ಸಿಬಿಐ ದಾಳಿ ವೇಳೆ ಶಶಿಕಲಾ ಮನೆಯಲ್ಲಿ 17 ಸಾವಿರ ಕೋಟಿ ರು. ಪತ್ತೆ!

By Suvarna Web deskFirst Published Dec 9, 2017, 7:50 PM IST
Highlights

ಆದಾಯತೆರಿಗೆ ಅಧಿಕಾರಿಗಳು ರಾಷ್ಟ್ರೀಯ ಷೇರು ವಿನಿಮಯಕೇಂದ್ರದ ಬೋಕರ್ ಸಂಜಯ್ ಗುಪ್ತಾ ಅವರ ದೆಹಲಿನಿವಾಸದ ಮೇಲೆ ದಾಳಿ ನಡೆಸಿದಾಗ ಐಟಿ ಅಧಿಕಾರಿಗಳು,ಬಾಕ್ಸ್‌ಗಳಲ್ಲಿ ಇಟ್ಟಿದ್ದ 11 ಕೋಟಿ ರು.ವನ್ನು ವಶಕ್ಕೆ ಪಡೆದಿದ್ದರು.

ಪ್ರಸ್ತುತ ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇಲೆ ಸೆರೆವಾಸ ಅನುಭವಿಸುತ್ತಿರುವ ಶಶಿಕಲಾ ನೆಲಮಹಡಿಯಲ್ಲಿ ಗುಪ್ತವಾಗಿ ಇಟ್ಟಿದ್ದ, 17 ಸಾವಿರ ಕೋಟಿ ಹಣವನ್ನು ಸಿಬಿಐ ವಶಕ್ಕೆ ಪಡೆದಿದೆ ಎಂಬ ಅಡಿಬರಹದೊಂದಿಗೆ 2000,500ರು. ಗಳ ಕಂತೆ ಕಂತೆ ನೋಟುಗಳಿರುವ ಫೋಟೋ ಮತ್ತು ಸುರಂಗದ ಪೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.ಆದರೆ ನಿಜಕ್ಕೂ ಸಿಬಿಐ ಶಶಿಕಲಾಗೆ ಸಂಬಂಧಿಸಿದ ಇಷ್ಟೊಂದು ಹಣವನ್ನು ವಶಕ್ಕೆ ಪಡೆದಿದೆಯೇ ಎಂದು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆಯಾಗಿತ್ತು.

ಆದಾಯ ತೆರಿಗೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದಾಗ ವಶಕ್ಕೆ ಪಡೆದ ಹಣ ಮತ್ತು ಮುಂಬೈ ಬ್ಯಾಂಕ್'ವೊಂದರ ದರೋಡೆಗಾಗಿ ಕಳ್ಳರು ತೆಗೆದಿರುವ ಸುರಂಗದ ಚಿತ್ರವನ್ನು ಜೋಡಿಸಿ ಈ ರೀತಿ ಸೃಷ್ಟಿಸಲಾಗಿತ್ತು. ಆದಾಯ ತೆರಿಗೆ ಅಧಿಕಾರಿಗಳು ‘ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ’ದ ಬೋಕರ್ ಸಂಜಯ್ ಗುಪ್ತಾ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದಾಗ ಐಟಿ ಅಧಿಕಾರಿಗಳು,ಬಾಕ್ಸ್‌ಗಳಲ್ಲಿ ಇಟ್ಟಿದ್ದ 11 ಕೋಟಿ ರು.ವನ್ನು ವಶಕ್ಕೆ ಪಡೆದಿದ್ದರು.

ಆ ವೇಳೆ ತೆಗೆದ ಫೋಟೋ ಹಾಗೂ 5 ತಿಂಗಳ ಹಿಂದೆ, ಮುಂಬೈಯ ಬ್ಯಾಂಕ್ ಆಫ್ ಬರೋಡದ, ಸಂಪದಾ ಬ್ರಾಂಚ್‌ನ ದರೋಡೆಗಾಗಿ, ಕಳ್ಳರು ಕೊರೆದಿದ್ದ ಸುರಂಗ ಮಾರ್ಗದ ಪೋಟೋ, ಈ ಎರಡೂ ಚಿತ್ರವನ್ನು ಜೋಡಿಸಿ,ಶಶಿಕಾಲಾ ಮನೆಯಲ್ಲಿ ಸುರಂಗ ಕೊರೆದು ಹಣವನ್ನು ಇಡಲಾಗಿತ್ತು. ಸಿಬಿಐ ದಾಳಿ ವೇಳೆ ಅದು ಬಹಿರಂಗಗೊಂಡಿದೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿದೆ. ಹಾಗಾಗಿ ಶಶಿಕಲಾ ಮನೆ ಮೇಲೆ ಐಟಿ ದಾಳಿ ನಡೆಸಿ 17 ಸಾವಿರ ಕೋಟಿ ಹಣ ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು ಎಂಬಂತಾಯಿತು.

click me!