
ನವದೆಹಲಿ(ಮೇ.28): ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್'ಸಿ) 12ನೇ ತರಗತಿಯ 2017ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಪ್ರದೇಶ ನೋಯ್ಡಾ'ದ ರಕ್ಷಾ ಗೋಪಾಲ್ ಶೇ.99.06 ಅಂಕಗಳೊಂದಿಗೆ ಮೊದಲ ರ‌್ಯಾಂಕ್ ಹಾಗೂ ಚಂಢೀಘಡದ ಭೂಮಿ ಸಾವಂತ್ ಶೇ. 99.04 ಅಂಕದೊಂದಿಗೆ ಎರಡನೇ ರ‌್ಯಾಂಕ್ ಪಡೆದಿದ್ದಾರೆ.
ಈ ಬಾರಿ ಶೇ.82.02 ಫಲಿತಾಂಶ ಪ್ರಕಟಗೊಂಡಿದ್ದು,ಕಳೆದ ಬಾರಿಗಿಂತ(83.05) ಶೇ.1.03 ಕಡಿಮೆಯಾಗಿದೆ. ಕೇರಳದ ತಿರುವನಂತ'ಪುರ(95.62) , ಚೆನ್ನೈ(93.60) ಹಾಗೂ ದೆಹಲಿ(88.37) ಪ್ರಾಂತ್ಯದ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಲಿಂಗವಾರು ಫಲಿತಾಂಶಕ್ಕೆ ಹೋಲಿಸಿದರೆ ವಿದ್ಯಾರ್ಥಿನಿಯರು(87.05) ವಿದ್ಯಾರ್ಥಿ'ಗಳಿಗಿಂತ(78) ಹೆಚ್ಚು ತೇರ್ಗಡೆಯಾಗಿದ್ದಾರೆ. ಆದರೆ 2016ನೇ ಸಾಲಿಗಿಂತ ಶೇ.1ರಷ್ಟು ಕಡಿಮೆಯಾಗಿದೆ.
ಈ ಬಾರಿ 10,76,761 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 10,20,762 ಮಂದಿ ಮಾತ್ರ ಬರೆದಿದ್ದರು. ಮಂಡಳಿ ಮರು ಮೌಲ್ಯಮಾಪನ ನಿಯಮವಿಲ್ಲವೆಂದು ಕಠಿಣವಾಗಿ ತನ್ನ ನಿರ್ಧರಿಸಿದ್ದು,. ವಿದ್ಯಾರ್ಥಿಗಳ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಮಾಲೋಚನೆಗಾಗಿ 1800 11 8004 ಸಂಖ್ಯೆಯನ್ನು ಪ್ರಕಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.