'ರಾವಣನ ಲಂಕೆಯಲ್ಲಿಯೇ ಬುರ್ಖಾ ಬ್ಯಾನ್ ಆಗೋದಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕಿಲ್ಲ?'

By Web DeskFirst Published May 1, 2019, 4:09 PM IST
Highlights

ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಂಡು ಲೋಕ ಸಮರಕ್ಕೆ ಧುಮುಕಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬುರ್ಖಾ ವಿಚಾರವನ್ನು ಎತ್ತಿಕೊಂಡಿದ್ದು ಅದಕ್ಕೆ ರಾಮಾಯಣದ ಲಿಂಕ್ ನೀಡಿದೆ.

ಮುಂಬೈ(ಮಾ. 01)  ಶಿವಸೇನೆ ತನ್ನಮುಖವಾಣಿ ಸಾಮ್ನಾದಲ್ಲಿ ಈ ಸಾರಿ ಬುರ್ಖಾ ನಿಷೇಧದ ವಿಚಾರವನ್ನು ಬರೆದುಕೊಂಡಿದೆ.  'ರಾವಣನ ರಾಜ್ಯ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಮಾಡಲು ಸಾಧ್ಯವಿದ್ದರೆ ರಾಮ ರಾಜ್ಯದ ಅಯೋಧ್ಯೆಯಲ್ಲಿ ಯಾವಾಗ?  ಎಂದು ಪ್ರಶ್ನೆ ಮಾಡಿದೆ. ಶ್ರೀಲಂಕಾದಲ್ಲಿ ತೆಗೆದುಕೊಂಡ ಕ್ರಮವನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದು ಶಿವಸೇನೆ ಹೇಳಿದೆ.

ಸರಣಿ ಬಾಂಬ್ ಬ್ಲಾಸ್ಟ್ ಗಳ ನಂತರ ಶ್ರೀಲಂಕಾದಲ್ಲಿ ಬುರ್ಖಾ ಸೇರಿದಂತೆ ಮುಖವನ್ನು ಕವರ್ ಮಾಡಿಕೊಳ್ಳುವಂತಹ ವೇಷಭೂಷಣವನ್ನು ನಿಷೇಧ ಮಾಡಲಾಗಿದೆ. 

ಲಂಕಾ ದಾಳಿ ಹಿಂದಿನ ಕಾರಣ ಬಹಿರಂಗ

ಈ ಮೊದಲು ಬಿಜೆಪಿಯೊಂದಿಗೆ ಸ್ನೇಹ ಕಳೆದುಕೊಂಡಿದ್ದ ಶಿವಸೇನೆ ನಂತರ ಲೋಕಸಮರದ ವೇಳೆ ಮೈತ್ರಿ ಮಾಡಿಕೊಂಡಿತು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾದದಲ್ಲಿ ಬುರ್ಖಾ ನಿಷೇಧ ಮಾಡಲು ಸಾಧ್ಯವಿದೆ.  ಭಾರತದಲ್ಲಿಯೂ ಆಗಬೇಕು ಆಗ ಮಾತ್ರ ದೇಶದ ಭದ್ರತೆಗೆ ಇನ್ನು ಹೆಚ್ಚಿನ ಒತ್ತು ನೀಡಲು ಸಾಧ್ಯವಿದೆ ಎಂದು ಹೇಳಿದೆ.

click me!