ವಾಯ್ದೆ ಮೀರಿದ 550 ಟನ್ ನೆಸ್ಟ್ಲೆ ನಾಶಪಡಿಸಲು ಸುಪ್ರೀಂ ಅನುಮತಿ

By Web DeskFirst Published Oct 3, 2016, 11:43 AM IST
Highlights

ನವದೆಹಲಿ (ಅ.03): ವಾಯ್ದೆ ಮೀರಿದ 550 ಟನ್ ಗಳಷ್ಟು ನೆಸ್ಟ್ಲೆ ಮ್ಯಾಗಿಯನ್ನು ನಾಶಪಡಿಸಲು ಅನುಮತಿ ಕೋರಿ  ನೆಸ್ಟ್ಲೆ ಕಂಪನಿ ಸಲ್ಲಿಸಿದ್ದ ಮನವಿಗೆ ಇಂದು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ನ್ಯಾ. ದೀಪಕ್ ಮಿಶ್ರಾ ವಿಭಾಗೀಯ ಪೀಠವು ನೆಸ್ಟ್ಲೆ ವಿಚಾರಣೆ ನಡೆಸಿ ಬಳಿಕ ನಾಶಪಡಿಸಲು ಅವಕಾಶ ನೀಡಿದೆ.

ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಇದೆಯಾ, ಇಲ್ಲವಾ ಎಂದು ಪರೀಕ್ಷಿಸುವಂತೆ ಸುಪ್ರೀಂ ಮೈಸೂರಿನಲ್ಲಿರುವ ಪ್ರಯೋಗಾಲಯಕ್ಕೆ ಕೇಳಿತ್ತು.  ಸುಪ್ರೀಂ ನಿರ್ದೇಶನದಂತೆ  ಮೈಸೂರಿನ ಸರ್ಕಾರಿ ಪ್ರಯೋಗಾಲಯವು ಮ್ಯಾಗಿ ನೂಡಲ್ಸನ್ನು ಪರೀಕ್ಷಿಸಿ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ವರದಿ ನೀಡಿತ್ತು.

click me!