ವಿಭಿನ್ನವಾಗಿ, ವಿಶಿಷ್ಟ ರೀತಿಯಲ್ಲಿ, ವಿನೂತನ ಶೈಲಿಯಲ್ಲಿ ಹಾಗೂ ವಿವಿಧ ಸ್ವಾದದಲ್ಲಿ ವಿಶ್ವದಾದ್ಯಂತ ಕಾಫಿಯನ್ನು ಕುಡಿಸಿದ ಸಿದ್ಧಾರ್ಥ ಕಣ್ಮರೆಯಾಗಿದ್ದಾರೆ. ಸಿದ್ಧಾರ್ಥ ದುರಂತ ಸಾವು ಉದ್ಯಮ ವಲಯದಲ್ಲಷ್ಟೇ ಅಲ್ಲ, ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಹಿಡಿದು, ಮಾಧ್ಯಮ, ರಾಜಕೀಯ ನಾಯಕರವರೆಗೂ ಆಘಾತವುಂಟು ಮಾಡಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ‘ಸಿದ್ಧಾರ್ಥ’ರನ್ನು ಬಣ್ಣಿಸಿದ್ದು ಹೀಗೆ....
ಬೆಂಗಳೂರು (ಜು.31): ಕೆಫೆ ಕಾಫಿ ಡೇ ಮೂಲಕ ಕಾಫಿ ಕಂಪನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಕನ್ನಡಿಗ ಉದ್ಯಮಿ ವಿ.ಜಿ.ಸಿದ್ಧಾರ್ಥ ಇನ್ನಿಲ್ಲ.
ಕೆಫೆ ಕಾಫಿ ಡೇ ಮೂಲಕ ಜನಜನಿತರಾಗಿದ್ದ ಸಿದ್ಧಾರ್ಥ, ಉದ್ಯಮ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿ, ಯುವಸಮುದಾಯದಲ್ಲಿ ಉದ್ಯೋಗದಾತರಾಗಿ, ಗೆಳೆಯರ ಬಳಗದಲ್ಲಿ ಒಳ್ಳೆಯ ಸ್ನೇಹಿತರಾಗಿ ಗುರುತಿಸಿಕೊಂಡವರು.
undefined
ಸಹಜವಾಗಿ, ಸಿದ್ಧಾರ್ಥ ಸಾವು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾಗಿರುವುದರಿಂದ ಹಿಡಿದು, ಮೃತದೇಹ ಪತ್ತೆಯಾಗಿರುವ, ಹಾಗೂ ಅವರಿಗೆ ಸಂಬಂಧಿತ ಇನ್ನಿತರ ಸುದ್ದಿಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಸತತವಾಗಿ ಪ್ರಕಟಿಸಿವೆ.
ಅಮೆರಿಕಾ, ಅರಬ್ ದೇಶಗಳು, ಇಂಗ್ಲಂಡ್ ಸೇರಿದಂತೆ ಯೂರೋಪಿನ ಇನ್ನಿತರ ದೇಶದ ಮಾಧ್ಯಮಗಳು ಸಿದ್ಧಾರ್ಥರ ದುರಂತ ಅಂತ್ಯವನ್ನು ನಿರಂತರವಾಗಿ ವರದಿ ಮಾಡುತ್ತಿವೆ.
ಇದನ್ನೂ ಓದಿ | ‘IT ದಾಳಿ ಬಳಿಕ ವ್ಯವಹಾರ ಏರಿಳಿತ : ನೋವನ್ನು ಯಾರ ಬಳಿಯೂ ಹೇಳುತ್ತಿರಲಿಲ್ಲ’
CNN ಸಿದ್ಧಾರ್ಥರನ್ನು ಇಂಡಿಯಾ’ಸ್ ಕಾಫಿ ಕಿಂಗ್ ಎಂದು ಬಣ್ಣಿಸಿದ್ದರೆ, BBCಯು ಕೆಫೆ ಕಾಫಿ ಡೇ ಟೈಕೂನ್ ಎಂದು ಕರೆದಿದೆ. The Independent ಬಿಲಿಯನೇರ್ ಇಂಡಿಯನ್ ಕಾಫಿ ಟೈಕೂನ್ ಎಂದು ವ್ಯಾಖ್ಯಾನಿಸಿದ್ದರೆ, The Guardian ಇಂಡಿಯಾಸ್ ಕಾಫಿ ಟೈಕೂನ್ ಎಂದು ಹೇಳಿದೆ.
Newyork Times ಕಾಫಿ ಟೈಕೂನ್ ಎಂದಿದ್ದರೆ, Washingpost ಲಾರ್ಜೆಸ್ಟ್ ಕಾಫಿ ಚೈನ್ ಓನರ್ ಎಂದು ಕರೆದಿದೆ. AFPಯು ಇಂಡಿಯನ್ ಕಾಫಿ ಮ್ಯಾಗ್ನೇಟ್ ಎಂದು ಬಣ್ಣಿಸಿದ್ದರೆ, Reuters ಇಂಡಿಯನ್ ಕಾಫಿ ಇಂಡಸ್ಟ್ರಿ ಟೈಕೂನ್ ಎಂದು ಹೇಳಿದೆ.
Khaleej Times ಸಿದ್ಧಾರ್ಥರನ್ನು ಕಾಫಿ ಬ್ಯಾರನ್ ಎಂದು ಉಲ್ಲೇಖಿಸಿದ್ದರೆ, ಫೋರ್ಬ್ಸ್ ಬಿಲಯನೇರ್ ಫೌಂಡರ್ ಆಫ್ ಕಾಫಿ ಡೇ ಎಂದಿದೆ.