ರಾಮ ಮಂದಿರ ಕಟ್ಟದಿದ್ರೆ ಜನ ಚಪ್ಪಲಿಯಿಂದ ಬಡಿತಾರೆ: ಶಿವಸೇನೆ!

By Web Desk  |  First Published Jun 6, 2019, 3:38 PM IST

ಬಿಜೆಪಿಗೆ ಮತ್ತೆ ರಾಮ ಮಂದಿರ ನೆನಪಸಿದ ಶಿವಸೇನೆ| ಈ ಬಾರಿ ಮಂದಿರ ಕಟ್ಟಲೇಬೇಕು ಎಂದ ಶಿವಸೇನೆ| ‘ಮಂದಿರ ನಿರ್ಮಾಣ ಮಾಡದಿದ್ದರೆ ಜನ ನಮ್ಮನ್ನು ಚಪ್ಪಲಿಯಲ್ಲಿ ಹೊಡೆಯುತ್ತಾರೆ’| ಬಿಜೆಪಿಗೆ ನೇರ ಎಚ್ಚರಿಕೆ ನೀಡಿದ ಶಿವಸೇನೆ ವಕ್ತಾರ ಸಂಜಯ್ ರಾವತ್| ‘ಸ್ಪಷ್ಟ ಬಹುಮತದ ಪರಿಣಾಮ ರಾಮ ಮಂದಿರ ನಿರ್ಮಾಣ ಖಚಿತ’|


ಮುಂಬೈ(ಜೂ.06): ರಾಮ ಮಂದಿರ ನಿರ್ಮಾಣ ಭರವಸೆಯನ್ನು ಈಡೇರಿಸಿದ್ದರೆ ಜನರೇ ನಮ್ಮನ್ನು ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಮಿತ್ರಪಕ್ಷ ಶಿವಸೇನೆ ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಈ ಕುರಿತು ಮಾತನಾಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, 2014ರಲ್ಲೇ ರಾಮ ಮಂದಿರದ ಭರವಸೆ ನೀಡಿದ್ದ ನಾವು ಇದುವರೆಗೂ ಈ ವಾಗ್ದಾನವನ್ನು ಈಡೇರಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

बीजेपी के पास 303 सांसद.
शिवसेना के 18 सांसद.
राम मंदिर निर्माण के लिए और क्या चाहिये?

— Sanjay Raut (@rautsanjay61)

Tap to resize

Latest Videos

undefined

ಈ ಬಾರಿಯ ಚುನಾವಣೆಯಲ್ಲೂ ರಾಮ ಮಂದಿರ ಕಟ್ಟುವ ಭರವಸೆ ನೀಡಲಾಗಿದ್ದು, ಒಂದು ವೇಳೆ ಈ ಬಾರಿ ಭರವಸೆ ಈಡೇರಿಸದಿದ್ದರೆ ಜನ ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ರಾವತ್ ಎಚ್ಚರಿಸಿದ್ದಾರೆ.

ಎನ್ ಡಿಎ ಲೋಕಸಭೆಯಲ್ಲಿ 350 ಸೀಟುಗಳನ್ನು ಹೊಂದಿದ್ದು, ಶೀಘ್ರದಲ್ಲಿಯೇ ದೇವಾಲಯ ನಿರ್ಮಾಣವಾಗಲಿದೆ ಎಂಬ ಭರವಸೆ ಇದೆ ಎಂದು ರಾವತ್ ಮಾರ್ಮಿಕವಾಗಿ ಹೇಳಿದ್ದಾರೆ.

click me!