ಮೋದಿ ಅಮಿತ್ ಶಾ ನಂತರದ ಸ್ಥಾನಕ್ಕೆ ಬಿ ಎಲ್ ಸಂತೋಷ್; ನೇಮಕದ ಹಿಂದಿದೆ ಈ ಕಾರಣ

Published : Jul 16, 2019, 02:17 PM ISTUpdated : Jul 16, 2019, 02:19 PM IST
ಮೋದಿ ಅಮಿತ್ ಶಾ ನಂತರದ ಸ್ಥಾನಕ್ಕೆ ಬಿ ಎಲ್ ಸಂತೋಷ್; ನೇಮಕದ ಹಿಂದಿದೆ ಈ ಕಾರಣ

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಪ್ರಸಕ್ತ ನಡೆಯುತ್ತಿರುವ ಹಲವು ಬೆಳವಣಿಗೆಗಳ ಮಧ್ಯೆಯೇ ರಾಜ್ಯದವರೇ ಆಗಿರುವ ಬಿ.ಎಲ್‌. ಸಂತೋಷ್‌ ಅವರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಲ್ಲಿ ಕರ್ನಾಟಕದ ಸೀಮಿತತೆ ದಾಟಿ ದೆಹಲಿಯಲ್ಲಿ ಇಡೀ ದೇಶದ ನಿರ್ಣಯ ಪ್ರಕ್ರಿಯೆವರೆಗೆ ಬಂದವರು ಕೆಲವೇ ಜನ. ಸಂಘದಲ್ಲಿ ಹೊ.ವೇ. ಶೇಷಾದ್ರಿ ಮತ್ತು ಈಗ ದತ್ತಾತ್ರೇಯ ಹೊಸಬಾಳೆ.

ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ ವಾದ; ಒಂದು ದಿನದ ಫೀಸ್ ಮಾತ್ರ ಬಲು ದುಬಾರಿ!

ಇನ್ನು ಬಿಜೆಪಿಯಲ್ಲಿ ಜಗನ್ನಾಥ ರಾವ್‌ ಜೋಶಿ, ಅನಂತಕುಮಾರ್‌ ಮತ್ತು ಈಗ ಹೊಸ ಸೇರ್ಪಡೆ ಬಿ.ಎಲ್ ಸಂತೋಷ್‌. ಸಂಘದ ಪ್ರಚಾರಕ ಆಗಿಯೇ ಬಿಜೆಪಿಯಲ್ಲಿ ಇರುವ ಸಂತೋಷ್‌, ಏಕ್‌ದಂ ಮೋದಿ, ಶಾ ನಂತರದ ಸ್ಥಾನಕ್ಕೆ ಹೋಗಿ ತಲುಪಿದ್ದಾರೆ. ಈಗ ಸಂತೋಷ್‌ ಒಂದು ರೀತಿ ಬಿಜೆಪಿ ಹೈಕಮಾಂಡ್‌ ಎಂದು ಕರೆಯಬಹುದು.

ರಾಮ್ ಲಾಲ್ ಸಂಘಕ್ಕೆ ವಾಪಸ್ಸಾದ ನಂತರ ಆ ಜಾಗಕ್ಕೆ ಸತೀಶ್‌ ವೇಲಂಕರ್‌, ಸುನೀಲ್ ಅಂಬೇಕರ್‌ ಎಂಬ ಮರಾಠಿ ಪ್ರಚಾರಕರ ಹೆಸರು ಇದ್ದವಾದರೂ ಭಾಗವತ್‌, ಭಯ್ಯಾಜಿ, ಜೋಶಿ, ಹೊಸಬಾಳೆ, ಕೃಷ್ಣ ಗೋಪಾಲ್ ಇವರೆಲ್ಲ ಸೇರಿ ಆಯ್ಕೆ ಮಾಡಿದ್ದು ಪ್ರಖರ ಹಿಂದುವಾದಿ, ಇಂಗ್ಲಿಷ್‌ ಚೆನ್ನಾಗಿ ಬಲ್ಲ, ತಂತ್ರಜ್ಞಾನ ಉಪಯೋಗಿಸುವ ಸಂಘ ನಿಷ್ಠ ಸಂತೋಷ್‌ರನ್ನು.

ಅತೃಪ್ತ ಶಾಸಕರ ರಾಜೀನಾಮೆ; ಶೋ ಕೊಟ್ರಾ ಡಿಕೆಶಿ?

ಸಂತೋಷ್‌ ಒಬ್ಬ ಟಾಸ್ಕ್‌ ಮಾಸ್ಟರ್‌, ಕೆಲಸಗಾರ, ಬದ್ಧತೆ ಇರುವ ಪರಿಶ್ರಮಿ. ಆದರೆ, ತಾನು ಹೇಳಿದ್ದೇ ಸರಿ ಎಂಬ ಹಟಮಾರಿ ಸ್ವಭಾವವೇ ಸಮಸ್ಯೆ ಎಂದು ಕರ್ನಾಟಕದಲ್ಲಿ ಸಂಘ ಮತ್ತು ಬಿಜೆಪಿ ಎರಡರಲ್ಲೂ  ಭಿಪ್ರಾಯವಿದೆ. ಆದರೆ ದಿಲ್ಲಿಯಲ್ಲಿ ಸಂತೋಷ್‌ ಅವರಿಗೆ ಸಂಘ ಮತ್ತು ಬಿಜೆಪಿ ನಡುವೆ ಸಮನ್ವಯ ಕಾಪಾಡುವ ಕೆಲಸ ಕೊಡಲಾಗಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌