ಆ 58 ರಾಷ್ಟ್ರಗಳ ಹೆಸರೇಳಿ ಸ್ವಾಮಿ: ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಆಸಾಮಿ!

By Web Desk  |  First Published Oct 4, 2019, 2:53 PM IST

ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ವಿಶ್ವ ವೇದಿಕೆಯಲ್ಲಿ ಅವಮಾನಕ್ಕೀಡಾದ ಪಾಕಿಸ್ತಾನ| ತಾಳ್ಮೆ ಕಳೆದುಕೊಂಡಿರುವ ಪಾಕಿಸ್ತಾನದ ಚಹರೆ ನೋಡಿ| ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ಪಾಕಿಸ್ತಾನ ವಿದೇಶಾಂಗ ಸಚಿವ| 'ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ 58 ರಾಷ್ಟ್ರಗಳು ಯಾವವು'? ಸುದ್ದಿ ವಾಹಿನಿ ಸಂದರ್ಶನಕಾರನ ಪ್ರಶ್ನೆಗೆ ಕೆರಳಿದ ಶಾ ಮೆಹಮೂದ್ ಖುರೇಷಿ| ಯಾರ ಅಜೆಂಡಾ ಪರ ಕೆಲಸ ಮಾಡುತ್ತೀರಿ ಎಂಬುದು ಗೊತ್ತಿದೆ ಎಂದ ಶಾ ಮೆಹಮೂದ್|


ಇಸ್ಲಾಮಾಬಾದ್(ಅ.04): ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ವಿಶ್ವ ವೇದಿಕೆಯಲ್ಲಿ ತೀವ್ರ ಮುಖಭಂಗ ಅನುಭವಿಸುತ್ತಿರುವ ಪಾಕಿಸ್ತಾನ, ಇದೀಗ ತನ್ನ ತಾಳ್ಮೆಯನ್ನೂ ಕಳೆದುಕೊಂಡಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಕಾಶ್ಮೀರ ವಿಚಾರದಲ್ಲಿ ನಿಮಗೆ ಬೆಂಬಲ ನೀಡುತ್ತಿರುವ 58 ರಾಷ್ಟ್ರಗಳು ಯಾವವು ಎಂಬ ಸುದ್ದಿಗಾರರ ಪ್ರಶ್ನೆಗೆ, ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ತಾಳ್ಮೆ ಕಳೆದುಕೊಂಡು ಹರಿಹಾಯ್ದಿರುವ ಘಟನೆ ನಡೆದಿದೆ. 

Tap to resize

Latest Videos

ಪಾಕ್ ಖಾಸಗಿ ಸುದ್ದಿವಾಹಿನಿಯೊಂದು ಖುರೇಷಿಯೊಂದು ಸಂದರ್ಶನ ನಡೆಸಿದ್ದು, ಸಂದರ್ಶನದ ವೇಳೆ ಸಂದರ್ಶನಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ 58 ರಾಷ್ಟ್ರಗಳು ಯಾವವು ಎಂದು ಕೇಳಿದ್ದಾರೆ.

ಪತ್ರಕರ್ತನ ಈ ಪ್ರಶ್ನೆಗೆ ತೀವ್ರ ಕೆಂಡಾಮಂಡಲವಾದ ಖುರೇಷಿ, ಹೇಳಿದ್ದಾರೆ. ನಿವೆಲ್ಲಾ ಯಾರ ಅಜೆಂಡಾ ಪರ ಕೆಲಸ ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತು ಎಂದು ಹರಿಹಾಯ್ದಿದ್ದಾರೆ. ವಿದೇಶಾಂಗ ಸಚಿವರ ಈ ವರ್ತನೆ ಕಂಡು ಬೆಚ್ಚಿಬಿದ್ದ ಪತ್ರಕರ್ತರು, ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.

click me!