ಅನುಶ್ರೀಗೂ ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಡ್ಗರ್ಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಧರ್ಮಸ್ಥಳ, ಕುಕ್ಕೆಯಲ್ಲಿ ಭಕ್ತರಿಗೆ ವಾರಾಂತ್ಯ ನಿರ್ಬಂಧ ವಿಧಿಸಲಾಗಿದೆ. ಇತ್ತ ಕಲಬುರಗಿಯಲ್ಲಿ ಮೈತ್ರಿಗೆ ಮುಂದಾಗಿರುವ ಬಿಜೆಪಿಗೆ ಹಲವು ಸವಾಲು ಎದುರಾಗಿದೆ. ಧವನ್ ವೈವಾಹಿಕ ಜೀವನಕ್ಕೆ ಡಿವೋರ್ಸ್, ಅರಸ್ಟ್ ತ್ರಿಶಾ ಟ್ರೆಂಡಿಂಗ್ ಸೇರಿದಂತೆ ಸೆಪ್ಟೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಅನುಶ್ರೀ ನಶೆ ನಂಟಿಗೆ ಸ್ಫೋಟಕ ತಿರುವು
undefined
ಅನುಶ್ರೀ ನಶೆ ನಂಟಿಗೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಅನುಶ್ರೀಗೂ ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಎಂದು ಕೊರಿಯೋಗ್ರಾಫರ್ ಕಿಶೋರ್ ಹೇಳಿದ್ದಾರೆ.
ಜನರ ಜೀವದ ಜತೆ ಕೇರಳ ಚೆಲ್ಲಾಟ: ಎಲ್ಲಾ ಕರ್ಫ್ಯೂ ವಾಪಸ್
ನಿತ್ಯವೂ 30000ದಷ್ಟುಕೊರೋನಾ ಕೇಸು, ಹೊಸದಾಗಿ ನಿಪಾ ವೈರಸ್ ಸೋಂಕು ಪತ್ತೆ ನಡುವೆಯೂ ಕೇರಳ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಕಠಿಣ ನಿರ್ಬಂಧಗಳನ್ನು ತೆರವು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಪ್ರಕಟಣೆ ಹೊರಡಿಸಿದ್ದಾರೆ
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ವೆಂಕಟೇಶ್ ಪ್ರಸಾದ್, ದೇವೇಂದ್ರ ಝಝಾರಿಯಾ ನೇಮಕ
ಮೂರು ಬಾರಿ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ದೇವೇಂದ್ರ ಝಝಾರಿಯಾ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಮಾಜಿ ವಿಶ್ವಚಾಂಪಿಯನ್ ಬಾಕ್ಸರ್ ಎಲ್. ಸರಿತಾ ದೇವಿ 2021ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಗಬ್ಬರ್ ಸಿಂಗ್ ಡೈವರ್ಸ್: ಮುರಿದು ಬಿದ್ದ ಶಿಖರ್ ಧವನ್-ಆಯೆಶಾ ದಾಂಪತ್ಯ ಜೀವನ..!
ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಹಾಗೂ ಆಯೆಶಾ ಮುಖರ್ಜಿ ವೈವಾಹಿಕ ಜೀವನಕ್ಕೆ ತೆರೆಬಿದ್ದಿದೆ. ಕಳೆದ ಎಂಟು ವರ್ಷಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇದೀಗ ಡೈವರ್ಸ್ ಎನ್ನುವ ಚೈನ್ ಬ್ರೇಕರ್ ಮೊರೆ ಹೋಗಿದ್ದಾರೆ.
#ArrestTrisha ಟ್ರೆಂಡಿಂಗ್ ಕಾರಣದಿಂದ ಸಂಕಷ್ಟದಲ್ಲಿ ಐಶ್ವರ್ಯಾ ರೈ ಸಿನಿಮಾ!
ಬಾಲಿವುಡ್ ದಿವಾ ಐಶ್ವರ್ಯಾ ರೈ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ಮಣಿರತ್ನಂ ಅವರ ಮುಂದಿನ ತಮಿಳು ಸಿನಿಮಾ ಚಿತ್ರ ಪೊನ್ನಿಯನ್ ಸೆಲ್ವನ್‌ನಲ್ಲಿ ನಟಿಸಲಿದ್ದಾರೆ. ಈ ನಡುವೆ ಇಂಟರ್‌ನೆಟ್‌ನಲ್ಲಿ 'ತ್ರಿಶ್ರಾ ಆರೆಸ್ಟ್' ಎಂಬ ಟ್ರೆಂಡ್ ಕಾಣಿಸಿಕೊಂಡಿದೆ. ಇದರಿಂದ ಪೊನ್ನಿಯನ್ ಸೆಲ್ವನ್ ಸಿನಿಮಾ ತೊಂದರೆಗೆ ಸಿಲುಕಿದೆ.
ಧರ್ಮಸ್ಥಳ, ಕುಕ್ಕೆಯಲ್ಲಿ ಭಕ್ತರಿಗೆ ವಾರಾಂತ್ಯ ನಿರ್ಬಂಧ
ಕೋವಿಡ್ ಹಿನ್ನೆಲೆಯಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರದಿಂದ ಶುಕ್ರವಾರವರೆಗೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯ(ಶನಿವಾರ, ಭಾನುವಾರ)ದ ದಿನ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಭಾರತಕ್ಕೂ ಶೀಘ್ರ ಎಲಾನ್ ಮಸ್ಕ್ ‘ಸ್ಟಾರ್‌ಲಿಂಕ್’ ಇಂಟರ್ನೆಟ್?
ಉಪಗ್ರಹಗಳ ಗುಚ್ಚದ ಮೂಲಕ ಕುಗ್ರಾಮ ಅಥವಾ ಕಾಡಿನಂತಹ ಪ್ರದೇಶದಲ್ಲೂ ಅತಿವೇಗದ ಇಂಟರ್ನೆಟ್ ಸೇವೆ ನೀಡುವ ಸ್ಟಾರ್‌ಲಿಂಕ್ ಕಂಪನಿ ಶೀಘ್ರದಲ್ಲೇ ಭಾರತದಲ್ಲೂ ತನ್ನ ಸೇವೆ ಆರಂಭಿಸುವ ಸಾಧ್ಯತೆಯಿದೆ.
ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಬೆಂಗಳೂರು ಮೂಲದ ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಇಂದು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಎಸ್-1 ಮತ್ತು ಎಸ್ 1 ಪ್ರೋ ಶ್ರೇಣಿಯ ಸ್ಕೂಟರ್ ಅನ್ನು ಓಲಾ ಮಾರುಕಟ್ಟೆಗೆ ಪರಿಚಯಿಸಿದೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾಗಿದೆ. ದೇವೇಗೌಡರ ಮನವೊಲಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.