ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದ ರಮೇಶ್ ಜಾರಕಿಹೊಳಿ

By Web Desk  |  First Published Oct 21, 2018, 8:17 PM IST

ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಗುಡುಗಿದ್ದಾರೆ. ಏನೇನು ಮಾತನಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.


ಬಳ್ಳಾರಿ, [ಅ.21]: ಸಚಿವ ಡಿ.ಕೆ.ಶಿವಕುಮಾರ್​​ಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಅಕ್ಷೇಪ ಇದ್ದರೆ ಕ್ಯಾಬಿನೆಟ್ ಚರ್ಚೆ ವೇಳೆ ಹೇಳಬೇಕಿತ್ತು. ಈ ರೀತಿ ಬಹಿರಂಗ ಕ್ಷಮೆ ಕೇಳುವ ಅಗತ್ಯವೇನಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ಇಂದು [ಭಾನುವಾರ] ಕೂಡ್ಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಶಿವಕುಮಾರ್ ಶೋ ಮಾಡೋದು ಬಿಟ್ಟು ಕೆಲಸ ಮಾಡಿದ್ರೆ, ಒಳಿತು. ಅವರ ಹಿಂಬಾಲಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವಾಗ ಎಲ್ಲಿಗೆ ಹೋಗಿದ್ದರು. 

Latest Videos

undefined

ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಗರಂ : ಯಾರ ಪರವೂ ಇಲ್ಲ ಎಂದ ಸಚಿವ

ಎಲ್ಲ ಸಭೆಗಳಲ್ಲಿ ಮಾತನಾಡುತ್ತಿದ್ರೂ ಅದನ್ನು ಏಕೆ ತಡೆಯಲಿಲ್ಲ? ಕ್ಯಾಬಿನೆಟ್​ನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಮತ್ತು ಎಸ್.ಎಸ್. ಮಲ್ಲಿಕಾರ್ಜುನ ಮಾತ್ರ ಪರ-ವಿರೋಧ ಚರ್ಚೆ ಮಾಡಿದ್ದರು. ಪ್ರತ್ಯೇಕ ಧರ್ಮ ಬೇಕು ಎಂದು ಹೇಳಿದ್ದನ್ನು ಪರಿಗಣಿಸಿದ್ದೇವೆ ಅಷ್ಟೇ ಎಂದು ಸಚಿವ ಶಿವಕುಮಾರ್​ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್​ಗೆ ನಮ್ಮ ಬೆಂಬಲವಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ನನಗೆ ಕೂಡ್ಲಿಗಿ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ‌ನಿಭಾಯಿಸುತ್ತೇನೆ. ಎಂದು ಹೇಳಿದರು.

click me!