ಗುಜರಾತಲ್ಲಿ ಶಾ ಬಲ ಅಷ್ಟಕಷ್ಟೇ

By Suvarna Web DeskFirst Published Dec 9, 2017, 10:02 PM IST
Highlights

.

ಕರ್ನಾಟಕದಲ್ಲಿ ಕೂಡ ಅಮಿತ್ ಶಾ ಬರುತ್ತಾರೆ ಎಂದರೆ ಏನೋ ಸಂಚಲನ ಇದೆಯಾದರೂ, ಗುಜರಾತ್‌ನ ಪಟೇಲರಿಗೆ ಮಾತ್ರಾ ಶಾ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಪಟೇಲರು ಅಮಿತ್ ಶಾ ಹೆಸರು ಹೇಳಿದರೆ ಸಾಕು ಉರಿದು ಬೀಳುತ್ತಾರೆ. ಮೋದಿ ಎಂದರೆ ಸಾಕು ತಲೆ ಮೇಲೆ ಕೂರಿಸಿಕೊಳ್ಳುವ ಆನಂದಿಬೆನ್ ಪಟೇಲ್, ಪುರುಷೋತ್ತಮ ರೂಪಾಲಾ, ನಿತಿನ್ ಪಟೇಲ್‌ರಿಗೂ ಅಮಿತ್ ಶಾ ಕಂಡರೆ ಆಗೋಲ್ಲ.

ಆನಂದಿ ಬೆನ್‌ರನ್ನು ಕೆಳಗೆ ಇಳಿಸಿದಾಗ ಮೋದಿ, ನಿತಿನ್ ಪಟೇಲ್‌ರನ್ನು ಮುಖ್ಯಮಂತ್ರಿ ಮಾಡಬೇ ಕೆಂದು ರಾತ್ರಿ ತೀರ್ಮಾನ ತೆಗೆದುಕೊಂಡಿದ್ದರಂತೆ. ಆದರೆ ಬೆಳಿಗ್ಗೆ ದೆಹಲಿಯಲ್ಲಿ ಮೋದಿ ಬಳಿ ಕುಳಿತು ಅಮಿತ್ ಶಾ, ನಿತಿನ್ ಪಟೇಲ್ ಬೇಡ ಸ್ವ ಜಾತಿಯ ವಿಜಯ ರೂಪಾಣಿ ಇರಲಿ ಎಂದು ಒಪ್ಪಿಸಿದರು ಎಂದು ಕೆಲ ಪಟೇಲ್ ಸಮುದಾಯದ ಬಿಜೆಪಿ ನಾಯಕರು ಹೇಳುತ್ತಾರೆ. ಹಾರ್ದಿ'ಕ್ ಪಟೇಲ್‌ರನ್ನು ಗಡಿಪಾರು ಮಾಡಿ ಕೊಡಬಾರದ ಕಾಟ ಕೊಟ್ಟಿದ್ದು ಅಮಿತ್ ಶಾ ಎಂದು ಪಾಟಿದಾರ ಆಂದೋಲನದ ಯುವಕರು ಹೇಳಿಕೊಳ್ಳುತ್ತಾರೆ.

(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ- ಕನ್ನಡಪ್ರಭ)

click me!