ನಾಸ್ತಿಕ ಸರ್ಕಾರವಿದ್ದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿ

Published : Oct 21, 2018, 08:37 PM IST
ನಾಸ್ತಿಕ ಸರ್ಕಾರವಿದ್ದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿ

ಸಾರಾಂಶ

ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಮೋದ್ ಮುತಾಲಿಕ್  ಹೇಳಿದ್ದಾರೆ.

ಕೋಲಾರ[ಅ.21]  ಶಬರಿಮಲೆ ತೀರ್ಮಾನವನ್ನು ನಾವು ಒಪ್ಪಲ್ಲ. ಕೋಟ್೯ಗಳು ಧಾರ್ಮಿಕ ಕಾರ್ಯಗಳ ನಡುವೆ ಮೂಗು ತೂರಿಸೋದು ಸರಿಯಲ್ಲ. ಕೋರ್ಟ್ ಧರ್ಮಶಾಸ್ತ್ರದ ಪ್ರಕಾರ ಆಚಾರಗಳು ನಡೆಯ ಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುತಾಲಿಕ್, ವೈಜ್ಞಾನಿಕವಾಗಿ ಆ ಆಚರಣೆ ಮೂಡಿ ಬಂದಿದೆ. ಆ ಬಗ್ಗೆ ಸಮಾನತೆ ಹೆಸರಿನಲ್ಲಿ ಕಾನೂನು ಜಾರಿಗೊಳಿಸಿದು ಸರಿಯಲ್ಲ. ಕೇರಳದಲ್ಲಿ ಕೆಲ ದೇವಸ್ಥಾನ ಪುರುಷರಿಗೆ ಪ್ರವೇಶವಿಲ್ಲ. ಕೇರಳ ಸರ್ಕಾರ ನಾಸ್ತಿಕ ಸರ್ಕಾರ ಎಂದು ದೂರಿದರು.

ಭಕ್ತರ ಮೇಲೆ ಲಾಠಿ ಚಾಚ್೯ ಸರಿಯೇ ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ.  ಕೇರಳದಲ್ಲಿ ರಾಷ್ಟ್ರಪತಿ ಆಡಳಿತ ತನ್ನಿ. ಪ್ರವೇಶ ಮಾಡಲು ಮುಂದಾದ ಮಹಿಳೆಯರ ಚಾರಿತ್ರ್ಯ ಮೊದಲು ತಿಳಿಯಬೇಕಿದೆ. ಅದು ಪೊಲೀಸರ ಡ್ರಸ್ ಹಾಕಿ ಕೊಂಡಿದ್ದು ನಾಚಿಕೆ ಗೇಡಿನ ಸಂಗತಿ ಎಂದರು.

ಇಂಥ ಘಟನೆಗಳನ್ನು ವಿರೋಧಿಸಿ ಇದೇ ತಿಂಗಳ 28ರಂದು ಐದು ಸಾವಿರಕ್ಕೂ ಹೆಚ್ಚು ಮಂದಿಯಿಂದ ದತ್ತ ಮಾಲೆ ಪೀಠದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದೇವೆ ಎಂದು ಮುತಾಲಿಕ್ ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ