ಸಿಎಂ ಜೊತೆ ಸೆಲ್ಫಿಗೆ ಪಟ್ಟು: ಯುವಕನ ಮೇಲೆ ಖಟ್ಟರ್ ಸಿಟ್ಟು!: ವಿಡಿಯೋ ವೈರಲ್

Published : Jun 06, 2019, 02:42 PM ISTUpdated : Jun 06, 2019, 03:06 PM IST
ಸಿಎಂ ಜೊತೆ ಸೆಲ್ಫಿಗೆ ಪಟ್ಟು: ಯುವಕನ ಮೇಲೆ ಖಟ್ಟರ್ ಸಿಟ್ಟು!: ವಿಡಿಯೋ ವೈರಲ್

ಸಾರಾಂಶ

ಸಿಎಂ ಜೊತೆ ಸೆಲ್ಫೀ ತೆಗೆಸಿಕೊಳ್ಳಲು ಮುಂದಾದ ಯುವಕ| ಮೊಬೈಲ್ ನೋಡಿ ಕೋಪಗೊಂಡ ಸಿಎಂ ಖಟ್ಟರ್| ನೋಡ ನೋಡುತ್ತಿದ್ದಂತೆಯೇ ಯುವಕನನ್ನು ದೂರ ತಳ್ಳಿ ಸಿಟ್ಟು ಹೊರ ಹಾಕಿದ ಹರ್ಯಾಣ ಸಿಎಂ| ವಿಡಿಯೋ ವೈರಲ್, ಸಿಎಂ ನಡೆಗೆ ಆಕ್ರೋಶ

ಹರ್ಯಾಣ[ಜೂ.06]: ಸಾಮಾನ್ಯವಾಗಿ ರಾಜಕೀಯ ನಾಯಕರು ಅಥವಾ ಸೆಲೆಬ್ರಿಟಿಗಳನ್ನು ನೋಡಿ ಬಹಳ ಉತ್ಸುಕರಾಗುತ್ತಾರೆ. ಹೀಗಿರುವ ಆ ಕ್ಷಣಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಧಾವಂತದಲ್ಲಿರುತ್ತಾರೆ. ಅವರೊಂದಿಗೆ ಸೆಲ್ಪೀ ತೆಗೆಸಿಕೊಳ್ಳಲು ಮುಗಿ ಬೀಳುತ್ತಾರೆ. ಜನರ, ಅಭಿಮಾನಿಗಳ ಖುಷಿಗಾಗಿ ಕೆಲ ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳು ಖುಷಿ ಖುಷಿಯಾಗಿ ಫೋಸ್ ನೀಡುತ್ತಾರೆ. ಆದರೆ ಮತ್ತೆ ಕೆಲವರು ಇದನ್ನು ಇಷ್ಟ ಪಡುವುದಿಲ್ಲ. ಒಂದೋ ಫೋಟೋಗೆ ಫೋಸ್ ನೀಡದೆ ದೂರ ಸರಿಯುತ್ತಾರೆ ಅಥವಾ ಆ ವ್ಯಕ್ತಿಗೆ ಒಂದೆರಡು ಏಟು ಬಾರಿಸುತ್ತಾರೆ. ಇದೀಗ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡಾ ತನ್ನೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಬಂದ ವ್ಯಕ್ತಿಯ ಕೈ ಹಿಡಿದು ದೂರ ತಳ್ಳಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ.

ಹರ್ಯಾಣದ ಕರ್ನಾಲ್ ನಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಹೀಗಿರುವಾಗ ಯುವಕನೊಬ್ಬ ಸೆಲ್ಫೀ ತೆಗೆಸಿಕೊಳ್ಳಲು ಬಂದಿದ್ದಾನೆ. ಇದನ್ನು ಕಂಡು ಕೋಪಗೊಂಡ ಸಿಎಂ ಸಾಹೇಬರು ಮಾತ್ರ ಯುವಕನ ಕೈ ಜೋರಾಗಿ ಎಳೆದು ದೂರ ತಳ್ಳಿ ಬಿಟ್ಟಿದ್ದಾರೆ. ಆದರೆ ಸಿಎಂ ಹಿಂಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಅಧಿಕಾರಿಗಳು ಯುವಕನನ್ನು ಹಿಡಿದು ನಿಲ್ಲಿಸಿ ಮಾನವೀಯತೆ ಮೆರೆದಿದ್ದಾರೆ. 

ಇನ್ನು ಹರ್ಯಾಣ ಸಿಎಂ ಇಂತಹ ವರ್ತನೆ ತೋರಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು 2019ರ ಫೆಬ್ರವರಿಯಲ್ಲಿ ತನ್ನನ್ನು ಭೇಟಿಯಾಗಲು ಬಂದ ವೃದ್ಧ ದಂಪತಿಗಳ ವಿರುದ್ಧ ರೇಗಾಡಿದ್ದರು. ಈ ದಂಪತಿ ತಮಗೆ 19 ಲಕ್ಷ ಮೋಸವಾಗಿದೆ ಎಂಬ ದೂರು ಸಲ್ಲಿಸಲು ಬಂದಿದ್ದರು ಎಂಬುವುದು ಉಲ್ಲೇಖನಿಯ. ಅಂದು ಸಿಎಂ ಖಟ್ಟರ್ ನಡವಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ