ಸಿದ್ದರಾಮಯ್ಯ ಮಡಿಕೇರಿ ರೆಸಾರ್ಟ್ ವಾಸ ಅಂತ್ಯ

Published : May 08, 2019, 09:32 AM IST
ಸಿದ್ದರಾಮಯ್ಯ ಮಡಿಕೇರಿ ರೆಸಾರ್ಟ್ ವಾಸ ಅಂತ್ಯ

ಸಾರಾಂಶ

ಕೊಡಗಿನಲ್ಲಿ ಎರಡು ದಿನದ ವಾಸ್ತವ್ಯ ಮುಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರನೊಂದಿಗೆ ಮೈಸೂರಿಗೆ ಹಿಂತಿರುಗಿದ್ದಾರೆ. 

ಮಡಿಕೇರಿ (ಮೇ. 08): ಕೊಡಗಿನಲ್ಲಿ ಎರಡು ದಿನದ ವಾಸ್ತವ್ಯ ಮುಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರನೊಂದಿಗೆ ಮಂಗಳವಾರ ಹಿಂತಿರುಗಿದ್ದಾರೆ.

ಭಾನುವಾರ ಸಂಜೆ 5.30 ಕ್ಕೆ ಮಡಿಕೇರಿಯ ಹೊರ ವಲಯದಲ್ಲಿರುವ ಇಬ್ಬನಿ ರೆಸಾರ್ಟ್‌ಗೆ ಪುತ್ರ ಯತೀಂದ್ರ ಜೊತೆ ಆಗಮಿಸಿದ್ದ ಸಿದ್ದರಾಮಯ್ಯ, ಎರಡು ದಿನ ರೆಸಾರ್ಟ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ 11.40 ಕ್ಕೆ ರೆಸಾರ್ಟ್‌ನಿಂದ ಮೈಸೂರಿಗೆ ತೆರಳಿದರು. ರೆಸಾರ್ಟ್ ವಾಸ್ತವ್ಯದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದರಾಮಯ್ಯ, ‘ದಯವಿಟ್ಟು ಕಾಯಬೇಡಿ, ಹೋಗಿ ಇನ್ಮೇಲೆ’ ಎಂದಷ್ಟೇ ಹೇಳಿ ಮೈಸೂರು ಕಡೆ ತೆರಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ
VIjay TVK: ಬೆಚ್ಚಿಬಿದ್ದ ವಿಜಯ್‌ ದಳಪತಿ; ಹೂ ಕಂಡು ಎದ್ನೋ ಬಿದ್ನೋ ಎಂದು ಓಡಿದ್ಯಾಕೆ ತಮಿಳು ಹೀರೋ?