ಗಾನಕೋಗಿಲೆ ಪ್ರಶಸ್ತಿಗೆ ಜಾನಕಿ, ರಾಷ್ಟ್ರೀಯ ಪ್ರಶಸ್ತಿಗೆ ರಾಜೇಶ್ ಕೃಷ್ಣನ್ ಭಾಜನ

Published : Jan 25, 2018, 05:19 PM ISTUpdated : Apr 11, 2018, 12:47 PM IST
ಗಾನಕೋಗಿಲೆ ಪ್ರಶಸ್ತಿಗೆ ಜಾನಕಿ, ರಾಷ್ಟ್ರೀಯ ಪ್ರಶಸ್ತಿಗೆ ರಾಜೇಶ್ ಕೃಷ್ಣನ್ ಭಾಜನ

ಸಾರಾಂಶ

ಮನಸ್ಮಿತ ಫೌಂಡೇಷನ್ ಕೊಡ ಮಾಡುವ  2018 ನೇ ಸಾಲಿನ ಗಾನ ಕೋಗಿಲೆ ಪ್ರಶಸ್ತಿಗೆ  ಡಾ.ಎಸ್. ಜಾನಕಿ ಭಾಜನರಾಗಿದ್ದಾರೆ.  ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ  ರಾಜೇಶ್ ಕೃಷ್ಣನ್ ಭಾಜನರಾಗಿದ್ದಾರೆ.

ಬೆಂಗಳೂರು (ಜ.25): ಮನಸ್ಮಿತ ಫೌಂಡೇಷನ್ ಕೊಡ ಮಾಡುವ  2018 ನೇ ಸಾಲಿನ ಗಾನ ಕೋಗಿಲೆ ಪ್ರಶಸ್ತಿಗೆ  ಡಾ.ಎಸ್. ಜಾನಕಿ ಭಾಜನರಾಗಿದ್ದಾರೆ.  ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ  ರಾಜೇಶ್ ಕೃಷ್ಣನ್ ಭಾಜನರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನಸ್ಮಿತ  ಫೌಂಡೇಶನ್ ಕೋಟ  ಸಂಚಾಲಕ ಡಾ.ಸತೀಶ್ ಪೂಜಾರಿ, ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿದೆ. ಮನಸ್ಮಿತ ಫೌಂಡೇಶನ್ ಕೋಟ ಹಾಗೂ ಗೀತಾನಂದ ಫೌಂಡೇಶನ್ ಮಣೂರು, ಯುವ ಮೆರಿಡಿಯನ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಫೆ.24 ರಂದು ಕುಂದಾಪುರದ ಒಪೇರಾ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಇದೇ ಸಂದರ್ಭದಲ್ಲಿ ಉಚಿತ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ವೇಳೆ ಮನಸ್ಮಿತ ಫೌಂಡೇಶನ್ ಸಂಚಾಲಕ ಉದಯ ಕುಮಾರ್ ಶೆಟ್ಟಿ, ಡಾ. ಪ್ರಕಾಶ್ ತೋಳಾರ್, ಸುಬ್ರಹ್ಮಣ್ಯ ಶೆಟ್ಟಿ, ಯಾಕೂಬ್ ಖಾದರ್ ಗುಲ್ವಾಡಿ ಇದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

International Yoga day: 5000 ವರ್ಷಗಳ ಇತಿಹಾಸವಿರುವ ಯೋಗದಲ್ಲಿ ಅಡಗಿದೆ ರಹಸ್ಯ, ಇದು ತಿಳಿದವರೇ ಸುಖಿ, ಆರೋಗ್ಯವಂತರು!
Prakash Raj in Trouble: ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ!