
2002ರಲ್ಲಿ ಗೋಧ್ರಾದಲ್ಲಿ ಕಾರಸೇವಕರ ಹತ್ಯೆ ನಡೆದ ನಂತರ ಅಹಮದಾಬಾದ್‌ನಲ್ಲಿ ಸುಟ್ಟ ಶವಗಳನ್ನು ಸ್ವೀಕರಿಸಿದ್ದು ಅಮಿತ್ ಶಾ. ನಂತರ ನಡೆದ ದಂಗೆಗಳು ಮೋದಿ ಹಿಂದೂ ಹೃದಯ ಸಾಮ್ರಾಟ ಆಗಿದ್ದು 2002ರ ಚುನಾವಣೆಯನ್ನು ಅನಾಯಾಸವಾಗಿ ಗೆದ್ದದ್ದು ಈಗ ಇತಿಹಾಸ ಬಿಡಿ. ಅಲ್ಲಿಯವರೆಗೆ ಒಂದೂ ಚುನಾವಣೆಯನ್ನು ಗೆಲ್ಲದ ಮೋದಿಯವರ ಚುನಾವಣಾ ರಣತಂತ್ರ ಜವಾಬ್ದಾರಿ ಹೊತ್ತಿದ್ದು ಅಮಿತ್ ಶಾ. ಮೋದಿ ಯಾತ್ರೆ ತೆಗೆದುಕೊಂಡು ಒಂದಾದ ನಂತರ ಒಂದು ಊರಿನಲ್ಲಿ ಭಾಷಣ ಮಾಡುತ್ತಾ ತಿರುಗಿದರೆ, ಕಾರ್ಯಾಲಯದಲ್ಲಿ ಕುಳಿತುಕೊಂಡು ಜಾತಿ ಲೆಕ್ಕಾಚಾರ, ಕಾರ್ಯಕರ್ತರು, ಸಂಘಟನೆ, ದುಡ್ಡು ,ಬೂತ್ ಮ್ಯಾನೇಜ್ಮೆಂಟ್ ನೋಡಿಕೊಂಡಿದ್ದು ಮಾತ್ರ ಇದೇ ಅಮಿತ್ ಭಾಯಿ ಅಂತೇ. ಮೋದಿ ಅವರ ಮ್ಯಾನ್ ಫ್ರೈಡೆ ಎಂದು ಗುಜರಾತ್‌ಗೆ ಗೊತ್ತಿದ್ದರೂ ಕೂಡ, ದೇಶಕ್ಕೆ ಗೊತ್ತಾಗಿದ್ದು 2010ರ ಸಂಧರ್ಭದಲ್ಲಿ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ನಂತರ. ಜ್ಯೋತಿಷ್ಯವನ್ನು ಬಹಳವಾಗಿ ನಂಬುವ ಅಮಿತ್ ಭಾಯಿ ‘ಜೈಲಿಗೆ ಹೋದಾಗ ನನ್ನ ಟೈಮ್ ಸರಿಯಾಗಿರಲಿಲ್ಲ ಈಗಲೂ ಅಷ್ಟಕಷ್ಟೇ. 2016ರ ಜೂನ್ ನಂತರ ನೋಡಿ ನನ್ನ ಅದೃಷ್ಟ ಚೆನ್ನಾಗಿದೆ ’ ಎಂದು ಬಿಹಾರ ಚುನಾವಣೆಯ ಸೋಲಿನ ನಂತರ ಆಪ್ತರೊಬ್ಬರ ಬಳಿ ಹೇಳಿಕೊಂಡಿದ್ದರಂತೆ.
(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ- ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.