(ವಿಡಿಯೋ) ಬಿಎಂಟಿಸಿ ಗುದ್ದಿ 15 ಅಡಿ ದೂರ ಬಿದ್ದರೂ ಬದುಕುಳಿದ !

By Suvarna Web DeskFirst Published Aug 18, 2017, 11:46 PM IST
Highlights

ಅಪಘಾತದ ಬಳಿಕ ಕನಿಷ್ಠ ಪಕ್ಷ ಬೈಕ್ ಸವಾರನ ಬಗ್ಗೆ ಮಾನವೀಯತೆಯನ್ನ ತೋರದೆ, ಬಸ್ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಓಡಿ ಹೋಗಿರೊ ದೃಶ್ಯ ಕೂಡ ಸೆರೆಯಾಗಿದೆ. ನಂತರ ಸ್ಥಳೀಯ ಜನರು ಗಾಯಾಳು ರಮೇಶನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬೆಂಗಳೂರು(ಆ.18): ರಸ್ತೆಯಲ್ಲಿ ಬೈಕ್ ಸವಾರರು ಸಲ್ಪ ಯಾಮಾರಿದ್ರೂ ಸಾವು ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಎಂಬಂತೆ ಡಿವೈಡರ್ ಪಾಸ್ ಮಾಡುವ ವೇಳೆ ಬೈಕ್ ಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಘಟನೆ ನಡೆದಿರೋದು ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ  ನಡೆದಿದೆ. ಆದ್ರೆ ಈ ಭಯಾನಕ ಅಪಘಾತ ಯಾವ ರೀತಿಯಲ್ಲಿ ನಡೆದಿದೆ ಎಂಬುದನ್ನ ನೋಡಿದ್ರೆ, ಬೈಕ್ ಸವಾರ ಬದುಕೋದೆ ಕಷ್ಟ. ಇನ್ನೂ ಈ ಅಪಘಾತ ನಡೆದ ಸ್ಥಳದ ಎಲ್ಲಾ ದೃಶ್ಯಗಳು ಸಿಸಿಟಿವಿಯ ಕ್ಯಾಮರದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ ಗೆ ಗುದ್ದಿದ ಪರಿಣಾಮ, ಬೈಕ್ ಬಸ್ ಅಡಿ ಸಿಲುಕಿದ್ರೆ, ಸವಾರ ರಮೇಶ್ ಬರೋಬ್ಬರಿ 15 ಅಡಿ ದೂರಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನೂ ಸವಾರ ರಮೇಶ್ ವೃತ್ತಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದು, ಮನೆಯಿಂದ ಟೈಲರ್ ಅಂಗಡಿಗೆ ತೆರಳುವಾಗ ಈ ಅಪಘಾತ ನಡೆದಿದೆ. ಸಧ್ಯ ಗಾಯಾಳು ರಮೇಶ್ ಕೋಮಾ ಸ್ಥಿತಿಯಲ್ಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಕನಿಷ್ಠ ಪಕ್ಷ ಬೈಕ್ ಸವಾರನ ಬಗ್ಗೆ ಮಾನವೀಯತೆಯನ್ನ ತೋರದೆ, ಬಸ್ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಓಡಿ ಹೋಗಿರೊ ದೃಶ್ಯ ಕೂಡ ಸೆರೆಯಾಗಿದೆ. ನಂತರ ಸ್ಥಳೀಯ ಜನರು ಗಾಯಾಳು ರಮೇಶನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಘಟನೆ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!