ನಿನ್ನ ನೋಡಿ ನಿನ್ನ ಅಭಿಮಾನಿಗಳು ಮತ ಹಾಕ್ತಾರೆ ಕಣಕ್ಕ.....ನಿನ್ನ ಬಾಡಿಗೆ ಸಹೋದರರು ಕಣಕ್ಕ ನಾವು. ಬಿಜೆಪಿಗೆ ಓಟ್ ಹಾಕಕ್ಕ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.