ಸಿದ್ದರಾಮಯ್ಯಗೆ ನೋಟಿಸ್, ಕ್ರಿಸ್ಮಸ್‌ಗೆ ಡಿಬಾಸ್ ಕೊಡ್ತಾರೆ ಗಿಫ್ಟ್; ಡಿ.21ರ ಟಾಪ್ 10 ಸುದ್ದಿ!

Published : Dec 21, 2019, 05:12 PM ISTUpdated : Dec 21, 2019, 05:43 PM IST
ಸಿದ್ದರಾಮಯ್ಯಗೆ ನೋಟಿಸ್, ಕ್ರಿಸ್ಮಸ್‌ಗೆ ಡಿಬಾಸ್ ಕೊಡ್ತಾರೆ ಗಿಫ್ಟ್; ಡಿ.21ರ ಟಾಪ್ 10 ಸುದ್ದಿ!

ಸಾರಾಂಶ

ಪೌರತ್ವ ಕಾಯ್ದೆ ಕಿಚ್ಚಿಗೆ ಹಲವರು ಬಲಿಯಾಗಿದ್ದಾರೆ. ಮಂಗಳೂರಿನಲ್ಲಿ ಕರ್ಫ್ಯೂ ಹೇರಿದ್ದರೂ, ಗಲಭೆ ಪೀಡಿತ ನಗರಕ್ಕೆ ಭೇಟಿ ನೀಡಲು ಮುಂದಾದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಪೊಲೀಸ್ ನೊಟೀಸ್ ನೀಡಲಾಗಿದೆ. ಇತ್ತ ಮುಸ್ಲಿಂ ಮೌಲ್ವಿಗಳ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಪ್ರತಿಭಟನೆ ವೇಳೆ ಹಿಂದುತ್ವದ ಕುರಿತು ಅಶ್ಲೀಲ ಪೋಸ್ಟ್‌ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕ್ರಿಸ್ಮಸ್‌ಗೆ ಡಿ ಬಾಸ್ ದರ್ಶನ್ ಗಿಫ್ಟ್, ಅಂತಿಮ ಏಕದಿನ ಪಂದ್ಯಕ್ಕೆ ಬದಲಾವಣೆ ಸೇರಿದಂತೆ ಡಿ.22ರ ಟಾಪ್ 10 ಸುದ್ದಿ ಇಲ್ಲಿವೆ.

ಪೌರತ್ವ ಕಾಯ್ದೆ ಕಿಚ್ಚು: ಸಿದ್ದರಾಮಯ್ಯಗೆ ಪೊಲೀಸ್ ನೋಟಿಸ್

ಗಲಭೆಪೀಡಿತ ನಗರಕ್ಕೆ ಭೇಟಿ ನೀಡಲು ಮುಂದಾಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಂಗಳೂರು ಪೊಲೀಸ್ ಆಯುಕ್ತರು ನೋಟಿಸ್ ನೀಡಿದ್ದಾರೆ. ರಸ್ತೆ , ರೈಲು, ವಾಯುಯಾನದ ಮುಖಾಂತರ ಮಂಗಳೂರಿಗೆ ಬರುವಂತಿಲ್ಲ ಎಂದು ಉಲ್ಲೇಖಿಸಿ ನೊಟೀಸ್ ನೀಡಲಾಗಿದೆ.

ಮುಸ್ಲಿಂ ಮೌಲ್ವಿಗಳ ವಿರುದ್ಧ ಹರಿಹಾಯ್ದ ಒವೈಸಿ: ಕಾರಣ?

ಪೌರತ್ವ ಕಾಯ್ದೆ ತಿದ್ದುಪಡಿಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಮೌಲ್ವಿಗಳ ವಿರದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಇಡೀ ದೇಶವೇ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಆದರೆ ಕೆಲವು ಮೌಲ್ವಿಗಳು ಕಾಯ್ದೆಯನ್ನು ಬೆಂಬಲಿಸುವ ಮೂಲಕ  ತಮ್ಮ ಅಜ್ಞಾನವನ್ನು ಹೊರಗಡೆವಿದ್ದಾರೆ ಎಂದು ಒವೈಸಿ ಹರಿಹಾಯ್ದಿದ್ದಾರೆ.

ಸಚಿವರಿಂದಲೇ ಗಲಭೆಗೆ ಕುಮ್ಮಕ್ಕು: ದೇವೇಗೌಡ.

ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಂಗಳೂರಿನಲ್ಲಿ ನಡೆದ ಘಟನೆ ದುರದೃಷ್ಟಕರ. ಅಮಾಯಕ ಯುವಕರಿಬ್ಬರು ಪೊಲೀಸರ ಗೋಲಿಬಾರ್‌ಗೆ ಬಲಿಯಾಗಿದ್ದಾರೆ. ಸಚಿವರೇ ಗಲಭೆಗೆ ಕುಮ್ಮಕ್ಕು ಕೊಡುವಂತಹ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುತ್ತಿರುವುದು ಖಂಡನಾರ್ಹ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ವೇಳೆ ಹಿಂದುತ್ವದ ಕುರಿತು ಅಶ್ಲೀಲ ಪೋಸ್ಟ್.

CAA ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇದೇ ವೇಳೆ ನೂರಾರು ಮಂದಿ ಆಂಗ್ಲಭಾಷೆಯ ಎಫ್‌ ಪದ ಬಳಸಿ ಅವಾಚ್ಯವಾಗಿ ನಿಂದಿಸುವ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಪ್ರತಿಭಟನಾಕಾರರ ಈ ಪೋಸ್ಟರ್‌ಗೆ ತೀವ್ರ ವಿರೋಧ ವ್ಯಕ್ತವಾಗಿದೆ.


ಮೃತ ಕಟುಂಬಗಳಿಗೆ ಸಾಂತ್ವನ ಹೇಳಿದ ಸಿಎಂ ಯಡಿಯೂರಪ್ಪ!

ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರ ಗೋಲಿಬಾರ್‌ಗೆ ಬಲಿಯಾದ ಇಬ್ಬರು ವ್ಯಕ್ತಿಗಳ ಮನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಗರದ ಸರ್ಕಿಟ್ ಹೌಸ್‌ನಲ್ಲಿ ಸಭೆ ನಡೆಸಲು ಆಗಮಿಸಿರುವ ಯಡಿಯೂರಪ್ಪ ಅವರು ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ್ದ ಇಬ್ಬರು ವ್ಯಕ್ತಿಗಳ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.

INDvWI ನಿರ್ಣಾಯಕ ಪಂದ್ಯ: ಟೀಂ ಇಂಡಿಯಾದಲ್ಲಿ 1 ಬದಲಾವಣೆ ಖಚಿತ!

ಐಪಿಎಲ್ ಹರಾಜಿನ ಬಳಿಕ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮತ್ತೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯತ್ತ ನೆಟ್ಟಿದೆ. ಇಂಡೋ-ವಿಂಡೀಸ್ ಏಕದಿನ ಸರಣಿ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಡಿ.22ರಂದು ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. 

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

 IPL ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಖರೀದಿಸಿದ ಏಕೈಕ ಕನ್ನಡಿಗ ಪವನ್ ದೇಶಪಾಂಡೆ. ಇದೀಗ RCB ತಂಡದಲ್ಲಿ ಕನ್ನಡಿಗರ ಸಂಖ್ಯೆ ಎರಡಕ್ಕೇರಿದೆ. RCB  ತಂಡ ಸೇರಿಕೊಂಡಿರುವ ಪವನ್ ದೇಶಪಾಂಡೆ ಸುವರ್ಣನ್ಯೂಸ್.ಕಾಂ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಡಿ-ಬಾಸ್‌ ಕೊಡ್ತಿದ್ದಾರೆ ಕ್ರಿಸ್‌ಮಸ್‌ ಗಿಫ್ಟ್‌; 'ರಾಬರ್ಟ್ ಆರ್ಭಟ'

ಕನ್ನಡ ಚಿತ್ರರಂಗದ 'ಒಡೆಯ' ಸಿನಿ ಪ್ರೇಕ್ಷಕರ 'ಯಜಮಾನ', ಬಾಕ್ಸ್‌ ಆಫೀಸ್‌ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ಈಗ ಫಸ್ಟ್ ಲುಕ್ ರಿವೀಲ್ ಮಾಡಲು ರೆಡಿಯಾಗಿದೆ.

ಬಾಲಿವುಡ್‌ ಸಿನಿಮಾಗೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಅಬ್ಬಬ್ಬಾ..!

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸೌತ್ ಇಂಡಿಯನ್‌ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟ. 'ಗೀತಾ- ಗೋವಿಂದಂ', 'ಡಿಯರ್ ಕಾಮ್ರೆಡ್' ಭಾರೀ ಸಕ್ಸಸ್ ನಂತರ ಇವರ ಸಂಭಾವನೆ ಗಗನ ಮುಟ್ಟಿದೆ. 

ಕೇಂದ್ರದ ವಿರುದ್ಧ ತಿರುಗಿಬಿದ್ದ ಬ್ಯಾಂಕ್ ನೌಕರರು, ಜನವರಿಯಲ್ಲಿ ಸಾರ್ವತ್ರಿಕ ಮುಷ್ಕರ!

ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳು ಹಾಗೂ ಬ್ಯಾಂಕಿಂಗ್‌ ವಲಯದಲ್ಲಿನ ಸುಧಾರಣೆಗಳನ್ನು ಖಂಡಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರ ಐದು ಸಂಘಟನೆಗಳು ಜ.8ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ