ಬಳ್ಳಾರಿ ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ! ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಚರಾಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ! ದೊಡ್ಡಬಳ್ಳಾಪುರ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್! ಅಪಘಾತ ಪ್ರಕರಣವೊಂದರಲ್ಲಿ ಕೋರ್ಟ್‌ಗೆ ಹಾಜರಾಗದೆ ದಂಡವನ್ನು ಕಟ್ಟದ ಹಿನ್ನೆಲೆ! 94,925 ರೂ. ದಂಡದ ಹಣಕ್ಕಾಗಿ ಚರಾಸ್ತಿ ಮುಟ್ಟುಗೋಲಿಗೆ ನ್ಯಾಯಲಯ ಆದೇಶ
ದೊಡ್ಡಬಳ್ಳಾಪುರ(ನ.2): ಬಳ್ಳಾರಿ ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮನೆಯಲ್ಲಿನ ವಸ್ತುಗಳ ಜಪ್ತಿಗೆ ದೊಡ್ಡಬಳ್ಳಾಪುರ ಕೋರ್ಟ್ ಆದೇಶ ಹೊರಡಿಸಿದೆ.
ಅಪಘಾತ ಪ್ರಕರಣವೊಂದರಲ್ಲಿ ಕೋರ್ಟ್ ಗೆ ಹಾಜರಾಗದೆ ದಂಡವನ್ನು ಕಟ್ಟದ ಹಿನ್ನೆಲೆಯಲ್ಲಿ ಉಗ್ರಪ್ಪ ಮನೆಯಲ್ಲಿನ ಚರಾಸ್ತಿ ಮುಟ್ಟುಗೋಲಿಗೆ ನ್ಯಾಯಲಯ ಆದೇಶ ನೀಡಿದೆ.
undefined
ದೊಡ್ಡಬಳ್ಳಾಪುರ ನಗರದ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಈ ಆದೇಶ ಹೊರಡಿಸಿದ್ದು, ನ್ಯಾಯಮೂರ್ತಿ ಶುಕ್ಲಾಕ್ಷ ಫಾಲನ್ ರಿಂದ ಉಗ್ರಪ್ಪ ಚರಾಸ್ತಿ ಮುಟ್ಟುಗೋಲಿಗೆ ಆದೇಶ ನೀಡಿದ್ದಾರೆ.
2010 ರಲ್ಲಿ ವಿ.ಎಸ್.ಉಗ್ರಪ್ಪ ಅವರ ಕ್ವಾಲಿಸ್ ಕಾರು ಬಾಲಾಜಿ ಎಂಬುವರ ದ್ವೀಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಹಿನ್ನೆಲೆಯಲ್ಲಿ ಕಾರಿಗೆ ಇನ್ಸೂರೆನ್ಸ್ ಇಲ್ಲದ ಕಾರಣ ಪರಿಹಾರಕ್ಕಾಗಿ ಗಾಯಾಳು ಬಾಲಾಜಿ ಕೋರ್ಟ್ ಮೊರೆಹೋಗಿದ್ದರು.
ಆದರೆ 2012 ರಿಂದ ಹಲವು ಬಾರಿ ನೋಟಿಸ್ ನೀಡಿದರೂ, ಉಗ್ರಪ್ಪ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಅ. 31 ರಂದು 94,925 ರೂ. ದಂಡದ ಹಣಕ್ಕಾಗಿ ಚರಾಸ್ತಿ ಮುಟ್ಟುಗೋಲಿಗೆ ನ್ಯಾಯಲಯ ಆದೇಶಿಸಿದೆ.