
ರಾಯ್‌ಪುರ್(ಡಿ.21): ಎನ್‌ಆರ್‌ಸಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ಛತ್ತೀಸ್‌ಗಡ್ ಸಿಎಂ ಭೂಪೇಶ್ ಬಾಗೆಲ್, ಎನ್‌ಆರ್‌ಸಿ ಜಾರಿಯಾದರೆ ರಾಜ್ಯದ ಅರ್ಧ ಜನಸಂಖ್ಯೆಗೆ ತನ್ನ ಪೌರತ್ವ ಸಾಬೀತುಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು 2024 ಡೆಡ್‌ಲೈನ್; ಎನ್‌ಆರ್‌ಸಿ ಜಾರಿ ಹೇಗೆ?
ರಾಜ್ಯದ ಅರ್ಧ ಜನಸಂಖ್ಯೆ ಬಳಿ ಪೌರತ್ವ ಸಾಬೀತುಪಡಿಲು ಭೂಮಿಯಾಗಲಿ, ಆಸ್ತಿಯಾಗಲಿ ಅಥವಾ ಯಾವುದೇ ದಾಖಲೆಗಳಾಗಲಿ ಇಲ್ಲ ಎಂದು ಬಾಗೆಲ್ ಮಾರ್ಮಿಕವಾಗಿ ಹೇಳಿದ್ದಾರೆ.
ಅಶಿಕ್ಷಿತ ಸಮುದಾಯದ ಜನರ ಪೂರ್ವಜರು ರಾಜ್ಯದ ವಿವಿಧ ಹಳ್ಳಿಗಳಿಂದ ಬೇರೆ ಬೇರೆ ಕಡೆ ವಲಸೆ ಬಂದಿದ್ದು, ಅವರ ಬಳಿ ಪೌರತ್ವ ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂದು ಬಾಗೆಲ್ ಹೇಳಿದರು.
1906ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ದ.ಆಫ್ರಿಕಾದಲ್ಲಿ ಗುರುತು ಯೋಜನೆ ಜಾರಿಗೆ ತರಲು ಮುಂದಾದಾಗ ಮಹಾತ್ಮಾ ಗಾಂಧಿ ಅದನ್ನು ವಿರೋಧಿಸಿದ್ದರು ಎಂದು ಬಾಗೆಲ್ ನೆನಪಿಸಿದರು.
2024ರೊಳಗೆ ಅಕ್ರಮ ವಿದೇಶಿ ವಲಸಿಗರನ್ನು ಹೊರಗಟ್ಟುತ್ತೇವೆ
ಅದರಂತೆ ಛತ್ತೀಸ್‌ಗಡ್‌ದಲ್ಲಿ ಎನ್‌ಆರ್‌ಸಿ ಜಾರಿಗೆ ತಮ್ಮ ವಿರೋಧವಿದೆ ಎಂದು ಸಿಎಂ ಭೂಪೇಶ್ ಬಾಗೆಲ್ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ