
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಯತ್ನಿಸುವ ಮೂಲಕ ಹಿಂದೂ ಧರ್ಮದ ನಂಬಿಕೆಗಳಿಗೆ ಧಕ್ಕೆ ತರಲು ಹೊರಟಿದ್ದ ರೆಹನಾ ಫಾತಿಮಾಗೆ ಇಸ್ಲಾಂ ಧರ್ಮದಿಂದ ಉಚ್ಚಾಟಿಸಲಾಗಿದೆ.
ರೆಹನಾ ಫಾತಿಮಾ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರವೇಶಕ್ಕೆ ಯತ್ನಿಸಿ, ಕೇರಳ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಈ ಬಗ್ಗೆ ಖುದ್ದು ಕೇರಳ ಮುಸ್ಲಿ ಜಮಾ-ಅಥ್ ಕೌನ್ಸಿಲ್ ಸಹ ರೆಹನಾ ವಿರುದ್ಧ ಕ್ರಮಕೈಗೊಳ್ಳುವ ತೀರ್ಮಾನ ಕೈಗೊಂಡಿತ್ತು.
ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಇನ್ನೊಂದು ರೂಪವಿದು
ಅದರಂತೆ ಫಾತಿಮಾ ಹಾಗು ಕುಟುಂಬವನ್ನು ಧರ್ಮದಿಂದ ಹೊರಹಾಕಲು ಕೇರಳ ಮುಸ್ಲೀಂ ಜಮಾತ್ ಕೌನ್ಸಿಲ್, ಎರ್ನಾಕುಲಂ ಕೇಂದ್ರ ಮಸ್ಲೀಂ ಜಮಾತ್ ಗೆ ನಿರ್ದೇಶನ ನೀಡಿದೆ,
ಶಬರಿಮಲೆ ಪ್ರವೇಶಕ್ಕೆ ತೆರಳಿದ್ದ ಹಾಟ್ ಹಾಟ್ ಬೆಡಗಿ ಫೋಟೋ
ನಿದೇರ್ಶನದಂತೆ ಎರ್ನಾಕುಲಂ ಕೇಂದ್ರ ಮಸ್ಲೀಂ ಜಮಾತ್ ರೆಹನಾ ಫಾತಿಮಾ ಹಾಗೂ ಕುಟುಂಬವನ್ನು ಇಸ್ಲಾಂ ಧರ್ಮದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಮಹಲ್ಲು ಸದಸ್ಯತ್ವದಿಂದಲೂ ವಜಾ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ