ಸಿಸಿಬಿ ವಶಕ್ಕೆ ನಟಿ ಸಂಜನಾ, ಸರಳ ದಸರಾಗೆ ತೀರ್ಮಾನ; ಸೆ.8ರ ಟಾಪ್ 10 ಸುದ್ದಿ!

Published : Sep 08, 2020, 04:53 PM ISTUpdated : Sep 08, 2020, 04:54 PM IST
ಸಿಸಿಬಿ ವಶಕ್ಕೆ ನಟಿ ಸಂಜನಾ, ಸರಳ ದಸರಾಗೆ ತೀರ್ಮಾನ; ಸೆ.8ರ ಟಾಪ್ 10 ಸುದ್ದಿ!

ಸಾರಾಂಶ

ಡ್ರಗ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ನಟಿ ಸಂಜನಾಳನ್ನು ವಶಕ್ಕೆ ಪಡೆದಿದ್ದಾರೆ. ಇದು ಕಾಂಗ್ರೆಸ್ ಶಾಸಕನಿಗೆ ನಡುಕು ಶುರುವಾಗಿದೆ. ಅತ್ತ ಮಾದಕ ವಸ್ತು ನಿಗ್ರಹ ದಳ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ.  ಲಡಾಖ್ ಕಿರಿತ್ ಬೆನ್ನಲ್ಲೇ ಇದೀಗ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ ಹೊಸ ಖ್ಯಾತೆ ತೆಗೆದಿದೆ. 36 ಗಂಟೆ ಬಳಿಕ ವಿಸ್ಮಯಕಾರಿ ರೀತಿ ಮೀನುಗಾರ ಪತ್ತೆ, ಚೀನಾ ಜೊತೆ ಒಪ್ಪಂದ ರದ್ದು ಮಾಡಿದ ಪಬ್‌ಜಿ ಸೇರಿದಂತೆ ಸೆಪ್ಟೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಇತ್ತ ಸಂಜನಾ ಸಿಸಿಬಿ ವಶ, ಅತ್ತ ಪ್ರಭಾವಿ 'ಕೈ' ನಾಯಕನಿಗೆ ಶುರುವಾಯ್ತು ಢವಢವ..!...

ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಕೇಳಿ ಬರುತ್ತಿದ್ದ ಡ್ರಗ್ ಮಾಫಿಯಾ ಈಗ ರಾಜಕಾರಣಕ್ಕೂ ಕಾಲಿಟ್ಟಿದೆ. ಸಂಜನಾ ಸಿಕ್ಕಿ ಬಿದ್ದಿರುವುದರಿಂದ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕನಿಗೆ ಸಂಕಷ್ಟ ಶುರುವಾಗಿದೆ. 

ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್!...

ಲಡಾಖ್ ಪ್ರಾಂತ್ಯದ ಗಡಿ ಭಾಗಗಳಾದ ಗಲ್ವಾನ್, ಪ್ಯಾಂಗಾಂಗ್ ಸೇರಿದಂತೆ ಹಲವು ಭಾಗಗಳಲ್ಲಿ ಚೀನಾ ಪ್ರತಿ ದಿನ ಒಂದಲ್ಲ ಒಂದು ಖ್ಯಾತೆ ತೆಗೆಯುತ್ತಿದೆ. ಲಡಾಖ್ ಗಡಿ ಭಾಗದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಚೀನಾ ಇದೀಗ ಅರುಣಾಚಲ ಪ್ರದೇಶ ನಮ್ಮದು ಎಂದಿದೆ.

ಈ ಬಾರಿ ಮೈಸೂರು ದಸರಾದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿವೆ ಸಭೆಯ ತೀರ್ಮಾನಗಳು

ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕೊರೋನಾ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ದಸರಾವನ್ನು ಹೇಗೆ ಆಚರಿಸಬೇಕೆಂದು ಹಲವು ದಿನಗಳಿಂದ ಚಿಂತನೆಗಳು ನಡೆದಿದ್ದವು. ಅದರಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು (ಮಂಗಳವಾರ) ನಡೆದ ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು.

IPL 2020: ಧೋನಿ ಮುಂದಿನ CSK ನಾಯಕನ ಬಗ್ಗೆ ಆಲೋಚಿಸುತ್ತಿದ್ದಾರೆ..!...

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಸಿಎಸ್‌ಕೆ ನಾಯಕನ ಬಗ್ಗೆ ಆಲೋಚಿಸುತ್ತಿದ್ದಾರೆ ಎಂದು ವಿಂಡೀಸ್ ಅನುಭವಿ ಆಲ್ರೌಂಡರ್ ಹೇಳಿದ್ದಾರೆ. 

ಇಲ್ಲಿ ಸಂಜನಾ, ಅಲ್ಲಿ ರಿಯಾ, ಕೊನೆಗೂ NCBಯಿಂದ ಸುಶಾಂತ್ ಮಾಜಿ ಗೆಳತಿ ಅರೆಸ್ಟ್!...

ಮಾದಕ ವಸ್ತು ನಿಗ್ರಹ ದಳ(ಎನ್‌ಸಿಬಿ)  ಕೊನೆಗೂ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ.  ಎನ್ ಡಿ ಪಿಎಸ್ ನ ಹಲವಾರು ಸೆಕ್ಷನ್ ಗಳ ಅಡಿ ರಿಯಾ ಬಂಧನವಾಗಿದೆ.

ವೀರ ಸಾವರ್ಕರ್‌ ಹೆಸರಿನೊಂದಿಗೆ ಯಲಹಂಕ ಮೇಲ್ಸೇತುವೆ ಉದ್ಘಾಟನೆ...

ಬೆಂಗಳೂರಿನ ಯಲಹಂಕದಲ್ಲಿ ನಿರ್ಮಾಣವಾದ ವೀರ ಸಾವರ್ಕರ್ ಹೆಸರಿನ ಮೆಲ್ಸೇತುವೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ.

ಬ್ಯಾನ್ ಬಳಿಕ ಮೌನ ಮುರಿದ PUBG; ಚೀನಾ ಗೇಮಿಂಗ್ ಕಂಪನಿ ಜೊತೆ ಒಪ್ಪಂದ ರದ್ದು!...

ಕೇಂದ್ರ ಸರ್ಕಾರ ಚೀನಾ ಮೂಲದ ಹಾಗೂ ಚೀನಾ ಜೊತೆ ಸಂಪರ್ಕವಿರುವ ಆ್ಯಪ್‌ ಬ್ಯಾನ್ ಮಾಡುತ್ತಿದೆ. ಇತ್ತೀಚೆಗೆ ಜನಪ್ರಿಯ ಗೇಮಿಂಗ್ ಆ್ಯಪ್ PUBG ಬ್ಯಾನ್ ಮಾಡಿದೆ. ಹಲವು ದಿನಗಳ ಬಳಿಕ ಇದೀಗ PUBG ಕಾರ್ಪೋರೇಶನ್ ಈ ಕುರಿತು ಮಾತನಾಡಿದೆ. ಇಷ್ಟೇ ಅಲ್ಲ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಸಾಕ್ಷರತೆ: ಕೇರಳ ನಂ.1, ಡೆಲ್ಲಿ 2, ಆಂಧ್ರ ಪ್ರದೇಶ ಲಾಸ್ಟ್..!...

ಸೆಪ್ಟೆಂಬರ್ 08ನ್ನು ವಿಶ್ವಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲೇ ದೇಶದ ಸಾಕ್ಷರತೆ ಪ್ರಮಾಣ ಪ್ರಕಟಗೊಂಡಿದ್ದು, ಕೇರಳ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. 

36 ಗಂಟೆ ಬಳಿಕ ವಿಸ್ಮಯಕಾರಿ ರೀತಿಯಲ್ಲಿ ಸಮುದ್ರದಲ್ಲಿ ಪತ್ತೆಯಾದ ಮೀನುಗಾರ...

ಸಮುದ್ರದಲ್ಲಿ ಕಾಣೆಯಾಗಿ ಸುಮಾರು 36 ಗಂಟೆಗಳ ಬಳಿಕ ಮೀನುಗಾರರೋರ್ವರು ಸಮುದ್ರದಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಪತ್ತೆಯಾಗಿದ್ದಾರೆ.

ನನ್ನ ಗುರಿ ಸ್ಪಷ್ಟವಾಗಿದೆ ಎಂದ ವಿಜಯೇಂದ್ರ: ಏನಿರಬಹುದು ತಂತ್ರ..?...

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ತಮ್ಮ ಮೇಲೆ ಕೇಳಿ ಬಂದ ಭ್ರಷ್ಟಾಚಾರ ಆರೋಪಗಳಿಗೆ ಪ್ರತಿಕ್ರಿಯಿ  ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!