ಕನ್ನಡ,ಬಾಲಿವುಡ್ ನಟರಿಗಿರುವ ವಿಚಿತ್ರ ಗೀಳುಗಳಿವು: ಬಿಗ್ ಬಿ 2 ವಾಚ್ ಧರಿಸೋದು, ಕಿಚ್ಚನಿಗಿರುವ ಖಯಾಲಿಯೇನು ಗೊತ್ತೆ ?

Published : May 28, 2017, 07:41 PM ISTUpdated : Apr 11, 2018, 12:56 PM IST
ಕನ್ನಡ,ಬಾಲಿವುಡ್ ನಟರಿಗಿರುವ ವಿಚಿತ್ರ ಗೀಳುಗಳಿವು: ಬಿಗ್ ಬಿ 2 ವಾಚ್ ಧರಿಸೋದು, ಕಿಚ್ಚನಿಗಿರುವ ಖಯಾಲಿಯೇನು ಗೊತ್ತೆ ?

ಸಾರಾಂಶ

ಬಾಲಿವುಡ್ ಸ್ಟಾರ್​​ಗಳೂ ನಮ್ಮ ನಿಮ್ಮಂತೇನೆ ಇರ್ತಾರೆ. ಆದರೆ ಅವರಲ್ಲೂ ಕೆಲವು ವಿಶೇಷ ಮತ್ತು ವಿಲಕ್ಷಣ ಅಭ್ಯಾಸಗಳಿರುತ್ತವೆ. ಯಾರ್ಯಾರಿಗೆ ಏನೇನು ಖಯಾಲಿಯಿದೆ ಈ ವರದಿ ನೋಡಿ.

ಬಾಲಿವುಡ್ ಸ್ಟಾರ್​​ಗಳೂ ನಮ್ಮ ನಿಮ್ಮಂತೇನೆ ಇರ್ತಾರೆ. ಆದರೆ ಅವರಲ್ಲೂ ಕೆಲವು ವಿಶೇಷ ಮತ್ತು ವಿಲಕ್ಷಣ ಅಭ್ಯಾಸಗಳಿರುತ್ತವೆ. ಯಾರ್ಯಾರಿಗೆ ಏನೇನು ಖಯಾಲಿಯಿದೆ ಈ ವರದಿ ನೋಡಿ.

ಬಾಲಿವುಡ್ ಸ್ಟಾರ್​ಗಳು ತೆರೆ ಮೇಲೆ ಮಿಂಚುತ್ತಾರೆ. ತೆರೆ ಹಿಂದೆ ಬಿಂದಾಸ್ ಆಗಿಯೂ ಕಾಣಿಸಿಕೊಳ್ತಾರೆ. ಆದರೆ, ಪರ್ಸನಲ್  ಲೈಫ್'ನಲ್ಲಿ ಏನೇನೋ ಅಭ್ಯಾಸಳಿರುತ್ತವೆ. ಕೆಲವೊಂದು ವಿಲಕ್ಷಣವಾಗಿಯೂ ಇರ್ತವೆ.

ಸನ್ನಿ ಲಿಯೋನ್: ನೀಲಿ ಜಗತ್ತಿನ ಮಾಜಿ ರಾಣಿ ಸನ್ನಿ ಲಿಯೋನ್'ಗೆ 15 ನಿಮಿಮಕ್ಕೊಮ್ಮೆ ಕಾಲು ತೊಳೆಯೊ ಗೀಳು. ತಮ್ಮ ನುಣುಪಾದ ಪಾದಗಳನ್ನ ಪ್ರತಿ 15 ನಿಮಿಷಕೊಮ್ಮೆ ಸ್ವಚ್ಛ ಮಾಡಿಕೊಳ್ತಾರೆ. ಇದರಿಂದ ಹಲವು ಬಾರಿ ಶೂಟಿಂಗ್ ಲೇಟ್ ಆಗಿದ್ದು ಇದೆ.

ಕರೀನಾ ಕಪೂರ್: ಈಕೆಗಿದೆ ಉಗುರು ಕಚ್ಚೋ ಅಭ್ಯಾಸ. ಸೈಫ್ ಪತ್ನಿ ಕರೀನಾ ಬ್ಯೂಟಿಫುಲ್. ಒಮ್ಮೆ ನೋಡಿದರೆ ಕಳೆದು ಹೋಗಬೇಕು. ಆಗ ಈಗ ಅಲ್ಲವೇ ಅಲ್ಲ. ಅಂತಹ ಮಾಜಿ ಚೆಲುವೆ ಕೃತಕ ಉಗುರುಗಳನ್ನೇ ಧರಿಸೋದು. ಕಾರಣ, ಕರೀನಾ ಉಗುರು ಕಚ್ಚುತ್ತಾರೆ. ಈ ಅಭ್ಯಾಸ ಅಂಟಿಕೊಂಡು ಬಟ್ಟಿದೆ. ಅದು ಇನ್ನೂ ಬಿಟ್ಟು ಹೋಗಿಯೇ ಇಲ್ಲ.

ದೀಪಿಕಾ ಪಡುಕೋಣೆ: ಕನ್ನಡತಿಗಿದೆ ಜನರನ್ನ ನೋಡುವ ಖಯಾಲಿ.ಬಾಲಿವುಡ್'ನ ಬಹುಬೇಡಿಕೆ ಸುಂದರಿ ದೀಪಿಕಾರನ್ನ ಎಲ್ಲರೂ ನೋಡೋಕೆ ಇಷ್ಟಪಡ್ತಾರೆ. ದೀಪಿಕಾ ಏರ್ಪೋಟ್​'ನಲ್ಲಿ ಕಾಣಿಸಿಕೊಳ್ಳುವ ಜನರನ್ನ ಹೆಚ್ಚು ಆಸಕ್ತಿಯಿಂದ ಗಮನಿಸುತ್ತಾರೆ. ಈ ಅಭ್ಯಾಸ ಎಂದೂ ಹೋಗೋದಿಲ್ಲವಂತೆ. ಇದರ ಜೊತೆಗೆ ಜನರ ಹಿಂದಿನ ಕಥೆಗಳನ್ನು ತಿಳಿಯೋಕೆ ಉತ್ಸುಕರಾಗಿರ್ತಾರೆ ದೀಪಿಕಾ.

ಪ್ರಿಯಾಂಕಾ ಚೋಪ್ರಾ :  ಪ್ರಿಯಾಂಕಾ'ಗೆ ಶೂ ಕ್ರೇಜ್ ಹುಚ್ಚು. ಈಕೆಯ ಬಳಿಯಿವೆ 80 ಜತೆ ಡಿಫರಂಟ್ ಬ್ರ್ಯಾಂಡ್'ನ  ಶೂಗಳು.

ಸೈಫ್' ಅಲಿ ಖಾನ್ : ಈತ ನಿಜಕ್ಕೂ ಡಿಫರಂಟ್ ಮನುಷ್ಯ. ತಮ್ಮ ಬಾತ್ ರೂಮ್​ನಲ್ಲಿಯೇ ಒಂದ್ ಲೈಬ್ರರಿ ಮಾಡಿದ್ದಾರೆ. ಅಷ್ಟೇ ಅಲ್ಲ, ಪೋನ್ ಎಕ್ಸ್​ಟೆನ್ಷನ್ ಕೂಡ ಇದೆ. ಇದು ವಿಲಕ್ಷಣ ಅನಿಸಿದರೂ ಸತ್ಯ.

ಬಿಗ್ ಬಿ : ಅಮಿತಾಭ್ ಎರಡು ವಾಚ್​ಗಳನ್ನ ಧರಿಸುತ್ತಾರೆ. ಇದು ಇವರ ವಿಶೇಷ ಅಭ್ಯಾಸ. ಆದರೆ ಎಲ್ಲ ದಿನ ಎರಡು ವಾಚ್ ಧರಿಸೋದಿಲ್ಲ. ಮಗ ಅಭಿಷೇಕ್ ಮತ್ತು ಸೊಸೆ ಐಶ್ವರ್ಯ ವಿದೇಶಕ್ಕೆ ಹೋದಾಗ  2 ವಾಚ್ ಧರಿಸ್ತಾರೆ. ಮಕ್ಕಳು ಹೋದ ದೇಶದ ಟೈಮ್ ಕೂಡ ತಿಳಿಯೋ ಅಭ್ಯಾಸ ಈ ಎರಡು ವಾಚ್ ಧರಿಸೋ ಹಿಂದಿರೋ ಸತ್ಯ ಅಷ್ಟೆ.

ವಿದ್ಯಾ ಬಾಲನ್: ಈ ಬೆಡಗಿಗೆ ಪೋನ್ ಅಂದ್ರೆ ಅರ್ಲಜಿ. ಪೋನ್​ಗಳಂದ್ರೆ ದೂರವೇ ಉಳಿಯುತ್ತಾರೆ. ತಮ್ಮ ಬಳಿ ಪೋನ್ ಇದ್ದರೂ ಅದನ್ನ ನೋಡೋದು ಬಹುತೇಕ ಕಡಿಮೇನೆ.

ಸಲ್ಮಾನ್ ಖಾನ್: ಸಲ್ಲೂ'ಗೆ ಸೋಪ್'ಗಳನ್ನು ಸಂಗ್ರಹಿಸುವ ಹುಚ್ಚು. ಈತ ಸಂಗ್ರಹಿಸುವ ಸೋಪ್'ಗಳು ರಾಶಿಯನ್ನು ಎಣಿಸಲು ಗಂಟೆಯಾದರೂ ಬೇಕು.

ಶಾರುಖ್ ಖಾನ್: ಕಿಂಗ್ ಖಾನ್'ಗೆ ಜೀನ್ಸ್ ಧರಿಸೋ ಹುಚ್ಚಿದೆ. 1,500 ಜೀನ್ಸ್ ಗಳು ಶಾರುಖ್ ಬಳಿಯಿವೆ. ಇಷ್ಟೇ ಅಲ್ಲ ಪಾದರಕ್ಷೆಗಳನ್ನ ತೆಗೆದುಕೊಳ್ಳುವ ಅಭ್ಯಾಸವೂ ಇತನಿಗಿದೆ. ಒಟ್ಟಾರೆ ಸ್ಟಾರ್ ನಟರು ನಮ್ಮ ನಿಮ್ಮಂತೇನೆ ಇರೋದು. ಅವರ ಅಭ್ಯಾಸಗಳು ವಿಲಕ್ಷಣವಾಗಿರುವುದು ವಿಶೇಷ.

--

ಸ್ಯಾಂಡಲ್'ವುಡ್ ಸ್ಟಾರ್'ಗಳಿಗಿದೆ ಅತೀ ವಿಚಿತ್ರ ಅಭ್ಯಾಸಗಳು

ಸ್ಯಾಂಡಲ್ ವುಡ್ ಸ್ಟಾರ್ ಸಿನಿಮಾ ಶೂಟಿಂಗ್ ನಲ್ಲಿ ಕೆಲವು ವಿಚಿತ್ರ ಅಭ್ಯಾಸಗಳಿಗೆ ದಾಸರಾಗಿರುತ್ತಾರೆ.

ಪುನೀತ್' ರಾಜ್'ಕುಮಾರ್: ಪವರ್'ಸ್ಟಾರ್'ಗೆ ಶೂಟಿಂಗ್ ಬಿಡುವಿನ ಟೈಮಲ್ಲಿ ಹೆಚ್ಚಾಗಿ ಪೋನ್ ನಲ್ಲಿ ಸ್ನೇಹಿತರು ಹಾಗೂ ಕುಟುಂಬದ ಜೊತೆ ಮಾತನಾಡುತ್ತಾರೆ.

ಸುದೀಪ್: ಕಿಚ್ಚ ಸುದೀಪ್ ಸಿನಿಮಾ ಶಾಟ್ ಮುಗಿದ ನಂತರ ಮೊಬೈಲ್ ಹಿಡಿದು ಸ್ನೇಹಿತರು ಹಾಗು ಅಭಿಮಾನಿಗಳ ಜೊತೆ ಚಾಟಿಂಗ್ ಮಾಡ್ತಾರೆ.

ಶಿವಣ್ಣ: ಶಿವರಾಜ್ ಕುಮಾರ್ ಬಹಳ ಸಿಂಪಲ್. ಇವರು ಕ್ಯಾರವಾನ್'ನಲ್ಲಿ ಕುಳಿತುಕೊಳ್ಳದೆ ಶೂಟಿಂಗ್ ಜನಗಳ ಜೊತೆ ಹೆಚ್ಚು ಮಾತನಾಡುವ ಹವ್ಯಾಸ ಹೊಂದಿದ್ದಾರೆ.

ದರ್ಶನ್: ಚಾಲೆಂಜಿಂಗ್ ಸ್ಟಾರ್ ಮೊಬೈಲ್'ನಲ್ಲಿ  ಹೆಚ್ಚು ಗೇಮ್ ಆಡ್ತಾರೆ. ತಮ್ಮ ದೃಶ್ಯದ ಶೂಟಿಂಗ್ ಮುಗಿದ ನಂತರ ಮೊಬೈಲ್'ನಲ್ಲಿ ಗೇಮ್ ಆಡುವ ಚಟವಿದೆ.

ಯಶ್ : ರಾಕಿಂಗ್ ಸ್ಟಾರ್ ಬಿಡುವಿನ ಟೈಮಲ್ಲಿ ಸಿನಿಮಾ ಬಗ್ಗೆ ಹೆಚ್ಚು ಚರ್ಚೆ ಮಾಡ್ತಾರೆ.

ರಮ್ಯಾ:  ಸ್ಯಾಂಡಲ್ ವುಡ್ ಕ್ವೀನ್ ಅಂತಾನೇ ಕರಿಸಿಕೊಂಡಿರುವ ರಮ್ಯಾ, ಶೂಟಿಂಗ್ ನಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ  ಬಡಜನರಿಗೆ ಹಣ ಕೊಟ್ಟು ಸಹಾಯ ಮಾಡುವ ಹವ್ಯಾಸವಿದೆಯಂತೆ

ವರದಿ: ರೇವನ್ ಪಿ. ಜೇವೂರ್ ಹಾಗೂ ರವಿಕುಮಾರ್ ಎಂಕೆ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ