
ನವದೆಹಲಿ[ಆ.29]: ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಸಿಬಿಐ ವಶದಲ್ಲಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ವಿರುದ್ಧ ಸಂಸದ ಅಮರ್‌ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಚಿದಂಬರಂ ಅವರನ್ನು ಮಹಾಲೂಟಿಕೋರ ಎಂದೆಲ್ಲಾ ಟೀಕಿಸಿದ್ದಾರೆ.
INX ಹಗರಣ: ಚಿದಂಬರಂಗೆ ಸಂಕಷ್ಟ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾವು ದಾಖಲಾಗಿರುವ ಆಸ್ಪತ್ರೆಯಿಂದಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅಮರ್‌ಸಿಂಗ್ ‘ ಶ್ರೀಯುತ ರಾಹುಲ್ ಗಾಂಧಿ ಅವರೇ, ನೀವು ವಿಡಿಯೋಕಾನ್‌ನ ವೇಣುಗೋಪಾಲ್ ದೂತ್, ರಿಲಯನ್ಸ್‌ನ ಅನಿಲ್ ಅಂಬಾನಿ ಅವರನ್ನು ಮೋದಿ ಆಪ್ತ ಎಂದು ದೂರುತ್ತೀರಿ. ಆದರೆ ವಾಸ್ತವವಾಗಿ ಈ ಇಬ್ಬರೂ ಮೋದಿಗಿಂತ ಚಿದಂಬರಂಗೇ ಹೆಚ್ಚು ಮಿತ್ರರು. ಈ ಕುರಿತ ಸಾಕ್ಷ್ಯಗಳು ನನ್ನ ಬಳಿ ಇದೆ. ನೀವು ಹೇಳಿದ ದಿನ ನಾನು ಅದನ್ನು ಬಹಿರಂಗ ಮಾಡುತ್ತೇನೆ.
ಕೆಲ ವರ್ಷಗಳಿಂದ ಹಲವಾರು ಕಾರ್ಪೊರೆಟ್ ಉದ್ಯಮಿಗಳ ಸಾವಿರಾರು ಕೋಟಿ ರು. ಸಾಲ ಎನ್‌ಪಿಎ (ಅನುತ್ಪಾದಕ ಆಸ್ತಿಯಾಗಿದೆ.) ಈ ಎನ್‌ಪಿಎ ಯಾರ ಕಾಲದಲ್ಲಿ ಆಯಿತು ಎನ್ನುವುದನ್ನು ಪರಿಶೀಲಿಸಿ. ಯುಪಿಎ 2 ಅವಧಿಯಲ್ಲಿ ಯಾರು ಹಣಕಾಸು ಸಚಿವರಾಗಿದ್ದಾಗ ಈ ರೀತಿ ಸಾಲ ನೀಡಿ ಅದನ್ನು ಎನ್‌ಪಿಎ ಆಗಿ ಪರಿವರ್ತಿಸಲಾಯಿತು. ಉದ್ಯಮಿಗಳಿಗೆ ನೀಡಿದ ಸಾಲವನ್ನು ಎನ್‌ಪಿಎ ಆಗಿ ಪರಿವರ್ತಿಸುವ ಮೂಲಕ ಬೇಕು ಬೇಕಾದವರಿದೆ ಚಿದು ಹೇಗೆ ಹಣ ಹಂಚಿದರು ಎಂಬುದನ್ನು ಒಮ್ಮೆ ನೋಡಿ. ವೇಣುಗೋಪಾಲ್ ದೂತ್ ಅವರು ಚಿದಂಬರಂ ಅವರನ್ನು ಪಟಾಯಿಸಲು ಏನೆಲ್ಲಾ ತಂತ್ರ ಬಳಸುತ್ತಿದ್ದರು ಎಂದು ಇಲ್ಲಿ ಹೇಳಲು ನನಗೆ ನಾಚಿಕೆಯಾಗುತ್ತದೆ. ಇಂದು ದೇಶ ಎದುರಿಸುತ್ತಿರುವ ಎಲ್ಲಾ ಆರ್ಥಿಕ ಸಂಕಷ್ಟಗಳಿಗೆ ಶ್ವೇತವಸ್ತ್ರಧಾರಿ ಚಿದಂಬರಂ ಅವರೇ ಕಾರಣ. ಅವರಿಗಿಂತ ಭ್ರಷ್ಟವ್ಯಕ್ತಿ ಇನ್ನೊಬ್ಬರಲ್ಲ. ಇದೀಗ ಮೋದಿ ಅವರು ಆರ್ಥಿಕ ಪರಿಸ್ಥಿತಿ ಸುಧಾರಿಸಲು ಯತ್ನಿಸುತ್ತಿರುವಾಗ ಅವರನ್ನು ಟೀಕಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.