ಫೇಸ್’ಬುಕ್ ಫ್ರೆಂಡ್’ನಿಂದ ಮಹಿಳೆಗೆ 17 ಲಕ್ಷ ವಂಚನೆ

First Published Jun 26, 2018, 1:37 PM IST
Highlights

ಮಂಗಳೂರು ಮೂಲದ ಮಹಿಳೆಯೊಬ್ಬರಿಗೆ ಮೇ 3ರಂದು ಫೇಸ್‌ಬುಕ್‌ನಲ್ಲಿ ಜಾಕ್‌ ಕೋಲ್ಮನ್‌ ಎಂಬಾತ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಬಳಿಕ ಇವರಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡಿದ್ದು, ನಿರಂತರವಾಗಿ ಚಾಟಿಂಗ್‌ ನಡೆಸುತ್ತಿದ್ದರು. ಕೊನೆಗೆ ಜಾಕ್‌ ಕೋಲ್ಮನ್‌, ನಿಮ್ಮ ಭವಿಷ್ಯದ ದೃಷ್ಟಿಯಿಂದ 20 ಸಾವಿರ ಪೌಂಡ್‌ ಹಣ ಇರುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿದ್ದಾನೆ. ಮಹಿಳೆಯೂ ನಂಬಿದ್ದಾರೆ. 

ಮಂಗಳೂರು (ಜೂ. 26): ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ 20 ಸಾವಿರ ಪೌಂಡ್‌ ಹಣ ಮತ್ತು ಪಾರ್ಸೆಲ್‌ ಕಳುಹಿಸುವುದಾಗಿ ನಂಬಿಸಿ ನಗರದ ಮಹಿಳೆಯೊಬ್ಬರಿಗೆ 16.69 ಲಕ್ಷ ರು. ವಂಚಿಸಿದ ಘಟನೆ ನಡೆದಿದ್ದು, ಈ ಕುರಿತು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಲಾಗಿದೆ.

ನಗರದ ಮಹಿಳೆಯೊಬ್ಬರಿಗೆ ಮೇ 3ರಂದು ಫೇಸ್‌ಬುಕ್‌ನಲ್ಲಿ ಜಾಕ್‌ ಕೋಲ್ಮನ್‌ ಎಂಬಾತ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಬಳಿಕ ಇವರಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡಿದ್ದು, ನಿರಂತರವಾಗಿ ಚಾಟಿಂಗ್‌ ನಡೆಸುತ್ತಿದ್ದರು. ಕೊನೆಗೆ ಜಾಕ್‌ ಕೋಲ್ಮನ್‌, ನಿಮ್ಮ ಭವಿಷ್ಯದ ದೃಷ್ಟಿಯಿಂದ 20 ಸಾವಿರ ಪೌಂಡ್‌ ಹಣ ಇರುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿದ್ದಾನೆ. ಮಹಿಳೆಯೂ ನಂಬಿದ್ದಾರೆ.

ಮೇ 9ರಂದು ಕಸ್ಟಮ್ಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿ ನಿಮ್ಮ ಪಾರ್ಸೆಲ್‌ ದೆಹಲಿಯಲ್ಲಿದೆ. ಇದಕ್ಕೆ ಕೂಡಲೆ ನೀವು ದಂಡ ಕಟ್ಟಬೇಕು. ಇಲ್ಲದಿದ್ದರೆ ತೊಂದರೆಯಾದೀತು ಎಂದು ಹೆದರಿಸಿದ್ದ. ಇದನ್ನು ನಿಜವೆಂದೇ ನಂಬಿದ ಮಹಿಳೆ ವಿವಿಧ ಹಂತದಲ್ಲಿ ನೆಫ್ಟ್‌ ಮೂಲಕ 16.69 ಲಕ್ಷ ರು.ಗಳನ್ನು ಆತ ಹೇಳಿದ ಖಾತೆಗೆ ಕಳುಹಿಸಿದ್ದರು. ಕೊನೆಗೆ ಆ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಗೊತ್ತಾಗಿದೆ. ಬಳಿಕ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

click me!