'ಟೈಮ್ಸ್‌' ಅಸಾಧಾರಣ 100 ಅಸಾಧಾರಣ ಸ್ಥಳಗಳ ಪಟ್ಟಿಯಲ್ಲಿ ಏಕತಾ ಪ್ರತಿಮೆಗೆ ಸ್ಥಾನ!

Published : Aug 29, 2019, 08:34 AM IST
'ಟೈಮ್ಸ್‌' ಅಸಾಧಾರಣ 100 ಅಸಾಧಾರಣ ಸ್ಥಳಗಳ ಪಟ್ಟಿಯಲ್ಲಿ ಏಕತಾ ಪ್ರತಿಮೆಗೆ ಸ್ಥಾನ!

ಸಾರಾಂಶ

ಟೈಮ್ಸ್‌ 2019ರ ಜಗತ್ತಿನ 100 ಅಸಾಧಾರಣ ಸ್ಥಳಗಳ ಪಟ್ಟಿಯಲ್ಲಿ ಏಕತಾ ಪ್ರತಿಮೆ| . ಏಕತಾ ಪ್ರತಿಮೆ ಈ ಹಿರಿಮೆಗೆ ಪಾತ್ರವಾಗಿದ್ದಕ್ಕೆ ಪ್ರಧಾನಿ ಮೋದಿ ಹರ್ಷ

ನವದೆಹಲಿ[ಆ.29]: ಪ್ರಖ್ಯಾತ ಟೈಮ್ಸ್‌ ನಿಯಾತಕಾಲಿಕೆ ಬಿಡುಗಡೆ ಮಾಡಿರುವ ‘2019 ರ ಜಗತ್ತಿನ 100 ಅಸಾಧಾರಣ ಸ್ಥಳ’ಗಳ ಪಟ್ಟಿಯಲ್ಲಿ ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಏಕತಾ ಪ್ರತಿಮೆ ಜಾಗ ಪಡೆದಿದೆ. ಏಕತಾ ಪ್ರತಿಮೆ ಈ ಹಿರಿಮೆಗೆ ಪಾತ್ರವಾಗಿದ್ದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಟೈಮ್ಸ್‌ ‘2019 ರ ಜಗತ್ತಿನ ನೂರು ಅಸಾಧಾರಣ ಸ್ಥಳಗಳ ಪೈಕಿ ಏಕತಾ ಪ್ರತಿಮೆ ಜಾಗ ಪಡೆದಿದ್ದು ಒಳ್ಳೆಯ ಸುದ್ದಿ. ಕೆಲ ದಿನಗಳ ಹಿಂದೆ ಒಂದೇ ದಿನದಲ್ಲಿ 34000 ಮಂದಿ ಭೇಟಿ ನೀಡಿ ದಾಖಲೆ ಸೃಷ್ಟಿಯಾಗಿತ್ತು. ಈ ತಾಣವು ಜನಪ್ರೀಯ ಪ್ರವಾಸ ಸ್ಥಳವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ನರ್ಮದಾ ನದಿ ದಂಡೆಯಲ್ಲಿರುವ ಏಕತಾ ಪ್ರತಿಮೆ ಜಗತ್ತಿನ ಅತೀ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಈ ವರೆಗೆæ ಸುಮಾರು 26 ಲಕ್ಷ ಮಂದಿ ಪ್ರತಿಮೆ ಸಂದರ್ಶಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ 31 ರಂದು ಈ ಪ್ರತಿಮೆಯನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌