50-50 ಸೂತ್ರಕ್ಕೆ ಲಿಖಿತ ಭರವಸೆ ಕೇಳಿದ ಶಿವಸೇನೆ| ಬಿಜೆಪಿ-ಶಿವಸೇನೆ ನಡುವೆ ಮುಂದುವರೆದ ಅಪನಂಬಿಕೆ| ಅಧಿಕಾರ ಸಮನಾಗಿ ಹಂಚಿಕೆಯಾಗಬೇಕು ಎಂದು ಆಗ್ರಹಿಸಿದ ಶಿವಸೇನೆ| ಎರಡುವರೆ ವರ್ಷ ಬಳಿಕ ಸಿಎಂ ಸ್ಥಾನ ಬಿಟ್ಟು ಕೊಡುವಂತೆ ಆಗ್ರಹಿಸಿದ ಶಿವಸೇನೆ| +ಭೇಡಿಕೆಗಳಿಗೆ ಒಪ್ಪದೇ ಹೋದಲ್ಲಿ ಬೇರೆ ಆಯ್ಕೆಗಳಿಗೆ ಮುಕ್ತವಾಗಿರುವುದಾಗಿ ಎಚ್ಚರಿಸಿದ ಶಿವಸೇನೆ|
ಮುಂಬೈ(ಅ.26): ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ, ಉಭಯ ಪಕ್ಷಗಳ ನಡುವಿನ ಅಪನಂಬಿಕೆ ಮುಂದುವರೆದಿದೆ. ಸರ್ಕಾರ ರಚನೆ ಸಂಬಂಧ ನಡೆದ ಮಾತುಕತೆ ವೇಳೆ 50-50 ಸೂತ್ರದ ಕುರಿತು ಲಿಖಿತ ಭರವಸೆ ನೀಡುವಂತೆ ಬಿಜೆಪಿಯನ್ನು ಶಿವಸೇನೆ ಆಗ್ರಹಿಸಿದೆ.
ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?
ಅಧಿಕಾರ ಸಮನಾಗಿ ಹಂಚಿಕೆಯಾಗಬೇಕು, 50:50 ಸೂತ್ರದ ಅಡಿಯಲ್ಲಿ ಸಿಎಂ ಸ್ಥಾನವನ್ನು ಎರಡುವರೆ ವರ್ಷ ಬಳಿಕ ತಮಗೆ ಬಿಟ್ಟುಕೊಡಬೇಕೆಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಫಲಿತಾಂಶ: ದೇಶಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ
ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹಾಗೂ ದೇವೇಂದ್ರ ಫಡ್ನವೀಸ್ ಅವರೊಂದಿಗೆ 50:50 ಸೂತ್ರದ ಬಗ್ಗೆ ಈ ಹಿಂದೆ ಚರ್ಚಿಸಲಾಗಿತ್ತು. 2.5 ವರ್ಷ ಸಿಎಂ ಸ್ಥಾನ ನಮಗೆ ಬಿಟ್ಟುಕೊಡಬೇಕೆಂಬುದು ಯೋಜನೆಯ ಭಾಗವಾಗಿತ್ತು. ಅಧಿಕಾರದ ಸಮ ಹಂಚಿಕೆ ಹಾಗೂ ಸಿಎಂ ಸ್ಥಾನ ಎರಡೂ ನಮಗೆ ಮುಖ್ಯವಾಗಿದ್ದು, ಬಿಜೆಪಿ 50:50 ಸೂತ್ರದ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಉದ್ಧವ್ ಆಗ್ರಹಿಸಿದ್ದಾರೆ.
‘ಮಹಾ ಜನಾದೇಶ’ ಇಲ್ಲ: ಬಿಜೆಪಿಗೆ ಶಿವಸೇನೆ ಚಾಟಿ!
ಒಂದು ವೇಳೆ ಬಿಜೆಪಿ ನಮ್ಮ ಬೇಡಿಕೆಗಳಿಗೆ ಒಪ್ಪದೇ ಇದ್ದಲ್ಲಿ ಬೇರೆ ಆಯ್ಕೆಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ಶಿವಸೇನೆ ನೀಡಿದೆ.
'ಮಹಾ' ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಕಾಂಗ್ರೆಸ್‌ನಿಂದ ಶಿವಸೇನೆಗೆ ಬಿಗ್ ಆಫರ್!