ಹೀಗೂ ಉಂಟೆ..! ಕೈದಿಗಳಿಗೆ ಬೇಕಂತೆ 3 ಸ್ಟಾರ್ ಊಟ; 16 ಬೇಡಿಕೆ ಮುಂದಿಟ್ಟು ಉಪವಾಸ ಕೂತ ಕಾರಾಗೃಹ ವಾಸಿಗಳು

Published : Oct 03, 2016, 11:18 AM ISTUpdated : Apr 11, 2018, 01:05 PM IST
ಹೀಗೂ ಉಂಟೆ..! ಕೈದಿಗಳಿಗೆ ಬೇಕಂತೆ 3 ಸ್ಟಾರ್ ಊಟ; 16 ಬೇಡಿಕೆ ಮುಂದಿಟ್ಟು ಉಪವಾಸ ಕೂತ ಕಾರಾಗೃಹ ವಾಸಿಗಳು

ಸಾರಾಂಶ

ರಾಯಪುರ(ಅ. 03): ಅಪರಾಧ ಮಾಡಿ ಜೈಲು ಸೇರಿದ ಕ್ರಿಮಿನಲ್'ಗಳಿಗೆ ರಾಜಾತಿಥ್ಯ ಬೇಕಂತೆ. ಉತ್ತರಪ್ರದೇಶದ ರಾಯಪುರ ಸೆಂಟ್ರಲ್ ಜೈಲಿನ 3 ಸಾವಿರಕ್ಕೂ ಹೆಚ್ಚು ಕೈದಿಗಳು 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ನಿರಶನ ಕೈಗೊಂಡಿದ್ದಾರೆ. ಗಾಂಧೀಜಿ ಜಯಂತಿಯಾದ ನಿನ್ನೆ ಈ ಕಾರಾಗೃಹ ವಾಸಿಗಳು ಉಪವಾಸ ಆರಂಭಿಸಿದರೆನ್ನಲಾಗಿದೆ. ಜೈಲಿನಲ್ಲಿ ನೀಡುತ್ತಿರುವ ಆಹಾರ ಸರಿಯಿಲ್ಲ. ತಮಗೆ ಥ್ರೀಸ್ಟಾರ್ ಹೋಟೆಲ್'ನ ಗುಣಮಟ್ಟದ ಆಹಾರ ಬೇಕು. ಬೇರೆ ಆಹಾರ ತಮಗೆ ಬೇಡ ಎಂದು ಕೈದಿಗಳು ಪಟ್ಟುಹಿಡಿದಿದ್ದಾರೆ. ಕೈದಿಗಳು ಇಂತಹ 16 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆನ್ನಲಾಗಿದೆ. ಇವುಗಳ ಪೈಕಿ ಕೆಲ ಅಸಂಬದ್ಧ ಬೇಡಿಕೆಗಳೂ ಇವೆ ಎಂದು ಪೊಲೀಸರು ಹೇಳುತ್ತಾರೆ. ಕೈದಿಗಳ ನ್ಯಾಯಯುತ ಬೇಡಿಕೆಗಳನ್ನು ಮಾತ್ರ ಈಡೇರಿಸುತ್ತೇವೆ ಎಂದು ಜೈಲಧಿಕಾರಿಗಳು ಭರವಸೆ ನೀಡಿದ್ದಾರೆ.

ರಾಯಪುರ ಜೈಲಿನ ಕೈದಿಗಳ ಕೆಲ ಬೇಡಿಕೆಗಳು:
1) ಜೈಲಿನಲ್ಲಿ ನೀಡುವ ಆಹಾರದ ಗುಣಮಟ್ಟ ಹೆಚ್ಚಬೇಕು
2) ಜೈಲಿನ ಆವರಣದಲ್ಲಿ ಧೂಮಪಾನ ಮಾಡಲು ಅವಕಾಶ ಕೊಡಬೇಕು
3) ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಟೆಲಿಫೋನ್ ಬೂತ್ ವ್ಯವಸ್ಥೆ
4) ಸಂಬಂಧಿಕರು ಬಂದು ಭೇಟಿಯಾಗಲು ನಿತ್ಯ ಅವಕಾಶ ನೀಡಬೇಕು.
5) ಜೀವಾವಧಿ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಬಿಡುಗಡೆ ಮಾಡಬೇಕು.
6) ಕೈದಿಗಳ ದಿನಗೂಲಿ ಮೊತ್ತ ಹೆಚ್ಚಳವಾಗಬೇಕು.
7) ಕೈದಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.
8) ಜೈಲಿನ ಕೋಣೆಗಳ ಸಂಖ್ಯೆ ಹೆಚ್ಚಳವಾಗಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌
ಗ್ಯಾರಂಟಿ ಎಫೆಕ್ಟ್: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಉಗ್ರಪ್ಪ ಆತಂಕ; ಸತ್ಯ ಒಪ್ಪಿಕೊಂಡರಾ ಕಾಂಗ್ರೆಸ್ ಹಿರಿಯ ನಾಯಕ?