
ಚಿಕ್ಕಬಳ್ಳಾಪುರ (ಜೂ.15) : ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ದಿನವಷ್ಟೇ ಕಳೆದಿದ್ದು, ಇದೇ ವೇಳೆ ಸಚಿವರೋರ್ವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೈ ಕಮಾಂಡ್ ಎಲ್ಲರಿಗೂ ಕೂಡ ಟೈಂ ಬಾಂಡ್ ನಿಗದಿ ಮಾಡಿದೆ. ನಾವೆಲ್ಲರೂ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಸದ್ಯ ಸಂಪುಟದಲ್ಲಿ ಅವಕಾಶ ವಂಚಿತ ಅಸಮಾಧಾನಿತರೆಲ್ಲರಿಗೂ ಮಂತ್ರಿ ಭಾಗ್ಯ ಸಿಗಲಿದೆ. ಪಕ್ಷದಲ್ಲಿ ಕೆಲವರಿಗೆ ತೊಂದರೆಯಾಗಿರುವುದು ನಿಜ. ನಮ್ಮೆಲ್ಲರ ಒಳಿತಿಗಾಗಿ ಅದನ್ನು ಸಹಿಸಿಕೊಳ್ಳಬೇಕು ಎಂದರು.
ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ ಗೆ ಕಾಯುತ್ತಿದ್ದಾರೆ ಇವರು?
ಇನ್ನು ಮಂತ್ರಿ ಪಟ್ಟ ಸಿಗದೆ ಅಸಮಾಧಾನಗೊಂಡ ಬಿ.ಸಿ.ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಹಾವೇರಿ ಭಾಗದಲ್ಲಿ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಹತಾಶ ಮನೋಭಾವದಿಂದ ಬಿಸಿ ಪಾಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದರು.
ಸಂಪುಟ ಸೇರಿದ ಶಂಕರ್, ನಾಗೇಶ್‌ಗೆ ಯಾವ ಖಾತೆ?
ಇನ್ನು ಈ ಬಾರಿ ಸಂಪುಟ ವಿಸ್ತರಣೆ ವೇಳೆ ಪಕ್ಷೇತರರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದ್ದು, ಪಕ್ಷೇತರರನ್ನು ತೆಗೆದುಕೊಂಡರೆ ಸರ್ಕಾರ ಭದ್ರವಾಗಿರಲಿದೆ ಎನ್ನುವ ಭ್ರಮೆ ಬೇಡ ಎಂದು ಶಿವಶಂಕರ್ ರೆಡ್ಡಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.