ವೈರಲ್‌ ಚೆಕ್‌ :ಬಿಜೆಪಿ ಅಧಿಕಾರಕ್ಕೆ ಬರದೇ ಹೋದರೆ ದೇಶಕ್ಕೆ ಬೆಂಕಿ ಅಂದ್ರಾ ಯೋಗಿ?

By Web DeskFirst Published May 8, 2019, 9:10 AM IST
Highlights

ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬರದೇ ಹೋದರೆ ಇಡೀ ದೇಶವನ್ನು ಸುಟ್ಟುಬಿಡುತ್ತೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ ಎಂಬ ಟೀವಿ ಸ್ಕ್ರೀನ್‌ಶಾಟ್‌ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ। ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ. 

ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬರದೇ ಹೋದರೆ ಇಡೀ ದೇಶವನ್ನು ಸುಟ್ಟುಬಿಡುತ್ತೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ ಎಂಬ ಟೀವಿ ಸ್ಕ್ರೀನ್‌ಶಾಟ್‌ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಪಿಂಕು ಗಿರಿ’ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ,‘ಸಾರ್ವತ್ರಿಕ ಚುನಾವಣೆಯ ಸೋಲಿನ ಭೀತಿ ಕಾಡುತ್ತಿದ್ದಂತೇ ಯೋಗಿ ತಮ್ಮ ನಿಜವಾದ ಮುಖವನ್ನು ಬಹಿರಂಗ ಪಡಿಸಿದ್ದಾರೆ’ ಎಂದು ಒಕ್ಕಣೆ ಬರೆದು ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಪ್ರೊಫೈಲ್‌ನಲ್ಲಿ ತಾನು ದರ್ಭಾಂಗ ಜಿಲ್ಲೆಯ ಕಾಂಗ್ರೆಸ್‌ ಐಟಿ ಸೆಲ್‌ ಮುಖ್ಯಸ್ಥನೆಂದು ಬರೆದುಕೊಂಡಿದ್ದಾನೆ. ಅನಂತರ ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಈ ಚಿತ್ರ ವೈರಲ್‌ ಆಗುತ್ತಿದೆ.

ಆದರೆ ಈ ಸ್ಕ್ರೀನ್‌ಶಾಟ್‌ನ ಸತ್ಯಾಸತ್ಯ ಪರಿಶೀಲಿಸಲು ಆಲ್ಟ್‌ನ್ಯೂಸ್‌ ಸುದ್ದಿಸಂಸ್ಥೆ ಮುಂದಾದಾಗ, ಸುದ್ದಿಸಂಸ್ಥೆಯೊಂದರ ಲೋಗೋ ಬಳಸಿ ತಿರುಚಲಾದ ಚಿತ್ರ ಇದು ಎಂದು ತಿಳಿದುಬಂದಿದೆ. ಫೋಟೋದಲ್ಲಿ ಕಾಣಿಸುತ್ತಿರುವ ಲೋಗೋ ಗುಜರಾತಿನ ಸುದ್ದಿ ಮಾಧ್ಯಮ ‘ಮಂತಾವ್ಯ ನ್ಯೂಸ್‌’ನದ್ದು. ಈ ಚಾನೆಲ್‌ನ ಲೋಗೋ ಬಳಸಿಕೊಂಡು ಯುಪಿ ಸಿಎಂ ಕುರಿತ ಸುಳ್ಳುಸುದ್ದಿ ಹರಡಲಾಗುತ್ತಿದೆ.

ಒಂದು ವೇಳೆ ಯೋಗಿ ಆದಿತ್ಯನಾಥ್‌ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದರೆ ದೇಶದ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಬೇಕಿತ್ತು. ಆದರೆ ಬೇರಾವುದೇ ಮಾಧ್ಯಮಗಳಲ್ಲಿ ವರಿದಿಯಾಗಿಲ್ಲ. ಅದೂ ಅಲ್ಲದೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ತಿರುಚಿದ ಚಿತ್ರ ಎಂಬುದಕ್ಕೆ ಸಾಕಷ್ಟುಪುರಾವೆಗಳು ಲಭ್ಯವಾಗುತ್ತವೆ.

ಮೊದಲನೆಯದಾಗಿ ಇದೊಂದು ಸ್ಥಳೀಯ ಸುದ್ದಿವಾಹಿನಿ. ಅಂದರೆ ಇಲ್ಲಿ ಗುಜರಾತಿ ಭಾಷೆಯಲ್ಲಿ ಪ್ರಕಟವಾಗಬೇಕು. ಆದರೆ ಇಲ್ಲಿರುವ ಬ್ರೇಕಿಂಗ್‌ ನ್ಯೂಸ್‌ ಹಿಂದಿಯಲ್ಲಿದೆ. ಈ ಬಗ್ಗೆ ಈ ಸುದ್ದಿವಾಹಿನಿ ಎಕ್ಸಿಕ್ಯೂಟಿಬವ್‌ ಎಡಿಟರ್‌ ಕೂಡ ಇದೊಂದು ಸುಳುಸುದ್ದಿ ಎಮದು ಸ್ಪಷ್ಟನೆ ನೀಡಿದ್ದಾರೆ.

- ವೈರಲ್ ಚೆಕ್ 

click me!