ಪೊಲೀಸ್ ಸಮವಸ್ತ್ರದ ಜತೆ ವೀರೇನ್ ಖನ್ನಾ ಮನೆಯಲ್ಲಿ ಸಿಕ್ಕ 'ಭಯಂಕರ' ವಸ್ತುಗಳು!

Published : Sep 08, 2020, 04:34 PM ISTUpdated : Sep 08, 2020, 08:42 PM IST
ಪೊಲೀಸ್ ಸಮವಸ್ತ್ರದ ಜತೆ ವೀರೇನ್ ಖನ್ನಾ ಮನೆಯಲ್ಲಿ ಸಿಕ್ಕ 'ಭಯಂಕರ' ವಸ್ತುಗಳು!

ಸಾರಾಂಶ

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು/ ಆರೋಪಿ ವೀರೇನ್ ಖನ್ನ ಮನೆ ಮೇಲೆ ದಾಳಿ/ ಸತತ 8 ಗಂಟೆಗಳ ಕಾಲ ಪರಿಶೀಲನನೆ/  ಇನ್ಸ್ ಪೆಕ್ಟರ್ ಮಹಮದ್ ಸಿರಾಜ್ ಮತ್ತು ಶ್ರೀಧರ್ ಪೂಜಾರ್ ನೇತೃತ್ವದಲ್ಲಿ ಸರ್ಚ್/ ಈ ವೇಳೆ ಗಾಂಜಾ ಸೇರಿದಂತೆ ಮಾದಕ ವಸ್ತು ಕೂಡ ಪತ್ತೆ

ಬೆಂಗಳೂರು(ಸೆ. 08)  ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ಪ್ರಕರಣ ನಟಿ ಸಂಜನಾ ಬಂಧನದವರೆಗೆ ಬಂದು ನಿಂತಿದೆ. ಪ್ರಕರಣದ ಪ್ರಮುಖ ಆರೋಪಿ ವಿರೇನ್ ಖನ್ನಾ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ ವೇಳೆ ಅನೇಕ ವಸ್ತುಗಳು ಪತ್ತೆಯಾಗಿವೆ.

"

ಸತತ ಎಂಟು ಗಂಟೆಗಳ ಕಾಲ ಮನೆ ಪರಿಶೀಲನೆ ಮಾಡಲಾಯಿತು.  ಇನ್ಸ್ ಪೆಕ್ಟರ್ ಮಹಮದ್ ಸಿರಾಜ್ ಮತ್ತು ಶ್ರೀಧರ್ ಪೂಜಾರ್ ನೇತೃತ್ವದಲ್ಲಿ ಸರ್ಚ್ ನಡೆಯಿತು.  ಈ ವೇಳೆ ಗಾಂಜಾ ಸೇರಿದಂತೆ ಮಾದಕ ವಸ್ತು ಕೂಡ ಪತ್ತೆಯಾದವು.

ಇತ್ತ ಸಂಜನಾ ಸಿಸಿಬಿ ವಶ, ಅತ್ತ ಪ್ರಭಾವಿ 'ಕೈ' ನಾಯಕನಿಗೆ ಶುರುವಾಯ್ತು ಢವಢವ..!

ಗಾಂಜಾದ ಸಿಗರೇಟ್ ತುಂಡು, ಗಾಂಜಾ ಸೇದುವ ಚಿಮಣಿ, ಸಿರೀಂಜ್ ನೀಡಲ್ ಪತ್ತೆಯಾಗಿವೆ. ವೀರೇನ್ ಖನ್ನಾಗೆ ಫಾರಿನ್ ನಂಟು ಇರುವುದು ಗೊತ್ತಾಗಿದ್ದು  7 ದೇಶದ ಕರನ್ಸಿ ಕೂಡ( 12ನೋಟು) ಸಿಕ್ಕಿದೆ. ಖನ್ನಾ ಲಾಕರ್ ನಲ್ಲಿ  ಒಂದು ಲ್ಯಾಪ್ ಟಾಪ್ ಮತ್ತು ಎರಡು ಪೆನ್ ಡ್ರೈವ್ ಸಹ ಇತ್ತು. ಹಲವಾರು ಇವೆಂಟ್ ಆರ್ಗನೈಸ್ ದಾಖಲೆಗಳು ಸೀಜ್ ಮಾಡಲಾಗಿದೆ. 

ಶೋಕಿಲಾಲ ಖನ್ನಾಗೂ, ರಾಗಿಣಿಗೂ ಏನ್ ಸಂಬಂಧ?

ಎಲ್ಲದಕ್ಕಿಂತ ವಿಚಿತ್ರ ಎಂದರೆ  ಎರಡು ಜೊತೆ ಪೊಲೀಸ್ ಸಮವಸ್ತ್ರ ವಶಕ್ಕೆ ಪಡೆಯಲಾಗಿದೆ. ಸಮವಸ್ತ್ರದಲ್ಲಿ ಪೊಲೀಸ್ ಎಂಬ್ಲಾಮ್ ಕೂಡ  ಇತ್ತು. ಕರ್ನಾಟಕ ಸ್ಟೇಟ್ ಪೊಲೀಸ್ ಚಿಹ್ಹೆ ಇದ್ದ ಖಾಕಿ ಬೆಲ್ಟ್ ಮತ್ತು ಕ್ಯಾಪ್ ಸಿಕ್ಕಿದೆ. 

ಫ್ಯಾನ್ಸಿ ಡ್ರೆಸ್ ಗೆ ಪೊಲೀಸ್ ಎಂಬ್ಲಮ್ ಬಳಕೆ ಮಾಡುವಂತೆ ಇಲ್ಲ. ಒಂದು ವೇಳೆ ಮಾಡಿದ್ರೂ ಅದಕ್ಕೆ ಪೊಲೀಸ್ ಪರ್ಮಿಶನ್ ಬೇಕು. ಯಾವ ಕಾರಣಕ್ಕೆ  ಯೂನಿಫಾರ್ಮ್ ಯೂಸ್ ಮಾಡ್ತಾರೆ ಅನ್ನುವುದನ್ನು ತಿಳಿಸಿರಬೇಕು. ಈ ಬಗ್ಗೆ  ಮತ್ತೊಂದು ಪ್ರಕರಣ ದಾಖಲಿಸುವ ಸಾಧ್ಯತೆಗಳು ಹೆಚ್ಚಾಗಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್