
ಬೆಂಗಳೂರು [ಜು.31]: ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಅವರು ತಮ್ಮ ಬೃಹತ್ ಸಾಮ್ರಾಜ್ಯವನ್ನು ಬಿಟ್ಟು ತೆರಳಿದ್ದಾರೆ. ನೇತ್ರಾವತಿಯಲ್ಲಿ ತಮ್ಮ ಜೀವನ ಕೊನೆಗೊಳಿಸಿದ್ದಾರೆ.
ಈ ಸಾವಿರಾರು ಕೋಟಿ ಒಡೆಯ ನಷ್ಟದಲ್ಲಿದ್ದ ಕಂಪನಿಯೊಂದನ್ನು ಭಾರೀ ಲಾಭದತ್ತ ಕೊಂಡೊಯ್ದಿದ್ದರು. ಸಣ್ಣ ಉದ್ಯಮಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸುವ ಬುದ್ದಿವಂತಿಕೆಯು ಇವರ ಬಳಿ ಇತ್ತು. ಹಿಂದೆಲ್ಲಾ ಕಾಫಿ ಬೆಳೆಗಾರರು ತಾವು ಬೆಳೆದ ಬಹುತೇಕ ಉತ್ಪನ್ನವನ್ನು ಕಾಫಿ ಮಂಡಳಿಗೇ ಮಾರಬೇಕಿತ್ತು. 1993ರ ಉದಾರೀಕರಣದ ಫಲವಾಗಿ ಆ ನಿರ್ಬಂಧ ರದ್ದಾಯಿತು.
ಕಣ್ಮರೆಯಾದ ಕಾಫಿವಾಲನಿಗೆ ಜಾಗತಿಕ ಮಾಧ್ಯಮ ಕೊಟ್ಟ ಬಿರುದು ಒಂದೋ, ಎರಡೋ...
ಅದರಿಂದ ಮೊದಲು ಪ್ರತಿಫಲ ಪಡೆದವರು ಸಿದ್ಧಾರ್ಥ. ತಡಮಾಡದೇ ಅಮಾಲ್ಗಮೇಟೆಡ್ ಬೀನ್ ಕಾಫಿ (ಎಬಿಸಿ) ಎಂಬ ಕಂಪನಿ ಹುಟ್ಟು ಹಾಕಿದರು. ಆ ಕಾಲಕ್ಕೆ ಕಂಪನಿಯ ವಾರ್ಷಿಕ ಆದಾಯ 6 ಕೋಟಿ ರು. ಇತ್ತು. ಹಾಸನದ ಕಾಫಿ ಕ್ಯೂರಿಂಗ್ ಘಟಕವೊಂದು ಭಾರಿ ನಷ್ಟದಲ್ಲಿತ್ತು.
'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!
4 ಕೋಟಿ ರು.ಗೆ ಅದನ್ನು ಖರೀದಿಸಿದ ಸಿದ್ಧಾರ್ಥ ಅದನ್ನು ಲಾಭದ ಹಳಿಗೆ ತಂದರು. ಬಳಿಕ ದೇಶದ ಅತಿದೊಡ್ಡ ಕಾಫಿ ಕ್ಯೂರಿಂಗ್ ಕೇಂದ್ರವಾಗಿ ಪರಿವರ್ತಿಸಿದರು. ಸಿದ್ಧಾರ್ಥ ಅವರ ಬಳಿ ಈ 12000 ಎಕರೆಗಿಂತಲೂ ಅಧಿಕ ಕಾಫಿ ತೋಟವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.