
ನೋಯ್ಡಾ (ಡಿ.24): ಅತ್ಯಂತ ಕಾತುರತೆಯಿಂದ ಕಾಯುತ್ತಿದ್ದ, ಡೆಲ್ಲಿ ಮೆಟ್ರೋದ ಮೆಜೆಂತಾ ಲೈನ್ ಉದ್ಘಾಟನೆ ನಾಳೆ ನಡೆಯುತ್ತಿದೆ. ನೋಯ್ಡಾದ ಬೊಟಾನಿಕಲ್ ಗಾರ್ಡನ್’ನಿಂದ ಡೆಲ್ಲಿಯ ಕಲ್ಕಾಜಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆ ದೊರೆಯುತ್ತಿದೆ.
ಹೊಸ ಲೈನ್’ ಮೆಟ್ರೋದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸುತ್ತಿದ್ದು, ಆದರೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ.
ಇದಕ್ಕೆ ಪ್ರಮುಖ ಕಾರಣ ವಿಐಪಿ ಆಹ್ವಾನಿತರ ಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಇಲ್ಲದಿರುವುದೇ ಆಗಿದೆ.
ಇನ್ನು ಈ ಹೊಸ ಮೆಟ್ರೋ ಲೈನ್’ ಸೇವೆಯಿಂದ ದಿಲ್ಲಿ ಹಾಗೂ ನೋಯ್ಡಾಗೆ ಸಂಚರಿಸುವ ಅನೇಕ ಪ್ರಯಾಣಿಕರ ಸಮಯವೂ ಕೂಡ ಉಳಿತಾಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.