ದೊಡ್ಡ ಕಾಫಿ ಎಸ್ಟೇಟ್ ಮಾಲಿಕನ ಮಗನಾಗಿದ್ದ ಸಿದ್ಧಾರ್ಥ್ ತಮ್ಮದೇ ಆದ ಉದ್ಯಮ ಸ್ಥಾಪಿಸಲು ಮನಸ್ಸು ಮಾಡಿದರು. ಆಗ ತಂದೆಯ ಬಳಿ ನಿಂತು ಸಹಾಯ ಕೇಳಿದಾಗ ಅವರು ಹಣ ನೀಡಿ ಸೋತಾಗ ಮನೆಗೆ ಬಾ ಎಂದಿದ್ದರು. ಆದರೆ ಅವರು ಸೋಲಲಿಲ್ಲ. ಎತ್ತರಕ್ಕೆ ಏರಿದರು.
ಚಿಕ್ಕಮಗಳೂರು [ಜು.31]: ಕಾಫಿ ಡೇ ಎಂಬ ಬೃಹತ್ ಉದ್ಯಮದ ಜೊತೆಗೆ ಹಲವು ಕಂಪನಿಗಳನ್ನು ಸ್ಥಾಪಿಸಿ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದವರು ಮಲೆನಾಡ ಹುಡುಗ ಸಿದ್ಧಾರ್ಥ್.
ಆದರೆ ನೇತ್ರಾವತಿಯಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಸಾವಿರಾರು ಕೋಟಿ ವ್ಯವಹಾರದ ಸಾಮ್ರಾಜ್ಯ ತೊರೆದು ಹೋದರು.
undefined
ಕಣ್ಮರೆಯಾದ ಕಾಫಿವಾಲನಿಗೆ ಜಾಗತಿಕ ಮಾಧ್ಯಮ ಕೊಟ್ಟ ಬಿರುದು ಒಂದೋ, ಎರಡೋ...
ಬಹುದೊಡ್ಡ ಕಾಫಿ ಎಸ್ಟೇಟ್ ಮಾಲೀಕರಾಗಿದ್ದ ತಂದೆ ಗಂಗಯ್ಯ ಹೆಗ್ಡೆ ಅವರು 1985ರಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದ ಸಿದ್ಧಾರ್ಥ ಸ್ವಂತ ಉದ್ಯಮ ಆರಂಭಿಸಲು ನಿರ್ಧರಿಸಿದ್ದರಿಂದ ತಂದೆಯ ಬಳಿ ಸಹಾಯ ಕೇಳಿದ್ದರು.
'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!
ಬೇಕಾದ ಬಂಡವಾಳಕ್ಕಾಗಿ ತಂದೆ ಮುಂದೆ ನಿಂತಾಗ 7.5 ಲಕ್ಷ ರು.ಗಳನ್ನು ಕೈಗಿತ್ತ ಸಿದ್ಧಾರ್ಥ ಅವರ ತಂದೆ, ಇದನ್ನು ಕಳೆದುಕೊಂಡಾಗ ನೀನು ಮನೆಗೆ ವಾಪಸ್ ಬರಬಹುದು. ಹೇಗಿದ್ದರೂ ಕುಟುಂಬದ ಕಾಫಿ ಉದ್ಯಮವಿದೆ ಎಂದು ಹೇಳಿದ್ದರು. ಆದರೆ ಸಿದ್ಧಾರ್ಥ ಆ ಹಣವನ್ನು ಕಳೆದುಕೊಳ್ಳಲಿಲ್ಲ. ಬದಲಿಗೆ ಬೆಳೆಸಿದರು. ಕಾಫಿಯ ಘಮಲನ್ನು ವಿಶ್ವಾವ್ಯಾಪಿ ಮಾಡಿ ಲಕ್ಷಾಂತರ ಜನರ ಅನ್ನದಾತರಾದರು.