
ಹಾವೇರಿ(ಆ.19): ಇದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಯವರ ಖಾಸಾ ಸಹೋದರಿಯ ದರ್ಪ. ವ್ಯಕ್ತಿಯ ಕೊರಳಪಟ್ಟಿ ಹಿಡಿದು ಅವಾಚ್ಯ ಹಾಗೂ ಅಮಾನುಷವಾಗಿ ವರ್ತಿಸುತ್ತಿರುವವರ ಹೆಸರು ಪ್ರೇಮಾ. ರಾಣೆಬೆನ್ನೂರಿನ ಬಿಜೆಎಸ್ ಎಸ್ ಖಾಸಗಿ ಕಾಲೇಜು ಗುಮಾಸ್ತೆಯಾಗಿದ್ದಾರೆ.
ಅಂದಹಾಗೆ, ಈ ಕಾಲೇಜಿನ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮದ್ಯೆ ವ್ಯಾಜ್ಯವಿದೆ. ಅದೀಗ ಕೋರ್ಟ್ ಅಂಗಳದಲ್ಲಿದೆ. ಸದ್ಯ ಕಾಲೇಜಿನ ಆಡಳಿತ, ಸಚಿವ ರುದ್ರಪ್ಪ ಲಮಾಣಿಯವರ ಎದುರುದಾರರ ಕೈಯಲ್ಲಿದೆ. ಕಳೆದ ವಾರ ಈ ಆಡಳಿತ ಮಂಡಳಿಯ ಸಭೆ ಕರೆಯಲಾಗಿತ್ತು. ಅದರಲ್ಲಿ ಸಂಸ್ಥೆಯ ಸೆಕ್ರೆಟರಿ ಎಂ.ಜೆ.ಪಾಟೀಲ್ ತಮ್ಮ ಆಡಳಿತ ಸಮಿತಿಯ ಸಭೆ ಕರೆದಿದ್ದರು. ಇದಕ್ಕೂ ಸಹ ಸದಸ್ಯ ಗೋಪಾಲ್ ಲಮಾಣಿಯವರನ್ನೂ ಸಭೆಗೆ ಕರೆಯಲಾಗಿತ್ತು.
ಈ ಹೊತ್ತಲ್ಲಿ ಸಭೆ ನಡೆಯುತ್ತಿರುವಾಗಲೆ ಸಚಿವ ರುದ್ರಪ್ಪ ಲಮಾಣಿಯವರ ಸಹೋದರಿ ಪ್ರೇಮಾ ನಾರಾಯಣ್ ಏಕಾಏಕಿ ಬಂದು ಗೋಪಾಲ್'ರ ಕೊರಳಪಟ್ಟಿ ಹಿಡಿದು ಹೊರಹಾಕಲು ಯತ್ನಿಸಿದ್ದಾರೆ. ಆಡಳಿತ ಸಮಿತಿ ಸರ್ವ ಸದಸ್ಯರ ಎದುರೇ ಈ ಘಟನೆ ನಡೆದಿದೆ.
ಅವಾಚ್ಯವಾಗಿ ಬೈದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಗೋಪಾಲ್ ಲಮಾಣಿ ರಾಣೆಬೆನ್ನೂರು ಟೌನ್ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಗೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಇತ್ತ ಸಚಿವ ರುದ್ರಪ್ಪ ಲಮಾಣಿಯವರ ಸಹೋದರಿ ಪ್ರೇಮಾರವರೂ ಸಹ ಸುಮಾರು ಏಳು ಜನ್ರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.