ಶಿವಕಾಶಿ ಪಟಾಕಿ ಉದ್ಯಮ ಬಂದ್

By Suvarna Web DeskFirst Published Dec 24, 2017, 11:59 AM IST
Highlights
  • 8 ಲಕ್ಷ ಉದ್ಯೋಗಿಗಳಿಗೆ ಸಂಕಷ್ಟ
  • ಕಳೆದ ದೀಪಾವಳಿ ಸಂದರ್ಭ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಸುಪ್ರೀಂ ನಿಷೇಧ

ಚೆನ್ನೈ: ಪಟಾಕಿ ಉದ್ಯಮದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇರುವುದರಿಂದ, ತಮಿಳುನಾಡಿನ ಶಿವಕಾಶಿಯಲ್ಲಿನ ಪಟಾಕಿ ತಯಾರಕ ಕಂಪೆನಿಗಳು ತಮ್ಮ ಘಟಕಗಳನ್ನು ಮುಚ್ಚಲು ನಿರ್ಧರಿಸಿವೆ.

ಕಾನೂನು ಪರಿಹಾರ ದೃಢಗೊಳ್ಳುವವರೆಗೂ ಶನಿವಾರದಿಂದ ಪಟಾಕಿ ಘಟಕಗಳು ಮುಚ್ಚಲಿವೆ ಎಂದು ಅಖಿಲ ಭಾರತ ಪಟಾಕಿ ತಯಾರಕ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಈ ನಿರ್ಧಾರ ಪಟಾಕಿ ತಯಾರಕ ಉದ್ಯಮದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ 8 ಲಕ್ಷ ಜನರ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರಲಿದೆ.

ಪ್ರಕರಣವನ್ನು ಸುಪ್ರೀಂ ಕೋರ್ಟ್ ಬೇಗನೇ ಆಲಿಸಿ, ಅನಿಶ್ಚಿತತೆಯನ್ನು ನಿವಾರಿಸುವ ನಿಟ್ಟಿನಲ್ಲಿ ತೀರ್ಪು ಬರಲಿ ಎಂಬುದಾಗಿ ಪಟಾಕಿ ಉದ್ಯಮ ಬಯಸುತ್ತದೆ ಎಂದು ಎಐಎಫ್‌ಎಫ್‌ಎ ಉಪಾಧ್ಯಕ್ಷ ಕೆ. ಮರಿಯಪ್ಪನ್ ಹೇಳಿದ್ದಾರೆ.

ಕಳೆದ ದೀಪಾವಳಿ ಸಂದರ್ಭ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

click me!