
ಬೆಂಗಳೂರು : ಲೈಂಗಿಕ ಕಾರ್ಮಿಕರನ್ನು‘ದಮನಿತ ಮಹಿಳೆಯರು’ಎಂದು ಕರೆಯಬೇಕು ಎಂಬ ನೂತನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ಹೇಳಿಕೆಗೆ ಲೈಂಗಿಕ ಕಾರ್ಮಿಕರಿಂದ ವಿರೋಧ ವ್ಯಕ್ತವಾಗಿದೆ.
‘ಜಯಮಾಲಾರ ಹೇಳಿಕೆಯನ್ನು ನಾವು ನಿಸ್ಸಂದಿಗ್ದವಾಗಿ ಖಂಡಿಸುತ್ತೇವೆ,’ ಎಂದು ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್ (Karnataka Sex Workers Union) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜಯಮಾಲಾ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಅದು ಆಗ್ರಹಿಸಿದೆ.
‘ನಮಗೆ ಕರುಣೆ, ಅನುಕಂಪ ಬೇಡ, ಘನತೆ ಮತ್ತು ಹಕ್ಕುಗಳು ಬೇಕು’ ಎಂದಿರುವ ಲೈಂಗಿಕ ಕಾರ್ಮಿಕರು, ಭಾರತದ ಸರ್ವೋಚ್ಛನ್ಯಾಯಾಲಯವು ರಚಿಸಿದ ಮಂಡಳಿ ಮತ್ತು ಹಲವಾರು ಅಂತರಾಷ್ಟ್ರೀಯ ಆಯೋಗಗಳು ಲೈಂಗಿಕ ಕಾರ್ಮಿಕರ ಹಕ್ಕುಗಳಗೆ ಮಾನ್ಯತೆ ನೀಡಿವೆ. ನಾವು ಲೈಂಗಿಕ ವೃತ್ತಿ ಘನತೆವೆತ್ತಕಾರ್ಯವೆಂದುಪ್ರತಿಪಾದಿಸುತ್ತೇವೆ, ಎಂದು ಸಂಘಟನೆಯು ಹೇಳಿದೆ.
ಸೆಕ್ಸ್ ವರ್ಕರ್ಸ್‌ಗಳ ಬೇಡಿಕೆಗಳು
ಸಚಿವರ ಈ ಹೇಳಿಕೆಯು ನಮ್ಮನ್ನು ಅಗೋಚರವಾಗಿಸುತ್ತದೆ ಮತ್ತು ನಮ್ಮ ಅಸ್ಮಿತೆಯ, ಸ್ವಯಂ ಗುರುತಿಸುವಿಕೆಯ ಮತ್ತು ಸ್ವಯಂ ನಿರ್ಧಾರದ ಹಕ್ಕುಗಳನ್ನುನಿರಾಕರಿಸುತ್ತದೆ. ಘನತೆ, ಸುರಕ್ಷೆತೆ ಮತ್ತು ನ್ಯಾಯಕ್ಕಾಗಿ ದಶಕಗಳ ನಮ್ಮ ಹೋರಾಟಗಳನ್ನು ಕಡೆಗಣಿಸಿದೆ, ಎಂದು ಯೂನಿಯನ್ ಅಭಿಪ್ರಾಯಪಟ್ಟಿದೆ.
ಈಗಾಗಲೇ ನಾವು ಸಾಕಷ್ಟು ಬಾರಿ ತಿಳಿಸಿದಂತೆ, ಹಲವಾರು ಮಹಿಳೆಯರು, ಪುರುಷರು ಮತ್ತು ಟ್ರಾನ್ಸ್ ಜಂಡರ್ ಗಳು ಸ್ವಯಿಚ್ಚೆಯಿಂದ ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಈ ವಾಸ್ತವವನ್ನುಗೌರವಿಸಬೇಕು. ಹಲವಾರು ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ನಡೆಸುವ‘ದಾಳಿ ಮತ್ತು ರಕ್ಷಣೆ’ (Raid and Rescue) ಕಾರ್ಯತಂತ್ರ ಮತ್ತು ‘ಪುನರ್ವಸತಿ’ ಪ್ರಕ್ರಿಯೆಯಿಂದ ಲೈಂಗಿಕ ಕಾರ್ಮಿಕರ ಸಮುದಾಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತಿವೆ. ಈ ಸಂದರ್ಭದಲ್ಲಿ ನಮಗೆ ‘ದಮನಿತ ಮಹಿಳೆಯರು’ ಎಂದು ಹಣೆಪಟ್ಟಿಕಟ್ಟುವುದುರಿಂದ ನಮ್ಮ ವಿರುದ್ಡ ಕಳಂಕ ಹಾಗೂ ತಾರತಮ್ಯ ಹೆಚ್ಚುತ್ತವೆ, ಎಂದು ಸಂಸ್ಥೆಯು ವಾದಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.